ಸಹಾಯ ಮಾಡುವ ಸೋಗಿನಲ್ಲಿ ಬಂದು ಮೋಸ : ಎಟಿಎಮ್ ಬಳಕೆದಾರರೇ ಎಚ್ಚರ..!

ಮಂಜುನಾಥನಗರದ ನಿವಾಸಿ ಮಂಗಳಾ ಅವರು ನವೆಂಬರ್ 15 ರಂದು ಎಟಿಎಮ್ ನಿಂದ ಹಣ ಪಡೆಯಲು ಆಗದೆ ಇದ್ದಾಗ ಸಹಾಯಕ್ಕಾಗಿ ಬಂದ ಅಪರಿಚಿತ ವ್ಯಕ್ತಿ, ಅವರ ಖಾತೆಯಿಂದ 22,000 ಹಣ ವರ್ಗಾವಣೆ ಮಾಡಿಕೊಂಡಿದ್ದಾನೆ. ಮಂಗಳಾ ಅವರು ಬೆಳಿಗ್ಗೆ 10.30 ರ ಹೊತ್ತಿಗೆ ನೆರೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಮ್ ಕಿಯೋಸ್ಕ್ಗೆ ಹೋಗಿದ್ದರು. ಮಂಗಳಾ ತಾಯಿ ಆಸ್ಪತ್ರೆಗೆ ದಾಖಲಾಗಿರುವದರಿಂದ ತಾಯಿಯ ಎಟಿಎಮ್ ಕಾರ್ಡ್ ನಿಂದ ಮಂಗಳ ಹಣ ಡ್ರಾ ಮಾಡುವಾಗ ಸಹಾಯಕ್ಕೆಂದು ಬಂದ ವ್ಯಕ್ತಿ ಅವರಿಗೆ 10,000 ಡ್ರಾ ಮಾಡಿಕೊಟ್ಟಿದ್ದಾರೆ. ಹಣವನ್ನು ಲೆಕ್ಕಾ ಹಾಕಿ ಮಂಗಳಾ ಮನೆಗೆ ತೆರಳಿದ್ದಾರೆ. ಆದರೆ ಮನೆಗೆ ಹೋದ ಬಳಿಕೆ ಮಂಗಳಾ ತಾಯಿಯ ಖಾತೆಯಿಂದ 10,000 ಮತ್ತು12,000 ರೂಪಾಯಿ ವರ್ಗಾವಣೆಯಾಗಿದೆ ಎಂದು ತಿಳಿದು ಬಂದಿದೆ. ನಂತರ ಬ್ಯಾಂಕ್ ಗೆ ಹೋಗಿ ವಿಚಾರಿಸಿದಾಗ ರಮೇಶ್ ಅನ್ನೋರಿಗೆ ಆ ಹಣ ವರ್ಗಾವಣೆಯಾಗಿರುವುದು ಖಚಿತವಾಗಿದೆ. ಈ ಸಂಬಂಧ ಬಾಗಲಕುಂಟೆ ಪೋಲಿಸ್ ಠಾಣೆಗೆ ದೂರು ನೀಡಲಾಗಿದೆ.

ಇದೇ ರೀತಿ ಸೆಂಪ್ಟೆಂಬರ್ 20 ಕೃಷಿ ಇಲಾಖೆಯ ಗುಮಾಸ್ತರಾದ ರಾಜು ಎನ್ನುವ ವ್ಯಕ್ತಿ ಮೈಸೂರು ರಸ್ತೆಯ ಆಕ್ಸಿಸ್ ಬ್ಯಾಂಕ್ ಒಂದರಲ್ಲಿ 5,000 ರೂಪಾಯಿ ಡ್ರಾ ಮಾಡಲು ಸಹಾಯ ಮಾಡಲು ಬಂದ ವ್ಯಕ್ತಿ 45,000 ರೂಪಾಯಿ ವರ್ಗಾವಣೆ ಮಾಡಿಕೊಂಡಿದ್ದ.

ಜೊತೆಗೆ ಸೆಪ್ಟೆಂಬರ್ 21 ರಂದು, ಮೈಕೊ ಲೇಔಟ್ನ ನಿವಾಸಿ ಸತ್ಯ ಕುಮಾರ್ ಚಂದ್ರಾ ಲೇಔಟ್ನಲ್ಲಿನ ಎಟಿಎಂ ಕಿಯೋಸ್ಕ್ನಲ್ಲಿ ತನ್ನ ಪತ್ನಿಯ ಖಾತೆಯಿಂದ 5,000 ರೂಪಾಯಿ ಡ್ರಾ ಮಾಡವಾಗ ಸಹಾಯಕ್ಕೆಂದು ಬಂದ ವ್ಯಕ್ತಿ 40,000 ರೂಪಾಯಿಯಷ್ಟು ಹಣವನ್ನು ವರ್ಗಾವಣೆ ಮಾಡಿಕೊಂಡಿರುವುದು ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com