ರಾಜ ‘ನಿಖಿಲ್‌’, ರಾಣಿ ‘ರಚಿತಾ’ ಪ್ರೇಮ’ಕಲ್ಯಾಣ’ – ಮೊದಲ ಹಾಡೇ ಸೆನ್ಸೇಷನ್‌..!

ಸೀತಾರಾಮ ಕಲ್ಯಾಣ ಈ ವರ್ಷ ಸ್ಯಾಂಡಲ್‌ವುಡ್‌ ಅಂಗಳದಲ್ಲಿ ತಯಾರಾಗ್ತಿರೋ ಮತ್ತೊಂದು ದೊಡ್ಡ ಸಿನಿಮಾ. ಯುವರಾಜ ನಿಖಿಲ್‌ ಕುಮಾರ್‌, ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಅಭಿನಯದಲ್ಲಿ, ಎ. ಹರ್ಷ ನಿರ್ದೇಶನದಲ್ಲಿ ಮೂಡಿ ಬರ್ತಿರೋ ಬಹು ನಿರೀಕ್ಷಿತ ಸಿನಿಮಾ. ಚೆನ್ನಾಂಬಿಕ ಫಿಲಂಸ್‌ ಬ್ಯಾನರ್‌ನಲ್ಲಿ ಶ್ರೀಮತಿ ಅನಿತಾ ಕುಮಾರಸ್ವಾಮಿ ನಿರ್ಮಾಣದ ಚಿತ್ರ. ಅನೂಪ್‌ ರೂಬೀನ್ಸ್‌ ಸಂಗೀತ ಸಂಯೋಜಿಸಿರೋ ಈ ಚಿತ್ರದ ಹಾಡುಗಳು ಒಂದೊಂದಾಗಿ ರಿಲೀಸ್‌ ಆಗ್ತಿದ್ದು, ಮೊದಲಿಗೆ ನಿನ್ನ ರಾಜ ನಾನು.. ನನ್ನ ರಾಣಿ ನೀನು ಅನ್ನೋ ಬ್ಯೂಟಿಫುಲ್‌ ಮೆಲೋಡಿ ಹಾಡಿನ ಲಿರಿಕಲ್‌ ವಿಡಿಯೋನ ರಿಲೀಸ್‌ ಮಾಡಿದೆ ಚಿತ್ರತಂಡ.

ವಿ. ಸಾಯಿ ಸುಕನ್ಯ ಸಾಹಿತ್ಯವಿರೋ ಈ ಹಾಡನ್ನ ಅರ್ಮಾನ್‌ ಮಲ್ಲಿಕ್‌ ಹಾಡಿದ್ದಾರೆ. ಕೇಳೋದಕ್ಕೆ ಮಾಧುರ್ಯ ಭರಿತವಾಗಿರೋ ಈ ಹಾಡು ನೋಡೋದಕ್ಕೂ ಅಷ್ಟೇ ಮುದ್ದಾಗಿ ಮೂಡಿ ಬಂದಿರುವಂತಿದೆ. ಯೂಟ್ಯೂಬ್‌ನಲ್ಲಿ ಆಗ್ಲೇ ಸೆನ್ಸೇಷನ್‌ ಕ್ರಿಯೇಟ್‌ ಮಾಡ್ತಿದೆ. ಯಾಕೆಂದ್ರೆ, ಲಿರಿಕಲ್‌ ವಿಡಿಯೋದಲ್ಲಿ ನಿಖಿಲ್‌ ಕುಮಾರ್‌, ರಚಿತಾರಾಮ್‌ ಕೆಮಿಸ್ಟ್ರಿ ಅಷ್ಟು ಕ್ಯೂಟ್‌ ಆಗಿ ಕಾಣ್ತಿದೆ. ಸ್ವಾಮಿ ಛಾಯಾಗ್ರಹಣ, ಸುನೀಲ್‌ ಗೌಡ ಸಹ ನಿರ್ಮಾಣ, ಪ್ರಶಾಂತ್‌ ರಾಜಪ್ಪ, ರಘು ನಿಡುವಳ್ಳಿ ಡೈಲಾಗ್ಸ್‌ ಇರೋ ಸೀತಾರಾಮ ಕಲ್ಯಾಣ ಚಿತ್ರದಲ್ಲಿ ಮ್ಯೂಸಿಕ್‌ ಕೂಡ ಹೈಲೈಟ್‌ಗಳಲ್ಲೊಂದಾಗಿದ್ದು, ಈ ಚಿತ್ರದ ಹಾಡುಗಳು ತುಂಬಾ ದೊಡ್ಡ ಮಟ್ಟದಲ್ಲಿ ಸೌಂಡ್‌ ಮಾಡಲಿವೆ ಅನ್ನೋ ಭರವಸೆಯಲ್ಲಿದೆ ಚಿತ್ರತಂಡ.

Leave a Reply

Your email address will not be published.