ಸುವರ್ಣ ಸೌಧಕ್ಕೆ ರೈತರ ಮುತ್ತಿಗೆ : ಸಿಎಂ ಜೊತೆ ಚರ್ಚಿಸಿ ಶೀಘ್ರ ಪರಿಹಾರ – ಸಿದ್ದರಾಮಯ್ಯ ಭರವಸೆ

ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರೆಲ್ಲ ಸೇರಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಿರೋ ವಿಚಾರಕ್ಕೆ ಸಂಬಂಧಿಸಿದಂತೆ ಗದಗನಲ್ಲಿ ಮಾಜಿ ಸಿಎಂ ಸಿದ್ರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ‘ ರೈತರೊಂದಿಗೆ ಸಂಯಮದೊಂದಿಗೆ ವರ್ತಿಸುವಂತೆ ಅಧಿಕಾರಿಗಳಿಗೆ ಹೇಳಿದ್ದೇನೆ. ಜೊತೆಗೆ ಬೆಳಗಾವಿ ಹಾಗೂ ಬಾಗಲಕೋಟೆ ಎಸ್ಪಿ, ಡಿಸಿ ಜೊತೆ ಈ ಬಗ್ಗೆ ಮಾತನಾಡಿದ್ದೆನೆ. ಬೆಳಗಾವಿ ಸುವರ್ಣ ಸೌಧಕ್ಕೆ ರೈತರ ಮುತ್ತಿಗೆ ಹಾಗೂ ರೈತರ ಮೇಲೆ ಹಲ್ಲೆ ನಡೆದ ವಿಷಯ ನನಗೆ ಗೊತ್ತಿಲ್ಲ. ಮಾತುಕತೆಗೆ ಕರೆದಿದ್ದಾರೆ ಆದ್ರೆ ಯಾಕೆ ಮುತ್ತಿಗೆ ಹಾಕಿದ್ರು? ‘ ಅಂತಾ ಪರೋಕ್ಷವಾಗಿ ರೈತರನ್ನ ಪ್ರಶ್ನಿಸಿದರು.

‘ ಸಿಎಂ ಕುಮಾರಸ್ವಾಮಿ ಜೊತೆ ಈ ಕುರಿತು ಮಾತನಾಡಿ ಶೀಘ್ರವೇ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವೆ. ರೈತರು ಈ ವಿಚಾರವನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡು ಬೆಳಗಾವಿಗೆ ಬರಬೇಕು, ಬೆಂಗಳೂರಿಗೆ ಬರಬೇಕು ಅಂತ ಪಟ್ಟು ಹಿಡಿಯಬಾರದು ‘ ಎಂದರು.

ಇನ್ನು ಇದೇ ಸಂದರ್ಭದಲ್ಲಿ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮಾತನಾಡಿದ ಸಿದ್ಧರಾಮಯ್ಯ ‘ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಸ್ಥಾನ ಹಂಚಿಕೆ ಕುರಿತು ಜೆಡಿಎಸ್ ಜೊತೆ ಲೋಕಸಭಾದಲ್ಲೂ ಮೈತ್ರಿ ಮಾಡಿಕೊಳ್ಳುತ್ತೆವೆ. ಈ ಬಗ್ಗೆ ಹೈಕಮಾಂಡ್ ಜೊತೆ ಚರ್ಚೆಮಾಡಿ ಮುಂದಿನ ಚುನಾವಣೆ ವಿಚಾರ ಮಾಡ್ತೆವೆ ಎಂದರು.

Leave a Reply

Your email address will not be published.

Social Media Auto Publish Powered By : XYZScripts.com