ಬಾರ್ಡರ್ ಚಿತ್ರದ ಸ್ಫೂರ್ತಿ ಯುದ್ಧವೀರ ಬ್ರಿಗೇಡಿಯರ್ ಕೆ.ಎಸ್.ಚಂದ್‌ಪುರಿ ಇನ್ನಿಲ್ಲ

ಯುದ್ಧವೀರ ನಿವೃತ್ತ ಬ್ರಿಗೇಡಿಯರ್ ಕುಲದೀಪ್ ಸಿಂಗ್ ಚಂದ್‌ಪುರಿ ಅವರು ಮೊಹಾಲಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು. 1971ರ ಭಾರತ- ಪಾಕಿಸ್ತಾನ ಯುದ್ಧದ ವೇಳೆ ಚಂದ್‌ಪುರಿ ಅವರು ಸೇನಾ ಮೇಜರ್ ಆಗಿದ್ದರು. ಪ್ಯಾಟನ್ ಟ್ಯಾಂಕ್‌ಗಳೊಂದಿಗೆ ಪಾಕಿಸ್ತಾನದ ರಾತ್ರಿ ದಾಳಿ ನಡೆಸುವ ವೇಳೆ ಚಂದ್‌ಪುರಿ ಅವರೊಂದಿಗೆ ರಾಜಸ್ಥಾನದ ಲೋಂಜೆವಾಲಾದ ಪೋಸ್ಟ್‌ ನಲ್ಲಿ ಕಾವಲು ಕಾಯುತ್ತಿದ್ದವುರು ಕೇವಲ 120 ಯೋಧರು. ಆದರೂ ಬೆದರದೆ ಪಾಕ್ ಸೇನೆಯನ್ನು ಎದುರಿಸಿತ್ತು ಚಂದ್‌ಪುರಿ ನೇತೃತ್ವದ ಪಡೆ. ಇದು ಲೋಂಜೆವಾಲಾ ಕದನವೆಂದು ಪ್ರಸಿದ್ಧವಾಗಿದೆ.
ಟ್ಯಾಂಕ್‌ಗಳ ವಿರುದ್ಧ ಎದೆಯೊಡ್ಡಿ ಹೋರಾಡಿ ವಿರೋಧಿಗಳ ಹಿಮ್ಮೆಟಿಸಿದ್ದಕ್ಕಾಗಿ ಚಂದ್‌ಪುರಿ ಅವರಿಗೆ ಮಹಾವೀರ ಚಕ್ರ ನೀಡಿ ಗೌರವಿಸಲಾಗಿತ್ತು.
ಬ್ರಿಗೇಡಿಯರ್ ಚಂದ್‌ಪುರಿ ಅವರ ಪಡೆಯ ಈ ಸಾಹಸದ ಕಥೆಯನ್ನೇ ಆಧರಿಸಿ ನಿರ್ಮಿಸಲಾಗಿದ್ದ ಹಿಂದಿ ಚಿತ್ರ ಬಾರ್ಡರ್ ಸೂಪರ್ ಹಿಟ್ ಆಗಿತ್ತು. ಚಂದ್‌ಪುರಿ ಅವರ ಪಾತ್ರವನ್ನು ಸನ್ನಿ ಡಿಯೋಲ್ ನಿರ್ವಹಿಸಿದ್ದರು.
ಬ್ರಿಗೇಡಿಯರ್ ಚಂದ್‌ಪುರಿ ನಿಧನಕ್ಕೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಸಹಿತ ಅನೇಕ ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ.

7 thoughts on “ಬಾರ್ಡರ್ ಚಿತ್ರದ ಸ್ಫೂರ್ತಿ ಯುದ್ಧವೀರ ಬ್ರಿಗೇಡಿಯರ್ ಕೆ.ಎಸ್.ಚಂದ್‌ಪುರಿ ಇನ್ನಿಲ್ಲ

Leave a Reply

Your email address will not be published.

Social Media Auto Publish Powered By : XYZScripts.com