ಬಿಗ್ ಬಾಸ್ ಮನೆಯಿಂದ ಅದಮ್ ಎಲಿಮಿನೇಟ್ : ಕಣ್ಣೀರಿಟ್ಟ ಆಂಡಿ ಮತ್ತು ರಾಕೇಶ್

ಕರ್ನಾಟಕದಲ್ಲಿ ಹುಟ್ಟಿ ಕನ್ನಡ ಮಾತನಾಡುವುದು ಇಷ್ಟ. ಸ್ವಲ್ಪ ಸ್ವಲ್ಪ ಕನ್ನಡ ನನಗೆ ಬರುತ್ತೆ. ಅರ್ಥ ಆಗುತ್ತೆ. ಈ ಬಿಗ್ ಬಾಸ್ ಮಗೆಯಲ್ಲಿ ಚೆನ್ನಾಗಿ ಕನ್ನಡ ಮಾತನಾಡಲು ಕಲಿಯುತ್ತೇನೆ. ಇಂತೆಲ್ಲಾ ಮಾತುಗಳನ್ನ ತೊದಲು ಕನ್ನಡದಲ್ಲಿ ಹೇಳುತ್ತಿದ್ದ ಬಿಗ್ ಬಾಸ್ ಮನೆಯ ಸದಸ್ಯ ಅದಮ್ ಈ ವಾರ ಎಲಿಮಿನೇಟ್ ಆಗಿದ್ದಾರೆ.   ಅದಮ್  ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಎಂದು ಸುದೀಪ್ ಅವರು ಹೇಳುತ್ತಿದ್ದಂತೆ ಆದಮ್  ಬೆಸ್ಟ್ ಫ್ರೆಂಡ್  ಆಂಡಿ ಅಳತೊಡಗಿದ್ರು. ಯಾವಾಗಲೂ ಜೊತೆಗಿದ್ದು ಒಳ್ಳೆದನ್ನ ಕೆಟ್ಟದನ್ನ ನೇರವಾಗಿ  ಹೇಳ್ತಾಯಿದ್ದವರು ಅದಮ್ ಅವರು ಇನ್ನುಮುಂದೆ ಜೊತೆಗೆ ಇರೋದಿಲ್ಲ ಅಂತ ಬೇಸರದಲ್ಲಿ ಆಂಡಿ ಕಣ್ಣೀರಿಟ್ಟರು.  ಇದೇ ವಿಚಾರಕ್ಕೆ ರಾಕೇಶ್ ಅವರು ಕಣ್ಣೀರಿಟ್ಟರು. ಅದಮ್ ಒಳ್ಳೆ ಹುಡುಗ ಹೇಳಿದರೆ ಸರಿಯಾಗಿ ಅರ್ಥ ಮಾಡಿಕೊಳ್ಳುತ್ತಿದ್ದ. ಅವನು ಯಾಕೆ ಹೋದನೋ ಗೊತ್ತಿಲ್ಲ ಅಂತ ಗಳಗಳನೇ ಅಳುತ್ತಿದ್ದ ರಾಕೇಶ್ ಅವರನ್ನು ಅಕ್ಷತಾ ಸಮಾಧಾನ ಮಾಡಿದರು.  ಇನ್ನು ಆನಂದ ಮಾಲ್ಗತ್ತಿ ಅವರು ತಮಗೆ ತಮ್ಮ ಮಗಳಿಂದ ಬಂದ ಉಡುಗೊರೆ ಗೊಂಬೆಯನ್ನ ಅದಮ್ ಅವರಿಗೆ ಕೊಟ್ಟರೆ, ಮನೆಯ ಇನ್ನುಳಿದ ಸದಸ್ಯರೆಲ್ಲಾ ಪ್ರೀತಿಯಿಂದ ಹಗ್ ಮಾಡಿ ಅದಮ್ ಅವರಿಗೆ ಬೀಳ್ಕೊಟ್ಟರು.

Leave a Reply

Your email address will not be published.