ಪೊನ್ನಂಪೇಟೆ ರಾಮಕೃಷ್ಣ ಆಶ್ರಮದ ಜಗದಾತ್ಮಾನಂದ ಸ್ವಾಮೀಜಿ ವಿಧಿವಶ..

ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಆಶ್ರಮದ ಹಿರಿಯ ಯತಿಗಳಾದ ಸ್ವಾಮಿ ಶ್ರೀ ಜಗದಾತ್ಮಾನಂದ ಮಹರಾಜ ರವರು ಗುರುವಾರ ಸಂಜೆ 7.29 ರ ಸಮಯದಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು. ನ್ಯುಮೋನಿಯಾದಿಂದ ಬಳಲುತ್ತಿದ್ದ ಜಗದಾತ್ಮಾನಂದ ಸ್ವಾಮೀಜಿ ಕಳೆದ ತಿಂಗಳಿನಿಂದ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

“ಬದುಕಲು ಕಲಿಯಿರಿ” ಕೃತಿ ಮೂಲಕ ಮನೆಮಾತಾಗಿದ್ದ ಶ್ರೀ ಜಗದಾತ್ಮಾನಂದ ಸ್ವಾಮೀಜಿ ಕೊಡಗಿನ ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ ಸಂಸ್ಥಾಪಕರೂ ಹೌದು.

ಜಗದಾತ್ಮಾನಂದ ಶ್ರೀಗಳ “ಬದುಕಲು ಕಲಿಯಿರಿ” ಸರಣಿಯ ಪುಸ್ತಕಗಳು 9 ಭಾಷೆಗೆ ಅನುವಾದಗೊಂಡು ದಾಖಲೆ ಮೆರೆದಿವೆ. ಮೊದಲನೆಯ ಭಾಗ 1981ರಲ್ಲಿ ಪ್ರಕಟವಾಗಿದ್ದು, ಹದಿಮೂರನೆಯ ಮುದ್ರಣ 2003 ರಲ್ಲಿ ಪ್ರಕಟವಾಯಿತು. ಈ ವೇಳೆ, ಒಟ್ಟು 85 ಸಾವಿರ ಪ್ರತಿಗಳು ಮಾರಾಟವಾಗಿದ್ದವು. ಇದರ ಎರಡನೆಯ ಭಾಗ 1986ರಲ್ಲಿ ಬೆಳಕಿಗೆ ಬಂತು. ಇದರ ಒಂಭತ್ತನೆಯ ಮುದ್ರಣ 2002 ರಲ್ಲಿ ಪ್ರಕಟವಾಗಿತ್ತು.

Leave a Reply

Your email address will not be published.

Social Media Auto Publish Powered By : XYZScripts.com