ರಾಧಿಕಾ ಪಂಡಿತ್ ಸೀಮಂತ ಕಾರ್ಯ : ಸಂಭ್ರಮದಲ್ಲಿ ಪಾಲ್ಗೊಂಡು ಶುಭಹಾರೈಸಿದ ಗಣ್ಯರು

ಮಿಸ್ಟರ್ ಆಂಡ್ ಮಿಸಸ್ ರಾಮಚಾರಿ ಜೀವನದಲ್ಲಿ ಇದೊಂದು ವಿಶೇಷ ಸಂದರ್ಭ. ಮದುವೆಯಾಗಿ ಎರಡು ವರ್ಷದ ಬಳಿಕ ಯಶ್ ಹಾಗೂ ರಾಧಿಕ ಮನೆಯಲ್ಲಿ ಸಂಭ್ರಮ ಸಡಗರ. ಹೌದು.. ಸ್ಯಾಂಡಲ್ ವುಡ್ ಪ್ರಿನ್ಸಸ್ ರಾಧಿಕಾ ಪಂಡಿತ್ ತುಂಬು ಗರ್ಭಿಣಿ.

ಈ ವಿಶೇಷವಾದ ಸೀಮಂತದ ಕಾರ್ಯಕ್ರಮವನ್ನು ರಾಧಿಕ ಹಾಗೂ ಯಶ್ ಅವರ ಮದುವೆಯಾದ ಲಕ್ಕಿ ಸ್ಥಳ ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್‍ನಲ್ಲಿ ನಿನ್ನೆ ನಡೆಸಲಾಗಿದೆ. ಈ ಕಾರ್ಯಕ್ರಮಕ್ಕೆ ಆಗಮಿಸಿದ ಕನ್ನಡ ಚಿತ್ರರಂಗದ ಹಲವು ತಾರೆಯರು, ಗಣ್ಯಾತಿಗಣ್ಯರು ರಾಧಿಕ ಅವರಿಗೆ ಆಶೀರ್ವಧಿಸಿದ್ದಾರೆ.

ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಸುಮಲತಾ ಅಂಬರೀಶ್, ನೃತ್ಯ ಸಂಯೋಜಕ ಇಮ್ರಾನ್ ಸರ್ದಾರಿಯಾ, ಯೋಗರಾಜ್ ಭಟ್, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಹಿರಿಯ ನಟಿ ಜಯಂತಿ, ನಿರ್ದೇಶಕ ಎಪಿ ಅರ್ಜುನ್, ಶಾಸಕ ಹ್ಯಾರೀಸ್ ಸೇರಿದಂತೆ ಹಲವಾರು ಸ್ನೇಹಿತರು ಶುಭಕೋರಿದ್ದಾರೆ.
2016 ಡಿಸೆಂಬರ್ 9ಕ್ಕೆ ರಾಧಿಕಾ ಮತ್ತು ಯಶ್ ಅವರ ಮದುವೆಯಾಗಿತ್ತು. ವಿಶೇಷ ಅಂದರೆ ಇದೇ ಡಿಸೆಂಬರ್  19 ರಂದು ಮಗು ಜನನಕ್ಕೆ ವೈದ್ಯರು ಡೇಟ್ ಕೊಟ್ಟಿದ್ದಾರೆ ಎಂದು ಯಶ್ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com