ಏನ್ ಮಾಡ್ತಾಯಿದೆ ನೋಡಿ ತಮಿಳುನಾಡಿನಲ್ಲಿ ಗಜ ಚಂಡಮಾರುತ..!

ನೆಲಕ್ಕುರುಳಿದ ಮರ-ಗಿಡಗಳು. ಹಾರಿ ಹೋದ ಮನೆಯ ಮೇಲಿನ ಹೆಂಚುಗಳು. ತೀರಭಾಗಗಳಲ್ಲಿ ಕಡಿತಗೊಂಡ ವಿದ್ಯುತ್. ಬೆಳಕರಿಯುವ ಹೊತ್ತಿಗೆ ಮನೆ ಹೊರಗಿದ್ದ ಸಾಮಾನುಗಳು ಅಲ್ಲೋಲ ಕಲ್ಲೋಲ. ಏನಾಯ್ತು ಅನ್ನೋ ಹೊತ್ತಿಗೆ ಕಣ್ಣು ಉಜ್ಜಿಕೊಂಡು ನೋಡಿದರೆ ತೀವ್ರ ಪರಿಣಾಮ ಬೀರುವ ಗಜ ಚಂಡಮಾರುತ ಬೆಳಗಿನ ಜಾವವೇ ತನ್ನ ಪ್ರದರ್ಶನ ನೀಡಿತ್ತು.
ನೆರೆಯ ರಾಜ್ಯ ತಮಿಳುನಾಡಿನ ತೀರ ದಾಟಿ ನಾಗಪಟ್ಟಣಂ ಮತ್ತು ಹತ್ತಿರದ ವೇದರಣ್ಣಿಯಂ ನಡುವೆ ಶುಕ್ರವಾರ ನಸುಕಿನ ಜಾವದಲ್ಲಿ. ಈ ಚಂಡಮಾರುತ 120 ಕಿಲೋ ಮೀಟರ್ ವೇಗದಲ್ಲಿ ಬೀಸಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.
ನಾಗಪಟ್ಟಣಂ, ಪುದುಕೊಟ್ಟೈ, ರಾಮನಾಥಪುರಂ ಮತ್ತು ತಿರುವಾರೂರು ಸೇರಿದಂತೆ 6 ಜಿಲ್ಲೆಗಳ ತಗ್ಗು ಪ್ರದೇಶಗಳಿಂದ ಸುಮಾರು 76,000 ಮಂದಿಯನ್ನು ರಕ್ಷಿಸಲಾಗಿದೆ. ರಕ್ಷಿಸಿದವರಲ್ಲಿ ಸುಮಾರು 300 ಆಶ್ರಯ ತಾಣಗಳಲ್ಲಿ ಆಶ್ರಯ ಒದಗಿಸಲಾಗಿದೆ. ಕಳೆದ ರಾತ್ರಿಯಿಂದಲೂ ಮಳೆ ಸುರಿಯುತ್ತದ್ದ ನಾಗಪಟ್ಟಣಂನಲ್ಲಿ ಇಂದು ಕೂಡ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ತೀವ್ರ ಮಳೆ, ಗಾಳಿಯಿಂದಾಗಿ ಮರಗಳು ನೆಲಕ್ಕುರುಳಿವೆ, ಮನೆಗಳು ಹಾನಿಗೀಡಾಗಿವೆ. ಗಂಟೆಗೆ 110 ಕಿಲೋ ಮೀಟರ್ ನಿಂದ 120 ಕಿಲೋ ಮೀಟರ್ ವೇಗದಲ್ಲಿ ಬೀಸುತ್ತಿರುವ ಗಾಳಿ ತೀವ್ರವಾದಂತೆ ನಾಗಪಟ್ಟಣಂ, ತಿರುವಾರೂರು, ತಂಜಾವೂರುಗಳಂತಹ ಸ್ಥಳಗಳಲ್ಲಿ ಇಂದು ಮಧ್ಯಾಹ್ನದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಮಾನ ಇಲಾಖೆ ತಿಳಿಸಿದೆ.
ನಾಗಪಟ್ಟಣಂ ಜಿಲ್ಲೆಯಲ್ಲಿ ನಾಲ್ಕು ರಾಷ್ಟ್ರೀಯ ವಿಪತ್ತು ನಿರ್ಬಹಣಾ ತಂಡಗಳು ಮತ್ತು ಕದ್ದಲೂರು ಜಿಲ್ಲೆಯಲ್ಲಿ ಎರಡು ತಂಡಗಳು ನಿಯೋಜನೆಗೊಂಡಿವೆ. ಚಂಡಮಾರುತ ಸಮಯದಲ್ಲಿ ಜನರು ಏನು ಮಾಡಬಾರದು ಮತ್ತು ಏನು ಮಾಡಬೇಕು ಎಂದು ತೋರಿಸುವ ಅನಿಮೇಷನ್ ವಿಡಿಯೋವನ್ನು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಬಿಡುಗಡೆ ಮಾಡಿದೆ.
ಚಂಡಮಾರುತದಲ್ಲಿ ಸಿಲುಕಿಕೊಂಡು ಅಪಾಯದಲ್ಲಿದ್ದವರಿಗೆ ಸರ್ಕಾರ ರಾಜ್ಯ ಮಟ್ಟದಲ್ಲಿ 1070 ಸಹಾಯವಾಣಿಯನ್ನು ಮತ್ತು ಜಿಲ್ಲೆಗಳಲ್ಲಿ 1077 ಸಹಾಯವಾಣಿಯನ್ನು ನೀಡಿದೆ.

Leave a Reply

Your email address will not be published.