ರಾಮನಗರ : ಹೆತ್ತ ತಾಯಿಯನ್ನೇ ಕೊಂದು ರುಂಡದೊಂದಿಗೆ ಪೋಲೀಸರಿಗೆ ಶರಣಾದ ಮಗ..!

ರಾಮನಗರ : ಜನ್ಮಕೊಟ್ಟ ತಾಯಿಯನ್ನೆ ಕೊಲೆಗೈದು ರುಂಡ ಮುಂಡ ಬೇರ್ಪಡಿಸಿ ಪೋಲೀಸರಿಗೆ ತಾನೆ ಶರಣಾಗಿರುವ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಕರಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕೊಲೆಯಾದ ದುರ್ದೈವಿಯನ್ನು ಪಾರ್ವತಮ್ಮ (45) ಎಂದು ಗುರುತಿಸಲಾಗಿದ್ದು ಈಕೆಯ ಮಗ ಕುಮಾರ್ ಎಂಬಾತನೇ ತನ್ನ ತಾಯಿಯನ್ನು ಕೊಲೆ ಮಾಡಿರುವ ಭೂಪ. ತನ್ನ ಮನೆಯ ಬಳಿಯೇ ತಾಯಿಯನ್ನು ಕೊಲೆ ಮಾಡಿ ರುಂಡ ಮುಂಡವನ್ನು ಬೇರ್ಪಡಿಸಿದ್ದಲ್ಲದೆ ಸೀದಾ ಅಕ್ಕೂರು ಪೋಲೀಸ್ ಠಾಣೆಗೆ ತೆರಳಿ ತನ್ನ ತಾಯಿಯನ್ನು ಕೊಲೆ ಮಾಡಿರುವುದಾಗಿ ಅರೋಪಿ ಒಪ್ಪಿಕೊಂಡಿದ್ದಾನೆ.

ಕೊಲೆಗೆ ನಿಖರ ಕಾರಣ ತಿಳಿದ್ದುಬಂದಿಲ್ಲ. ಘಟನೆ ಬಗ್ಗೆ ಅಕ್ಕೂರು ಪೋಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯೊಂದಿಗೆ ಸ್ಥಳಕ್ಕೆ ತೆರಳಿ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published.