ಗದಗ ಜಿಲ್ಲೆಯ ರೈತನ ಕೆರೆಯಲ್ಲಿ 8 ಪೂಟ್ ಗೆ ಚಿಮ್ಮಿದ ಜೀವಜಲ – ಅಚ್ಚರಿಗೊಂಡ ಜನ

ಬಡ ರೈತನೊಬ್ಬ ನರೇಗಾ ಯೋಜನೆಯಡಿ ತನಗಿರೋ ಎರಡು ಎಕರೇ ಜಮೀನಿನಲ್ಲಿ ಕೆರೆ ತಗಿಸೋ ಸಂದರ್ಭದಲ್ಲಿ ಕೇವಲ 8 ಫೂಟ್ ಗೆ ನೀರು ಬಂದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಗದಗ ತಾಲೂಕಿನ ಹಿರೇಹಂದಿಗೋಳದ ಬಡ ರೈತನಾದ ಮಹಾದೇವಪ್ಪ ಕುರ್ತಕೋಟಿ ತನಗೆ ಇರೋ 2 ಎಕರೆ 19 ಗುಂಟೆ ಜಮೀನಿನಲ್ಲಿ ಸಾಲ – ಸೂಲ ಮಾಡಿ ಇದುವರಗೂ ಬದುಕನ್ನು ಸಾಗಿಸುತ್ತಿದ್ದ. ಕಳೇದ ಹಲವಾರು ವರ್ಷಗಳಿಂದ ತಿವ್ರ ಬರಗಾಲದಿಂದ ಕಂಗೆಟ್ಟ ರೈತ ಜಿಲ್ಲಾ ಪಂಚಾಯತಿಯ ಮಹತ್ಮಾ ಗಾಂಧೀಜಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆ ನಿರ್ಮಿಸಲು ಕೃಷಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡು ಕೆರೆ ನಿರ್ಮಿಸಲು ಮುಂದಾಗಿದ್ದ. ಕಳೇದ ಎಂಟು ದಿನಗಳಿಂದ 16 ಜನ ಕೂಲಿ ಕಾರ್ಮಿಕರು ಕೆಲಸ ಮಾಡಿದ್ದು ಕೇವಲ 8 ಪೂಟ್ ಕೆರೆ ತಗೆಯುವದರೊಳಗೆ ಜೀವಜಲ ಉಕ್ಕಿದ್ದು ರೈತನಿಗೆ ಹೇಳಲಾರದ ಸಂತೋಷವಾಗಿದೆ. ಅದೇ ನೀರನ್ನು ಬಾಡುತ್ತಿರೋ ಮೆಣಸಿನಕಾಯಿ- ಉಳ್ಳಾಗಡ್ಡಿ ಬೆಳೆಗೆ ನೀರು ಹಾಯಿಸಿ ಬದುಕನ್ನು ವೃದ್ದಿಸಿಕೊಳ್ಳಲು ಮುಂದಾಗಿದ್ದಾನೆ.ಗದಗ ಸುತ್ತ ಮುತ್ತ ಬಾಗದಲ್ಲಿ 200 ಪೂಟ್ ಗಿಂತಲೂ ಹೆಚ್ಚಿಗೆ ಬೊರವೆಲ್ ಕೊರಿಸಿ ನೀರಿಗಾಗಿ ಜನ ಕಾಯ್ದರು ಸಹ ನೀರು ಬರದೆ ಇರೋ ಸಂದರ್ಭದಲ್ಲಿ ಈ ಬಡ ರೈತನ ಹೊಲದಲ್ಲಿ ಕೇವಲ 8 ಫೂಟ್ ಗೆ ನೀರು ಬಂದಿದ್ದು ಎಲ್ಲರಲ್ಲೂ ಅಚ್ಚರಿ ತಂದಿದೆ.

 

Leave a Reply

Your email address will not be published.

Social Media Auto Publish Powered By : XYZScripts.com