Bigg Boss 6 : ಆ್ಯಂಡಿಯಿಂದ ಮೊಟ್ಟೆ ಹೊಡೆಸಿಕೊಂಡು ಕಣ್ಣೀರಿಟ್ಟ ಜಯಶ್ರೀ-ಸೋನು..!

ಬಿಗ್ ಬಾಸ್ ಮನೆಯಲ್ಲಿ ಆಟ ಜೋರಾಗಿ ನಡೆಯುತ್ತಿದೆ. ಪ್ರತಿ ದಿನ ನಡೆಯುವ ಒಂದೊಂದು ಟಾಸ್ಕ್ ಗಳಲ್ಲಿ ಸ್ಪರ್ಧಿಗಳ ರಿಯಲ್ ಬಣ್ಣ ಬಯಲಾಗ್ತಾಯಿದೆ. ನಿನ್ನೆ ನೀಡಿದ ‘ಮಗುವಾಗೋಣ ಬಾ’ ಟಾಸ್ಕ್ ನಲ್ಲಿ ಬಿಗ್ ಬಾಸ್ ಸೂಚಿಸಿದ ಸ್ಪರ್ಧಿಗಳು ಮಗುವಿನಂತೆ ಬಝರ್ ಆಗುವವರೆಗೆ ನಟಿಸಬೇಕಿತ್ತು. ಈ ಆಟ ಶುರುವಿನಲ್ಲಿ ಚೆನ್ನಾಗಿತ್ತು ಆದರೆ ಯಾವಾಗ ಆಂಡಿ ಮಗುವಾಗಿ ನಟಿಸುವ ಸಮಯ ಬಂತೋ ಆಗಲೇ ಶುರುವಾಗಿದ್ದು ಮನಸ್ತಾಪ.

ಹೌದು.. ಬಿಗ್ ಬಾಸ್ ನೀಡಿದ ಟಾಸ್ಕ್ ನಲ್ಲಿ ಆಂಡಿ ಮಗುವಾಗಿ ನಟಿಸಬೇಕಾದರೆ ಜಯಶ್ರೀ ಹಾಗೂ ಸೋನು ಪಾಟೀಲ್ ತಲೆಯ ಮೇಲೆ ಮೊಟ್ಟೆ ಹೊಡೆದರು. ಇದರಿಂದ ಬೇಸರಗೊಂಡ ಜಯಶ್ರೀ ಹಾಗೂ ಸೋನು ಗಳಗಳನೇ ಅಳತೊಡಗಿದ್ರು. ಮೊಟ್ಟೆಯನ್ನೇ ತಿನ್ನದ ನಾನು ಯಾವುತ್ತು ಮುಟ್ಟಿ ಕೂಡ ಇಲ್ಲ ನಾನು ತಿನ್ನುವುದಿಲ್ಲ ಅಂತ ಗೊತ್ತಿದ್ದು ನನ್ನ ತಲೆಯ ಮೇಲೆ ಮೊಟ್ಟೆ ಹೊಡೆದಿದ್ದು ನನಗೆ ತುಂಬಾ ಬೇಸರವಾಗಿದೆ ಅಂತ ಸೋನು ಅಳತೊಡಗಿದ್ರು. ಇನ್ನೊಂದು ಕಡೆ ಜಯಶ್ರೀ ಯಾವಗಲೂ ನನ್ನೇ ಟಾರ್ಗೆಟ್ ಮಾಡಲಾಗ್ತಾಯಿದೆ. ಮನೆ ಜನ, ಮಗು ಬಿಟ್ಟು ಸಾಧಿಸಬೇಕು ಅಂತ ಬಂದಾಗ ನನಗೆ ಹೀಗೆ ಆಗುತ್ತಿರುವುದು ಬೇಸರ ಎಂದು ಕಣ್ನೀರಿಟ್ಟರು.

ಮನೆಯ ಸದಸ್ಯರನ್ನು ಗೌರವದಿಂದ ನೋಡಬೇಕು. ಮೊಟ್ಟೆ ತಿನ್ನುವವರ ಮೇಲೆ ಮೊಟ್ಟೆ ಹೊಡೆದರೆ ಅಭಾಸ ಅನುಸುತ್ತಿರಲಿಲ್ಲ. ಆದರೆ ಯಾವತ್ತೂ ಮೊಟ್ಟೆಯನ್ನೇ ಮುಟ್ಟದವರ ತಲೆಯ ಮೇಲೆ ಮೊಟ್ಟೆ ಹೊಡೆದಿದ್ದು ತಪ್ಪು ಅಂತ ಮನೆಯ ಸದಸ್ಯರು ಮಾತನಾಡಿಕೊಂಡರು. ಇನ್ನೂ ಆಂಡಿ ತಾವು ನಾನ್ ವೆಜ್ ಅಂತ ತೋರಿಸಿಕೊಂಡರೆ ತಮ್ಮ ಸಮುದಾಯದವರು ಓಟ್ ಹಾಕ್ತಾರೆ ಅನ್ನೋ ಗಿಮಿಕ್ ಇದು ಅಂತ ಹೇಳಿದರು. ಈ ವೇಳೆ ಮೊಟ್ಟೆ ಹೊಡಿಸಿಕೊಂಡು ಸೋನು ಹಾಗೂ ಜಯಶ್ರೀ ಬೇಸರ ಮಾಡಿಕೊಂಡಿದ್ದರಿಂದ ಆಂಡಿ ಪರೋಕ್ಷವಾಗಿ ಇಬ್ಬರಿಗೂ ಕ್ಷಮೆಯಾಚಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com