Women’s WT20 : ಐರ್ಲೆಂಡ್ ಮಣಿಸಿ ಸೆಮಿಫೈನಲ್‍ಗೆ ಅಡಿಯಿಟ್ಟ ಟೀಮ್ಇಂಡಿಯಾ

ಗಯಾನಾದ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಐಸಿಸಿ ಮಹಿಳೆಯರ ವಿಶ್ವಕಪ್ ಟೂರ್ನಿಯ ‘ಬಿ’ ಗುಂಪಿನ ಲೀಗ್ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 52 ರನ್ ಜಯ ಸಾಧಿಸಿದ ಭಾರತ ವನಿತೆಯರ ತಂಡ ಸೆಮಿಫೈನಲ್ ಪ್ರವೇಶಿಸಿದೆ.

ಟಾಸ್ ಗೆದ್ದ ಐರ್ಲೆಂಡ್ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ನಡೆಸಿದ ಭಾರತ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 145 ರನ್ ಮೊತ್ತ ದಾಖಲಿಸಿತು. ಭಾರತದ ಪರವಾಗಿ ಆರಂಭಿಕ ಆಟಗಾರರಾದ ಮಿಥಾಲಿ ರಾಜ್ 51 ಹಾಗೂ ಸ್ಮೃತಿ ಮಂದಾನಾ 33 ರನ್ ಗಳಿಸಿದರು.

ಟಾರ್ಗೆಟ್ ಚೇಸ್ ಮಾಡಲಿಳಿದ ಐರ್ಲೆಂಡ್ 20 ಓವರ್ ಗಳ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 93 ರನ್ ಮಾತ್ರ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಉತ್ತಮ ಬೌಲಿಂಗ್ ಪ್ರದರ್ಶಿಸಿದ ಭಾರತದ ರಾಧಾ ಯಾದವ್ 3 ಹಾಗೂ ದೀಪ್ತಿ ಶರ್ಮಾ 2 ವಿಕೆಟ್ ಪಡೆದರು.

Leave a Reply

Your email address will not be published.

Social Media Auto Publish Powered By : XYZScripts.com