ಶಾಲೆಗಳ ಸಮೀಪವಿರುವ ಮೊಬೈಲ್ ಟಾವರ್ ಗಳ ಸ್ಥಳಾಂತರ : ಡಿಸಿಎಂ ಜಿ.ಪರಮೇಶ್ವರ್ ಆದೇಶ

ಹೊಸ ಟೆಲಿಕಮ್ಯೂನಿಕೇಷನ್ ಇನ್ಫ್ರಾಸ್ಟ್ರಕ್ಚರ್ ಆಕ್ಟ್ ಪ್ರಕಾರ ರಾಜ್ಯದಲ್ಲಿ ಸ್ಥಾಪನೆಯಾದ ಎಲ್ಲಾ ಮೊಬೈಲ್ ಟಾವರ್ ಗಳಿಗೆ ಪರವಾನಗಿಗಳನ್ನು ಪಡೆಯುವುದು ಕಂಪೆನಿಗಳಿಗೆ ಕಡ್ಡಾಯವಾಗಿದೆ. ಇದರ ಜೊತೆಗೆ ನಗರದಲ್ಲಿ ಸ್ಥಾಪಿಸಲಾದ ಎಲ್ಲಾ ಹೊಸ ಟಾವರ್ ಗಳು ಯಾವುದೇ ಶಾಲಾ-ಕಾಲೇಜು, ಆಸ್ಪತ್ರೆ ಅಥವಾ ಧಾರ್ಮಿಕ ಆರಾಧನೆಯ ಸ್ಥಳದಿಂದ 50 ಮೀಟರ್ ದೂರದಲ್ಲಿರಬೇಕು ಎಂದು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಆದೇಶಿಸಿದ್ದಾರೆ. ಶಾಲೆಗಳು ಮತ್ತು ಕಾಲೇಜುಗಳ ಸಮೀಪದಲ್ಲಿರುವ ಹಳೆಯ ಟಾವರ್ ಗಳು ಮೂರು ತಿಂಗಳೊಳಗೆ ಸ್ಥಳಾಂತರಿಸಬೇಕು ಎಂದು ಕಂಪನಿಗಳಿಗೆ ಸೂಚಿಸಲಾಗಿದೆ.

ನಗರದಲ್ಲಿರುವ ಮೊಬೈಲ್ ಟಾವರ್ ಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿವೆ ಎಂದು ಟಾವರ್  ಸಮೀಪದಲ್ಲಿ ವಾಸಿಸುವ ನಿವಾಸಿಗಳಿಂದ ಮೌಖಿಕ ದೂರುಗಳನ್ನು ನಾವು ಸ್ವೀಕರಿಸಿದ್ದೇವೆ. ಇದನ್ನು ವೈಜ್ಞಾನಿಕವಾಗಿ ಸ್ಥಾಪಿಸಲಾಗಿಲ್ಲವಾದರೂ ನಾವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.

ಪ್ರಸ್ತುತ, ಬೆಂಗಳೂರಿನಲ್ಲಿ ಕೇವಲ 6,766 ಮೊಬೈಲ್ ಗೋಪುರಗಳಿವೆ. ಮೊಬೈಲ್ ಟಾವರ್ ಗಳ ನಿಯಂತ್ರಣಗಳ ಕೊರತೆಯಿಂದ ಕಂಪನಿಗಳಿಗೆ ಶಾಲೆ ಮತ್ತು ಕಾಲೇಜುಗಳ ಸಮೀಪ ಮೊಬೈಲ್ ಟಾವರ್ ಗಳನ್ನು ಸ್ಥಾಪಿಸಲು ಅವಕಾಶ ನೀಡಲಾಗಿತ್ತು. ತೊಂದರೆಯಾಗುತ್ತಿರುವ ಮೊಬೈಲ್ ಟಾವರ್ ಗಳನ್ನು ಗಮನಿಸಿ ಅಂತಹ ಎಲ್ಲ ಟಾವರ್ ಗಳು 50 ಮೀಟರ್ ದೂರದಲ್ಲಿ ಬದಲಾಯಿಸಬೇಕು ಮತ್ತು ಮೂರು ತಿಂಗಳೊಳಗೆ ಪರವಾನಗಿಗಳನ್ನು ಪಡೆಯಬೇಕು ಎಂದು ಜಿ.ಪರಮೇಶ್ವರ್ ಅವರು ಹೇಳಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com