ಚಲಿಸುತ್ತಿದ್ದ ರೈಲು ಅರ್ಧಗಂಟೆ ನಿಲ್ಲಿಸಿ ಗೃಹಿಣಿಯ ಹೆರಿಗೆ – ಮಾನವೀಯತೆ ಮೆರೆದ ರೈಲ್ವೆ ಅಧಿಕಾರಿಗಳು

ಹೆರಿಗೆಗೆಂದೇ ಹರಿಹರಕ್ಕೆ ತೆರಳುತಿದ್ದ ಗೃಹಣಿಗೆ ರೈಲಿನಲ್ಲೆ ಹೆರಿಗೆ ನೋವು ಕಾಣಿಸಿಕೊಂಡು ಚಲಿಸುತ್ತಿದ್ದ ರೈಲನ್ನು ಅರ್ದತಾಸು ನಿಲ್ಲಿಸಿ ಹೆರಿಗೆ ಮಾಡಿಸುವ‌ ಮೂಲಕ ರೈಲ್ವೆ ಅಧಿಕಾರಗಳು ಮಾನವೀಯತೆ ಮೆರೆದಿರುವ ಘಟನೆ ಹಾಸನ ಜಿಲ್ಲೆಯ ಅರಸಿಕೆರೆ ಬಳಿ ನಡೆದಿದೆ. ಮೈಸೂರು ನಿಂದ ಧಾರವಾಡಕ್ಕೆ ತೆರಳುವ ರೈಲಿನಲ್ಲಿ ಈ ಘಟನೆ ನಡೆದಿದೆ.

ಮೈಸೂರಿನಿಂದ ಹರಿಹರಕ್ಕೆ ಪ್ರಯಾಣ ಬೆಳೆಸಿದ್ದ ಬಳ್ಳಾರಿ ಜಿಲ್ಲೆಯ ಕೊಡ್ಲಗಿ ತಾಲ್ಲೂಕಿನ ತಾಂಡ್ಯದ ನಿವಾಸಿಗಳಾದ ವೀರೇಶ್ನಾಯಕ್ ಹಾಗೂ ಲಕ್ಷ್ಮೀಬಾಯಿ ದಂಪತಿಗಳಿಗೆ ಅರಸಿಕರೆ ರೈಲು ನಿಲ್ದಾಣ ಸಮೀಸುತ್ತಿದ್ದಂತೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಇದನ್ನು ತಕ್ಷಣ ರೈಲು ಅಧಿಕಾರಿಗಳಿಗೆ ತಿಳಿಸಿದ್ದು ಆ ತಾಯಿಯ ಪರಿಸ್ಥಿತಿ ಕಂಡ ಅಧಿಕಾರಿ ನಿಲ್ದಾಣದಲ್ಲಿಯೇ ಅರ್ದತಾಸು ರೈಲು ನಿಲ್ಲಿಸಿ ಸುಗಮ ಹೆರಿಗೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.

ಸಾಮಾನ್ಯ ಭೋಗಿಯಲ್ಲಿದ್ದ ಈಕೆಗೆ ಮಧ್ಯಾಹ್ನ 1.35 ಕ್ಕೆ ಲಕ್ಷ್ಮೀಬಾಯಿ ಗಂಡು ಮಗುವಿಗೆ ಜನ್ಮವಿತ್ತಿದ್ದಾಳೆ. ಹೆರಿಗೆ ನಂತರ ಅದೇ ಅಧಿಕಾರಿಗಳು ಆಕೆ ಮತ್ತು ಮಗುವನ್ನು ಹೆಚ್ವಿನ ಚಿಕಿತ್ಸೆಗೆಂದು ಅರಸಿಕೆರೆಯ ಆಸ್ಪತ್ರೆಗೆ ಅಂಬುಲ್ಯೇನ್ಸ್ ಮೂಲಕ ಕಳುಹಿಸಿಕೊಡುವ ಮುಖಾಂತರ ಮಾನವೀಯತೆ ಮೆರೆದಿದ್ದಾರೆ. ನವೆಂಬರ್14 ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Leave a Reply

Your email address will not be published.