‘ರಾಜಣ್ಣನ ಮಗ’ ಚಿತ್ರದ ಲಿರಿಕಲ್ ವಿಡಿಯೋ ಸಾಂಗ್ ರಿಲೀಸ್ : ಮೆಚ್ಚುಗೆ ಸೂಚಿಸಿದ ಅಪ್ಪು

ರಾಜಣ್ಣನ ಮಗ ಮೊನ್ನೆಯಷ್ಟೇ ಆಡಿಯೋ ಮತ್ತು ಪ್ರಮೋಶಿನಲ್‌ ಹಾಡೊಂದನ್ನ ರಿಲೀಸ್‌ ಮಾಡಿ, ಸುದ್ದಿ ಮಾಡಿತ್ತು. ಔಟ್‌ ಅಂಡ್‌ ಔಟ್‌ ಆ್ಯಕ್ಷನ್‌ ಝಲಕ್‌ ಹಾಡನ್ನ ಬಿಟ್ಟು ಕುತೂಹಲ ಮೂಡಿಸಿತ್ತು. ಇದೀಗ ಅಪ್ಪನ ಅನುಬಂಧ ಸಾರೋ ಎಮೋಷಿನಲ್‌ ಹಾಡಿನ ಲಿರಿಕಲ್‌ ವಿಡಿಯೋನ ರಿಲೀಸ್‌ ಮಾಡಿದೆ.

ಪವರ್ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅಪ್ಪನ ಹಾಡು ಬಿಡುಗಡೆ ತಂದೆ ಮಗನ ಸೆಂಟಿಮೆಂಟ್‌ ಇರೋ ರಾಜಣ್ಣನ ಮಗ ಸಿನಿಮಾದ ಆ ವಿಶೇಷ ಹಾಡನ್ನ ಪವರ್ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ರಿಲೀಸ್‌ ಮಾಡಿದ್ದಾರೆ. ಕೋಟಿ ಕೋಟಿ ಜನುಮ ಕಳೆದರು ಅಪ್ಪತಾನೇ ಮೊದಲ ದೇವರು ಅನ್ನೋ ಈ ಹಾಡನ್ನ ಕೇಳಿ ಮೆಚ್ಚಿಕೊಂಡಿರೋ ಪುನೀತ್‌ ರಾಜ್‌ಕುಮಾರ್‌, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ರವಿಬಸ್ರೂರು ಸಂಗೀತ ಸಂಯೋಜಿಸಿರೋ ಈ ಹಾಡಿಗೆ ಕೆ. ಕಲ್ಯಾಣ್‌ ಸಾಹಿತ್ಯವಿದ್ದು. ವಿಜಯ್ ಪ್ರಕಾಶ್‌ ಹಾಡಿದ್ದಾರೆ.

ರಾಜಣ್ಣನ ಮಗ ಚಿತ್ರದಲ್ಲಿ ನಾಯಕ ಹರೀಶ್‌ಗೆ ಹಿರಿಯ ನಟ ಚರಣ್‌ರಾಜ್‌ ತಂದೆಯಾಗಿ ಕಾಣಿಸಿಕೊಂಡಿದ್ದಾರೆ. ತುಂಬಾ ಎಮೋಷನಲ್‌ ಆಗಿರೋ ಅಪ್ಪನ ಪಾತ್ರದಲ್ಲಿ ನಟಿಸಿರೋ ಚರಣ್‌ ರಾಜ್‌ ಮತ್ತು ಮಗನ ಪಾತ್ರದಲ್ಲಿ ಹರೀಶ್‌ ಈ ಹಾಡಿನ ಹೈಲೈಟ್. ಸಿನಿಮಾದ ಮೈನ್‌ ಸ್ಟ್ರೆಂಥ್‌ಗಳಲ್ಲಿ ಈ ಹಾಡೂ ಕೂಡ ಒಂದು ಅಂತಿದೆ ಚಿತ್ರತಂಡ. ಕೋಲಾರ್‌ ಸೀನು ನಿರ್ದೇಶಿಸಿರೋ ರಾಜಣ್ಣನ ಮಗ ಚಿತ್ರವನ್ನ ಜಲಗೆರೆ ಪ್ರೈವೇಟ್‌ ಲಿಮಿಟೆಡ್‌ ನಿರ್ಮಾಣ ಮಾಡಿದೆ. ಸದ್ಯ ಹಾಡುಗಳಿಂದ ಸಿಕ್ಕಾಪಟ್ಟೆ ಸದ್ದು ಮಾಡ್ತಿರೋ ರಾಜಣ್ಣನ ಮಗ ಸದ್ಯದಲ್ಲೇ ಪ್ರೇಕ್ಷಕರೆದುರಿಗೆ ಬರಲಿದ್ದಾನೆ.

One thought on “‘ರಾಜಣ್ಣನ ಮಗ’ ಚಿತ್ರದ ಲಿರಿಕಲ್ ವಿಡಿಯೋ ಸಾಂಗ್ ರಿಲೀಸ್ : ಮೆಚ್ಚುಗೆ ಸೂಚಿಸಿದ ಅಪ್ಪು

Leave a Reply

Your email address will not be published.