ಕಿಚ್ಚ ಸುದೀಪ್‌ ಇನ್ಮೇಲೆ ‘ಸ್ಯಾಂಡಲ್‌ವುಡ್‌ ಬಾದ್‌ಷಾ’ : RRR ಮೋಷನ್ ಪಿಕ್ಚರ್ಸ್‍ನಿಂದ ಹೊಸ ಬಿರುದು

ಪೈಲ್ವಾನ್‌ ಚಿತ್ರದೊಳಗೆ ಕಿಚ್ಚ ಸುದೀಪ್‌ರ ಕುಸ್ತಿ ಲುಕ್‌ ಪೋಸ್ಟರ್‌ನ ರಿಲೀಸ್‌ ಮಾಡೋದ್ರ ಜೊತೆಗೆ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ಗೆ ಹೊಸ ಬಿರುದನ್ನ ಕೊಟ್ಟಿದೆ. ಅದೇ ಬಾದ್‌ಷಾ. ಹೌದು ಕಿಚ್ಚ ಸುದೀಪ್‌ ಇನ್ಮೇಲೆ ಸ್ಯಾಂಡಲ್ವುಡ್‌ ಬಾದ್‌ಷಾ.

Image result for pailwan

ಪೈಲ್ವಾನ್‌ ನಿಮಗೆಲ್ಲಾ ಗೊತ್ತಿರೋ ಹಾಗೆ, ಆರ್ ಆರ್‌ ಆರ್‌ ಮೋಷನ್‌ ಪಿಕ್ಚರ್ಸ್‌ ಬ್ಯಾನರ್‌ನಡಿಯಲ್ಲಿ ತಯಾರಾಗ್ತಿರೋ ಈ ಚಿತ್ರ ಕೃಷ್ಣ ನಿರ್ದೇಶನದಲ್ಲಿ, ಸ್ವಪ್ನ ಕೃಷ್ಣ ನಿರ್ಮಾಣದಲ್ಲಿ ಮೂಡಿ ಬರ್ತಿದೆ. ಅದ್ರಂತೆ, ಆರ್‌. ಆರ್‌ . ಆರ್‌ ಮೋಷನ್‌ ಪಿಕ್ಚರ್ಸ್‌ ಕಿಚ್ಚ ಸುದೀಪ್‌ಗೆ ಈ ಬಿರುದನ್ನ ಕೊಟ್ಟು ಗೌರವಿಸ್ತಿದೆ. ಅಭಿಮಾನಿಗಳ ಒತ್ತಾಯದ ಮೇರೆಗೆ ರಿಲೀಸ್‌ ಮಾಡಿರೋ ಪೈಲ್ವಾನ್‌ ಚಿತ್ರದ ಕುಸ್ತಿ ಪೋಸ್ಟರ್‌ ಸದ್ಯ ಟ್ರೆಂಡಿಂಗ್‌ನಲ್ಲಿದೆ.

Leave a Reply

Your email address will not be published.