ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರ ಹೊಸ ಅಭಿಯಾನ ‘#ದಿಸ್ ಈಸ್ ನಾಟ್ ಕನ್ಸೆಂಟ್’

ಸಾಮಾಜಿಕ ಜಾಲತಾಣವನ್ನು ಮಹಿಳೆಯರು ಸಶಕ್ತವಾಗಿ ಬಳಸತೊಡಗಿದ್ದಾರೆ. ಪುರುಷ ಪ್ರಧಾನ ಸಮಾಜದ ದೌರ್ಜನ್ಯಗಳನ್ನು ಒಂದರ ಮೇಲೊಂದರಂತೆ ವಿವಿಧ ಅಭಿಯಾನಗಳ ಮೂಲಕ ಹೊರಗೆಡಹಗುತ್ತಿದ್ದಾರೆ. ಮಿ ಟೂ ಅಭಿಯಾನದ ಬಳಿಕ ಇದೀಗ ವಿಶ್ವಾದ್ಯಂತ ದಿಸ್ ಈಸ್ ನಾಟ್ ಕನ್ಸೆಂಟ್ ಎಂಬ ಹೊಸ ಹ್ಯಾಶ್‌ಟ್ಯಾಗ್ ಕ್ಯಾಂಪೇನ್ ಶುರುವಾಗಿದೆ.

Image result for this is not consent

ಐರ್ಲೆಂಡ್‌ನಲ್ಲಿ ಸಂತ್ರಸ್ತೆಯ ಅಂಡರ್‌ವೇರ್ ಅನ್ನು ಆಧಾರವಾಗಿಟ್ಟುಕೊಂಡು 27 ವಯಸ್ಸಿನ ವ್ಯಕ್ತಿಯೊಬ್ಬನನ್ನು ಅತ್ಯಾಚಾರ ಆರೋಪದಿಂದ ದೋಷಮುಕ್ತಗೊಳಿಸಲಾಯಿತು. ಇದರ ವಿರುದ್ಧ ಮಹಿಳೆಯರು ‘#ಇದು ಸಮ್ಮತಿಯಲ್ಲ’ ಎಂಬ ಅರ್ಥ ಧ್ವನಿಸುವ ಹ್ಯಾಶ್‌ಟ್ಯಾಗ್‌ನ ಅಡಿಯಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ.

Image result for this is not consent

ಐರ್ಲೆಂಡ್‌ನಲ್ಲಿ 17 ಹರೆಯದ ಬಾಲೆಯ ಮೇಲೆ ಅತ್ಯಾಚಾರವಾಗಿತ್ತು. ಈ ಪ್ರಕರಣದ ವಿಚಾರಣೆ ವೇಳೆ ಆರೋಪಿ ಪರ ವಕೀಲ ಕೋರ್ಟ್‌ನಲ್ಲಿ ಈ ಯುವತಿಯ ಅಂಡರ್‌ವೇರ್ ಅನ್ನು ಪ್ರದರ್ಶಿಸಿ, ಇವಳು ಯಾವ ರೀತಿ ಉಡುಗೆ ಧರಿಸಿದ್ದಳು ನೋಡಿ, ಎದುರುಗಡೆ ಲೇಸ್ ಇರುವ ಅಂಡರ್‌ವೇರ್ ಹಾಕಿಕೊಂಡಿದ್ದಳು. ಆರೋಪಿಯನ್ನು ಆಕೆ ಆಕರ್ಷಿಸುವ ಸಾಧ್ಯತೆಯಿತ್ತು ಅನ್ನೋದಿಕ್ಕೆ ಈ ಸಾಕ್ಷ್ಯ ಸಾಲದೇ? ಎಂದು ವಾಸಿದ್ದರು. ಬಳಿಕ 8 ನ್ಯಾಯಾಧೀಶರ ನ್ಯಾಯಪೀಠ ನ.6ರಂದು ಅತ್ಯಾಚಾರ ಆರೋಪಿಯನ್ನು ದೋಷಮುಕ್ತಗೊಳಿಸಿತು.

Image result for this is not consent

ಮಹಿಳೆಯ ಸಮ್ಮತಿಯಿತ್ತು ಎಂದು ಬಿಂಬಿಸಲು ಅಂಡರ್‌ವೇರ್ ಬಳಸಿದ ಕ್ರಮದ ವಿರುದ್ಧ ಮಹಿಳೆಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಐರ್ಲೆಂಡ್‌ನಲ್ಲಿ ಆರಂಭವಾದ ಈ ಸೋಷಿಯಲ್ ಮೀಡಿಯಾ ಅಭಿಯಾನ ವಿಶ್ವಾದ್ಯಂತ ಹಬ್ಬಿದೆ.

Leave a Reply

Your email address will not be published.

Social Media Auto Publish Powered By : XYZScripts.com