ಗಜ ಸೈಕ್ಲೋನ್ : ನಿರಾಶ್ರಿತರಿಗೆ ನೀಡಿದ ಫುಡ್ ಪ್ಯಾಕೇಟ್ ಮೇಲೆ ರಜನಿಕಾಂತ್ ಚಿತ್ರ..!

ನೆರೆಯ ರಾಜ್ಯ ತಮಿಳುನಾಡಿನ ತೀರ ದಾಟಿ ನಾಗಪಟ್ಟಣಂ ಮತ್ತು ಹತ್ತಿರದ ವೇದರಣ್ಣಿಯಂ ನಡುವೆ ಶುಕ್ರವಾರ ನಸುಕಿನ ಜಾವದಲ್ಲಿ ಸಂಭವಿಸಿದ ಗಜ ತಂಡಮಾರುತದಿಂದ ಉಂಟಾದ ಹಾನಿ ಹೇಳತೀರದ್ದು. ಕನಿಷ್ಠ 28 ಜನರ ಸಾವು ಸಂಭವಿಸಿದೆ.

ತಮಿಳುನಾಡಿನ 11 ಜಿಲ್ಲೆಗಳಿಗೆ ಗಜ ಸೈಕ್ಲೋನಿನ ಎಫೆಕ್ಟ್ ಆಗಿದ್ದು, ಸುಮಾರು ಒಂದು ಲಕ್ಷ ಜನರು ನಿರಾಶ್ರಿತರಾಗಿದ್ದಾರೆ. ಈ ನಿರಾಶ್ರಿತರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ವಿತರಿಸಲಾದ ಊಟದ ಪ್ಯಾಕೇಟ್ ಮೇಲೆ ಸೂಪರ್ ಸ್ಟಾರ್ ರಜನಿಕಾಂತ್ ಅವರ ಚಿತ್ರದ  ಸ್ಟ್ಯಾಂಪ್ ಇದೆ. ಇಂತಹ ಸಮಯವನ್ನೂ ಸಹ ಪ್ರಚಾರಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬಂತಹ ಆರೋಪದ ಮಾತುಗಳು ಕೇಳಿಬಂದಿದೆ.

Leave a Reply

Your email address will not be published.

Social Media Auto Publish Powered By : XYZScripts.com