IND vs AUS : ಬ್ರಿಸ್ಬೇನ್‍ನಲ್ಲಿಂದು ಮೊದಲ ಟಿ-20 ಪಂದ್ಯ – ಆಸೀಸ್ ಮಣಿಸುವುದೇ ಕೊಹ್ಲಿಪಡೆ..?

ಬ್ರಿಸ್ಬೇನ್ ನ ಗಬ್ಬಾ ಅಂಗಳದಲ್ಲಿ ಬುಧವಾರ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಮೊದಲ ಟಿ-20 ಪಂದ್ಯ ನಡೆಯಲಿದೆ. ಕಾಂಗರೂ ನಾಡಿನಲ್ಲಿ ಕೊಹ್ಲಿ ಬಳಗಕ್ಕೆ ಆ್ಯರನ್ ಫಿಂಚ್ ನೇತೃತ್ವದ ಆಸ್ಟ್ರೇಲಿಯಾ ತಂಡದ ಸವಾಲು ಎದುರಾಗಲಿದ್ದು, ಉಭಯ ತಂಡಗಳು ಗೆಲುವಿನ ಶುಭಾರಂಭ ಮಾಡುವ ತವಕದಲ್ಲಿವೆ.

ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ನಿಷೇಧಕ್ಕೊಳಗಾಗಿರುವ ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್ ಅನುಪಸ್ಥಿತಿಯಿಂದ ಆಸ್ಟ್ರೇಲಿಯಾ ತಂಡಕ್ಕೆ ಕೊಂಚ ಹಿನ್ನಡೆಯಾಗಿದ್ದು, ಈ ಪರಿಸ್ಥಿತಿಯ ಲಾಭವನ್ನು ಪಡೆದುಕೊಳ್ಳಲು ಕೊಹ್ಲಿಪಡೆ ಯತ್ನಿಸಲಿದೆ.

2016ರಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ವೇಳೆ ಟೀಮ್ ಇಂಡಿಯಾ ಟಿ-20 ಸರಣಿಯಲ್ಲಿ 3-0 ಕ್ಲೀನ್ ಸ್ವೀಪ್ ಸಾಧನೆ ಮಾಡಿತ್ತು.

Leave a Reply

Your email address will not be published.

Social Media Auto Publish Powered By : XYZScripts.com