ರಾಮನಗರ : ಸಿಎಂ ತವರಿನಲ್ಲಿಯೇ ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ

ಸಾಲಬಾಧೆ ತಾಳಲಾರದೆ ಕ್ರೀಮಿನಾಶಕ ಸೇವಿಸಿ ರೈತ ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಅರೆಕಟ್ಟೆದೊಡ್ಡಿಯಲ್ಲಿ ನಡೆದ ದಿದೆ. ವಿಷಸೇವಿಸಿ ಮೃತಪಟ್ಟ ರೈತನನ್ನು ಮಾದೇಗೌಡ (40) ಎಂದು ಗುರುತಿಸಲಾಗಿದ್ದು ಈತ ವಿವಿಧ ಬ್ಯಾಂಕುಗಳಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ಹಣವನ್ನು ಸಾಲ ಪಡೆದಿದ್ದಾನೆ.

ಜೊತೆಗೆ ತನ್ನ ಮನೆಯಲ್ಲಿದ್ದ ಲಕ್ಷ ರೂ ಬೆಲೆಬಾಳುವ ಚಿನ್ನಾಭರಣಗಳನ್ನು ಅಡವಿಟ್ಟಿದ್ದು ತಡರಾತ್ರಿ ತನ್ನ ಜಮೀನಿನಲ್ಲಿ ಬೆಳೆಗೆ ಬಳಸುವ ಕ್ರೀಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಬಗ್ಗೆ ಸಾತನೂರು ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

Your email address will not be published.