ಭಾರಿ ಜನಪ್ರಿಯತೆ ಪಡೆದುಕೊಳ್ಳುತ್ತಿದೆ ವಿಜಯ್ ದೇವರಕೊಂಡ ಅವರ ‘ಟಾಕ್ಸಿವಾಲ’ ಸಿನಿಮಾ..!

‘ಗೀತ ಗೋವಿಂದಂ’ ಚಿತ್ರದ ಮೂಲಕ ಜನರನ್ನ ಅಟ್ರ್ಯಾಕ್ಟ್ ಮಾಡಿದ ಟಾಲಿವುಟ್ ನಟ ವಿಜಯ್ ದೇವರಕೊಂಡ  ಅವರ ಹೊಸ ತೆಲುಗು ಚಿತ್ರ ‘ಟಾಕ್ಸಿ ವಾಲಾ’ ಭಾರಿ ಜನಪ್ರಿಯತೆ ಪಡೆದುಕೊಂಡಿದೆ. ಕಳೆದ ಶುಕ್ರವಾರವಷ್ಟೇ ತೆರೆಕಂಡ ಈ ಸಿನಿಮಾವನ್ನು ನೋಡಲು ಜನ ಮುಗಿ ಬಿಳುತ್ತಿದ್ದಾರೆ. ಅತ್ಯಂತ ಕಡಿಮೆ ಸಮಯದಲ್ಲಿ ಹೆಚ್ಚು ಜನರ ಮನಗೆದ್ದ ವಿಜಯ್ ದೇವರಕೊಂಡ ಅವರ ಟಾಕ್ಸಿವಾಲಾ ಸಿನಿಮಾ ಕೂಡ ಭಾರಿ ಹಿಟ್ ಆಗುವ ಸಾಧ್ಯತೆ ಇದೆ. ರಜಾ ದಿನಗಳಲ್ಲಿ ತಮ್ಮ ನೆಚ್ಚಿನ ನಟನ ಸಿನಿಮಾವನ್ನು ನೋಡಲು ಸಿನಿಮಾ ಮಂದಿರಗಳಿಗೆ ತೆರಳಿದ ಕೆಲ ಜನರಿಗೆ ಟಿಕೇಟ್ ಪಡೆಯಲು ಸಾಧ್ಯವಾಗಿಲ್ಲ. ಇನ್ನೂ ವಿಕೇಂಡ್ನಲ್ಲಿ ಟಿಕೇಟ್ ತೆಗೆದುಕೊಳ್ಳು ಸಾಧ್ಯವಾಗುವುದಿಲ್ಲ ಎಂದು ತಿಳಿದವರು ಅಡ್ವಾನ್ಸ್ ಬುಕ್ಕಿಂಗ್ ಮಾಡಿಕೊಂಡು ಕಾಮಿಡಿ ವಿತ್ ಟ್ರ್ಯಾಜಿಡಿ ಚಿತ್ರವನ್ನು ನೋಡಿ ಎಂಜಾಯ್ ಮಾಡಿದ್ದಾರೆ. ಮತ್ತೊಂದು ವಿಶೇಷ ಅಂದರೆ ‘ಟಾಕ್ಸಿವಾಲ’ ಸಿನಿಮಾ ರಿಲೀಸ್ ಆಗುವ ಮುನ್ನವೇ ಆನ್ ಲೈನ್ ನಲ್ಲಿ ಲೀಕ್ ಆದ್ದರೂ ಕೂಡ ಜನರ ಕುತೂಹಲ ಕಡಿಮೆ ಆಗಿಲ್ಲ. ಆತ್ಮವನ್ನು ರಕ್ಷಿಸುವಲ್ಲಿ ಮುಖ್ಯ ಪಾತ್ರವನ್ನು ಮಾಡಿದ ವಿಜಯ್ ದೇವರಕೊಂಡ ಸಕತ್ ಹೈಲೈಟ್ ಆಗಿದ್ದಾರೆ.  ಸಿನಿಮಾದುದ್ದಕ್ಕೂ ತನ್ನ ಕಾರ್ ನಲ್ಲಿದ್ದ ಆತ್ಮದ ಜೀವನ ಹಾಗೂ ಅದರ ರಕ್ಷಣೆ ಮಾಡುವಲ್ಲಿ ಹೋರಾಡುವ ನಾಯಕ ಕೊನೆಗೆ ವಿಫಲನಾಗಿ ಗೆಲ್ಲುವ ಕಥೆಯನ್ನ ಬರಹಗಾರ ಸಾಯಿಕುಮಾರ್ ರೆಡ್ಡಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ರಾಹುಲ್ ಸಂಕ್ರಿತನ್ ಅವರು ನಿರ್ದೇಶನ ಮಾಡಿದ್ದಾರೆ.   ಪ್ರಿಯಾಂಕಾ ಜಾವಾಲ್ಕರ್ ಹಾಗೂ ಮಧುನಂದನ್ ಪೂರ್ಣ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

 

 

Leave a Reply

Your email address will not be published.

Social Media Auto Publish Powered By : XYZScripts.com