WATCH : ಪಾಕ್ ವಿರುದ್ಧ ರೋಚಕ ಜಯ – ಭಾಂಗ್ಡಾ ಸ್ಟೆಪ್ ಹಾಕಿ ಸಂಭ್ರಮಿಸಿದ ಕಿವೀ ಪ್ಲೇಯರ್ಸ್

ಅಬುಧಾಬಿಯ ಶೇಖ್ ಜಾಯೇದ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ನ್ಯೂಜಿಲೆಂಡ್ ತಂಡ 4 ರನ್ ಅಂತರದ ರೋಚಕ ಜಯ ಸಾಧಿಸಿದೆ. ಗೆಲುವಿಗೆ 176 ರನ್ ಗುರಿಯನ್ನು ಬೆನ್ನತ್ತಿದ್ದ ಪಾಕಿಸ್ತಾನ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ ನಾಟಕೀಯ ಕುಸಿತ ಕಂಡು 171ಕ್ಕೆ ಆಲೌಟ್ ಆಯಿತು.

ನ್ಯೂಜಿಲೆಂಡ್ ಪರವಾಗಿ ಏಜಾಜ್ ಪಟೇಲ್ 5, ಇಶ್ ಸೋಧಿ 2 ನೀಲ್ ವ್ಯಾಗ್ನರ್ 2 ವಿಕೆಟ್ ಪಡೆದರು. ಪಂದ್ಯದ ನಂತರ ಗೆಲುವಿನ ಹರ್ಷದಲ್ಲಿದ್ದ ಕಿವೀಸ್ ಪಡೆಯ ಆಟಗಾರರು ಡ್ರೆಸಿಂಗ್ ರೂಮಿನಲ್ಲಿ ಭಾಂಗ್ಡಾ ನೃತ್ಯ ಶೈಲಿಯಲ್ಲಿ ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com