ಚನ್ನಪಟ್ಟಣ : ಸಂತೆಯಂತಾದ ಸಾಮಾನ್ಯ ಸಭೆ – ಉತ್ಸವ ಮೂರ್ತಿಯಾದ ಅಧ್ಯಕ್ಷೆ

ಚನ್ನಪಟ್ಟಣ: ಇಲ್ಲಿನ ನಗರಸಭೆ ಆವರಣದಲ್ಲಿ ಕರೆಯಲಾಗಿದ್ದ ನಗರಸಭೆ ಸಾಮಾನ್ಯ ಸಭೆಯಲ್ಲಿ ಗಂಭೀರ ವಿಚಾರಗಳು ಚರ್ಚೆಗೊಳಪಡುವ ಬದಲು ಸಣ್ಣಪುಟ್ಟ ವಿಚಾರಗಳು ಹಾಗೂ ಅನವಶ್ಯಕ ಚರ್ಚೆಗಳು ಮಹತ್ವ ಪಡೆದು ಸಂತೆಯಂತೆ ಗೋಚರಿಸುವ ಮೂಲಕ‌ ಸಾಮಾನ್ಯ ಸಭೆಯ ಘನತೆಯನ್ನು ಹಾಳುಗೆಡವಿತ್ತು.
ನೂತನ ಪೌರಾಯುಕ್ತರಾಗಿ ಆಗಮಿಸಿದ ಪುಟ್ಟಸ್ವಾಮಿಯವರು ಸಭೆಗೂ ತಮಗೂ ಸಂಬಂಧವಿಲ್ಲದವರಂತೆ ಒಂದೆಡೆ ಕುಳಿತಿದ್ದರೆ,ಮತ್ತೂಂದೆಡೆ ಸಭೆಯನ್ನು ಹತೋಟಿಯಲ್ಲಿಡಬೇಕಾದ ಅಧ್ಯಕ್ಷರು, ಸದಸ್ಯರು ಏನೇ ಕೇಳಿದರೂ ತಲೆಯಾಡಿಸುತ್ತಾ ಉತ್ಸವ ಮೂರ್ತಿಯಂತೆ ಕುಳಿತುಕೊಂಡಿದ್ದರು.
ಬಂದು ಕಡೆ ಜೆಡಿಎಸ್ ಸದಸ್ಯರು ತಮ್ಮ ತಮ್ಮ ವಾರ್ಡಿನ ಸಮಸ್ಯೆಗಳನ್ನು ತೆರೆದಿಡುತ್ತಾ ಅಧಿಕಾರಿಗಳನ್ನು ಪೇಚಿಗೆ ಸಿಲುಕಿಸುತ್ತಿದ್ದರೆ ಮತ್ತೂಂದು ಕಡೆ ಆಡಳಿತ ಪಕ್ಷದ ಸದಸ್ಯರೇ ನಗರದಲ್ಲಿನ
ಸಮಸ್ಯೆಗಳ ಸರಮಾಲೆಯನ್ನೇ ಬಿಚ್ಚಿಡುತ್ತಾ ಅಧ್ಯಕ್ಷ-ಉಪಾಧ್ಯಕ್ಷರನ್ನೇ ಪೇಚಿಗೆ ಸಿಲುಕಿಸಿದರು.
ಸದಸ್ಯರುಗಳು ಯಾವುದಾದರೂ ಗಂಭೀರ ಸಮಸ್ಯೆ ಅಥವಾ ವಿಚಾರಗಳನ್ನು ಸಭೆಯ ಗಮನಕ್ಕೆ ತರುತ್ತಿದ್ದಂತೆ ಪೌರಾಯುಕ್ತರ ಕಣ್ಸನ್ನೆಗೆ ಸಿದ್ದರಾಗಿರುವಂತ ಅಧಿಕಾರಿ ವರ್ಗ ತಕ್ಷಣ ಹೂ ಸರ್ ಕೆಲಸ ಅಗ್ತಿದೆ,ಮಾಡ್ತಿದ್ದೇವೆ,ವರ್ಕ್ ಅರ್ಡರ್ ಬಂದಿದೆ ಎಂಬಿತ್ಯಾದಿ ಸಿದ್ದ ಉತ್ತರಗಳನ್ನು ಇಟ್ಟುಕೊಂಡು ಒಂದರ ಹಿಂದೆ ಒಂದರಂತೆ ಹೇಳುವ ಮುಖಾಂತರ ಸಭೆಯ ದಿಕ್ಕುತಪ್ಪಿಸುವ ಕೆಲಸ ನಡೆಯುತ್ತಿದ್ದರೂ ಇದೆಲ್ಲವನ್ನು ಪ್ರತಿ ಸಭೆಯಲ್ಲೂ ಕಂಡಿರುವ ಸದಸ್ಯರುಗಳ ನಾವು ಎಷ್ಟು ಹೇಳಿದರೂ ಆಷ್ಠೇ ಇದು ಸರಿಯಾಗಲ್ಲ ಎಂಬ ಒಕ್ಕೂರಲ ನಿರ್ಣಯಕ್ಕೆ ಬಂದವಂರಂತೆ ಅವರು ಹೇಳಿದ್ದನ್ನೇಲ್ಲಾ ಕೇಳಿಕೊಂಡು ಹೋಗುವ ತೀರ್ಮಾನಕ್ಕೆ ಬಂದಂತೆ ಅಲ್ಲಿನ ಸದಸ್ಯರುಗಳ ಹಾವಭಾವ ಮಾತುಕತೆಗಳು ಕಂಡುಬರುವ ಮೂಲಕ ಇದು ಸಭೆಯಲ್ಲಾ ಸಂತೆ ಎಂಬ ಭಾವನೆಯನ್ನು ಮೂಡಿಸಿರುವುದಂತೂ ಸುಳ್ಳಲ್ಲ.

Leave a Reply

Your email address will not be published.