ತಮಿಳುನಾಡಿನ ಗಜ ಚಂಡಮಾರುತದಿಂದ 28 ಜನರ ಸಾವು, 11 ಜಿಲ್ಲೆಗಳಿಗೆ ಎಫೆಕ್ಟ್..!

ತಮಿಳುನಾಡಿನ ಗಜ ಚಂಡಮಾರುತದಿಂದ ಕನಿಷ್ಠ 28 ಜನರ ಸಾವು ಸಂಭವಿಸಿದೆ. ಜೊತೆಗೆ 11 ಜಿಲ್ಲೆಗಳಿಗೆ ಎಫೆಕ್ಟ್ ಆಗಿದೆ. ಸುಮಾರು ಒಂದು ಲಕ್ಷ ಜನರು ನಿರಾಶ್ರಿತರಾಗಿದ್ದಾರೆ. ನೆರೆಯ ರಾಜ್ಯ ತಮಿಳುನಾಡಿನ ತೀರ ದಾಟಿ ನಾಗಪಟ್ಟಣಂ ಮತ್ತು ಹತ್ತಿರದ ವೇದರಣ್ಣಿಯಂ ನಡುವೆ ಶುಕ್ರವಾರ ನಸುಕಿನ ಜಾವದಲ್ಲಿ. ಈ ಚಂಡಮಾರುತ 120 ಕಿಲೋ ಮೀಟರ್ ವೇಗದಲ್ಲಿ ಬೀಸಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.
ನಾಗಪಟ್ಟಣಂ, ಪುದುಕೊಟ್ಟೈ, ರಾಮನಾಥಪುರಂ ಮತ್ತು ತಿರುವಾರೂರು ಸೇರಿದಂತೆ 6 ಜಿಲ್ಲೆಗಳ ತಗ್ಗು ಪ್ರದೇಶಗಳಿಂದ ಸುಮಾರು 76,000 ಮಂದಿಯನ್ನು ರಕ್ಷಿಸಲಾಗಿದೆ. ರಕ್ಷಿಸಿದವರಲ್ಲಿ ಸುಮಾರು 300 ಆಶ್ರಯ ತಾಣಗಳಲ್ಲಿ ಆಶ್ರಯ ಒದಗಿಸಲಾಗಿದೆ. ತೀವ್ರ ಮಳೆ, ಗಾಳಿಯಿಂದಾಗಿ ಮರಗಳು ನೆಲಕ್ಕುರುಳಿವೆ, ಮನೆಗಳು ಹಾನಿಗೀಡಾಗಿವೆ.

ನಾಗಪಟ್ಟಣಂ ಜಿಲ್ಲೆಯಲ್ಲಿ ನಾಲ್ಕು ರಾಷ್ಟ್ರೀಯ ವಿಪತ್ತು ನಿರ್ಬಹಣಾ ತಂಡಗಳು ಮತ್ತು ಕದ್ದಲೂರು ಜಿಲ್ಲೆಯಲ್ಲಿ ಎರಡು ತಂಡಗಳು ನಿಯೋಜನೆಗೊಂಡಿವೆ. ಚಂಡಮಾರುತ ಸಮಯದಲ್ಲಿ ಜನರು ಏನು ಮಾಡಬಾರದು ಮತ್ತು ಏನು ಮಾಡಬೇಕು ಎಂದು ತೋರಿಸುವ ಅನಿಮೇಷನ್ ವಿಡಿಯೋವನ್ನು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಬಿಡುಗಡೆ ಮಾಡಿದೆ.

ಚಂಡಮಾರುತದಲ್ಲಿ ಸಿಲುಕಿಕೊಂಡು ಅಪಾಯದಲ್ಲಿದ್ದವರಿಗೆ ಸರ್ಕಾರ ರಾಜ್ಯ ಮಟ್ಟದಲ್ಲಿ 1070 ಸಹಾಯವಾಣಿಯನ್ನು ಮತ್ತು ಜಿಲ್ಲೆಗಳಲ್ಲಿ 1077 ಸಹಾಯವಾಣಿಯನ್ನು ನೀಡಿದೆ.

Leave a Reply

Your email address will not be published.

Social Media Auto Publish Powered By : XYZScripts.com