Bigg Boss 6 : ಎಲಿಮಿನೇಷನ್ ವಿಷಯದಲ್ಲಿ ಗೊಂದಲ : ಹಗ್ ಮಾಡಿ ಅತ್ತರು ಅಕ್ಷತಾ-ರಾಕೇಶ್..!

ನಿನ್ನೆ ಬಿಗ್ ಬಾಸ್ ಮನೆಯ ಇಬ್ಬರು ಸದಸ್ಯರನ್ನು ಕನ್ಫೆಷನ್ ರೂಮ್ ಗೆ ಕರೆದು ಯಾರು ಮತ್ತು ಯಾರನ್ನ ಬಿಗ್ ಬಾಸ್ ಮನೆಯಿಂದ ಹೊರಹಾಕಲು ಬಯಸುತ್ತೀರಾ..? ಮತ್ತು ಯಾಕೆ ಅನ್ನೋದಕ್ಕೆ ಸೂಕ್ತ ಕಾರಣ ನೀಡಲು ಸೂಚಿಸಿದ್ದರು.   ಪೈಕಿ ಅಕ್ಷತಾ ಮತ್ತು ರಾಕೇಶ್ ಇಬ್ಬರನ್ನ ಕನ್ವೆಷನ್ ರೂಮ್ ಗೆ ಕರೆಯಲಾಗಿತ್ತು ಎಲಿಮಿನೇಟ್ ಪ್ರಕ್ರಿಯೆ ತುಂಬಾ ಕಷ್ಟವಾಗಿದ್ದು ಬಹುಶ: ಮನೆಯ ಎಲ್ಲಾ ಸದಸ್ಯರಿಗಿಂತಲೂ ಅಕ್ಷ ಮತ್ತು ರಾಕಿಗೆ. ಯಾಕೆಂದರೆ ಇವರಿಬ್ಬರಿಗೂ ಬಿಗ್ ಬಾಸ್ ಮನೆಯಿಂದ ಒಬ್ಬರನ್ನ ಬಿಟ್ಟು ಮತ್ತೊಬ್ಬರು ಹೊರ ಹೋಗಲು ಮತ್ತು ಅದನ್ನ ಹೇಳಲು ಸಾಧ್ಯವಾಗಲಿಲ್ಲ. ತತ್ ಪರಿಣಾಮ ಇಬ್ಬರೂ ನಾನು ಹೋಗುತ್ತೇನೆ ನೀನಿರು ನೀನಿರು ಎಂದು ಬಿಕ್ಕಿ ಬಿಕ್ಕಿ ಅಳತೊಡಗಿದ್ರು. ಕೊನೆಗೆ  ಅಕ್ಷತಾ ನಾನೇ ಎಲಿಮಿನೇಟ್ ಆಗುತ್ತೇನೆ ಎಂದು ಬಿಗ್ ಬಾಸ್ ಗೆ ಹೇಳಿದ್ದು ರಾಕಿಗೆ ತಡೆದುಕೊಳ್ಳಲಾಗದಷ್ಟು ಮನಸ್ಸು ತುಂಬಿ ಕಣ್ಣೀರು ಬಂತು. ತಮ್ಮ ಲೈಫ್ ನಲ್ಲಿ ಮರೆಯಲಾಗದಂತ ಗಿಫ್ಟ್ ಇವತ್ತು ಅಕ್ಷ ನನಗೆ ನೀಡಿದ್ದಾಳೆ. ನನ್ನ ಮನಸ್ಸಲ್ಲಿ ಅವಳು ಎಲ್ಲೋ ಹೋಗಿ ಬಿಟ್ಟಳು ಎಂದು ರಾಕಿ ಹೇಳಿ ಇಬ್ಬರು ಹೊರನಡೆದಾಗ ದು: ತಾಳಲಾಗದೇ ಇಬ್ಬರೂ ಗಟ್ಟಿಯಾಗಿ ತಬ್ಬಿಕೊಂಡು ಅತ್ತರು.

ಪೈಕಿ ಜಯಶ್ರೀ ಹಾಗೂ ರಶ್ಮಿಯವರನ್ನ ಕನ್ವೆಷನ್ ರೂಂ ಗೆ ಕರೆಯಲಾಗಿತ್ತು. ಮುಂದಿನ ದಿನಗಳಲ್ಲಿ ಜಯಶ್ರೀ ಅವರ ಹುಟ್ಟಿ ಹಬ್ಬದ ಪ್ರಯುಕ್ತ  ಉಡುಗೊರೆಯಾಗಿ ರಶ್ಮಿಯವರು ಎಲಿಮಿನೇಟ್ ಆಗಲು ಒಪ್ಪಿದರುನಯನ  ರವಿ ಅವರನ್ನ ಎಲಿಮಿನೇಟ್ ಮಾಡಿದರು. ಮುರಳಿ ಅವರನ್ನ ಸೋನು ಪಾಟೀಲ್ ಎಲಿಮಿನೇಟ್ ಮಾಡಿದರು. ನವೀನ್ ಉಳಿಸಿ ಧನರಾಜ್ ತಾವೇ ಎಲಿಮಿನೇಟ್ ಆಗಲು ಒಪ್ಪಿದರು. ಆ್ಯಂಡಿ ಮತ್ತು ಕವಿತಾ ಪ್ರತಿನಿತ್ಯ 10 ನಿಮಿಷ ಪರಸ್ಪರ ಮಾತನಾಡವ ಸಂದಾನದಿಂದ ಆ್ಯಂಡಿ ಎಲಿಮಿನೇಟ್ ಆಗಲು ಒಪ್ಪಿದರು.

Leave a Reply

Your email address will not be published.

Social Media Auto Publish Powered By : XYZScripts.com