ಬಿಗ್ ಬಾಸ್ ಮನೆಯಲ್ಲಿ ಕುಚ್ ಕುಚ್ ಅಂತಿದಿಯಾ ಅಕ್ಷ-ರಾಕಿ ಹೃದಯ..?

ಮೊನ್ನೆಯಷ್ಟೇ ರಾತ್ರಿ 2 ಗಂಟೆ ಸುಮಾರಿಗೆ ಎದ್ದು ಆನಂದ್ ಮಾಲ್ಗತ್ತಿಯೊಂದಿಗೆ ನಾನು ಅಕ್ಷತಾ ಳನ್ನ ಅವೈಡ್ ಮಾಡ್ತೀನಿ ಅಂತಿದ್ದ ರಾಕೇಶ್ ಪುನ: ವಾಸ್ತು ಪ್ರಕಾರ ಚೆನ್ನಾಗಿರುವ ಜಾಗವನ್ನು ಅಕ್ಷತಾ ಜೊತೆ ಮಾತನಾಡಲು ಹುಡುಕಿದ್ದಾರೆ. ಎರಡು ದಿನದ ಗೊಂಬೆ ಆಟವಯ್ಯ ಟಾಸ್ಕ್ ನಲ್ಲಿ ಇವರಿಬ್ಬರ ನಡುವೆ ತಂಡಕ್ಕೆ ಆಯ್ಕೆ ಹಾಗೂ ಉತ್ತಮ ಆಟಗಾರನ ಆಯ್ಕೆಯಲ್ಲಿ ಚಿಗುರೊಡೆದ ಮನಸ್ತಾಪ ನಿನ್ನೆ ಇದ್ದಕ್ಕಿಂದ್ದಂತೆ ಹಣ್ಮರೆಯಾಗಿದೆ.
ಯಾವಾಗಲೂ ಮನೆಯ ಸದಸ್ಯರಿಂದ ಪ್ರತ್ಯೇಕವಾಗಿ ಕುಳಿತು ಮಾತನಾಡುತ್ತಿದ್ದ ಇವರಿಬ್ಬರೂ ನಿನ್ನೆ ಕೂಡ ಕೈ ಕೈ ಕುಲುಕುತ್ತಾ ಮನಬಿಚ್ಚಿ ಮಾತನಾಡಿದರು. ಶನಿವಾರ ರಾತ್ರಿ ಇದೇ ಮನೆಯಲ್ಲಿದ್ದರೆ ಇಲ್ಲೇ ಮಾತನಾಡೋಣ. ಈ ಸ್ಥಳ ಚೆನ್ನಾಗಿದೆ ಅಂತ ರಾಕೇಶ್ ಹೇಳಿದರೆ, ನಿನ್ನ ಜೊತೆ ಮಾತನಾಡದೇ ಇರೋದಕ್ಕೆ ಆಗಲ್ಲ ಅಂತ ಅಕ್ಷತಾ ಹೇಳಿದರು. ಇಬ್ಬರೂ ಒಂದು ಹಗ್ ಮಾಡೋಣ ಎಂದು ಪರಸ್ಪರ ಅಪ್ಪಿಕೊಂಡರು.

Leave a Reply

Your email address will not be published.