ಸಂಗೀತಗಾರ ಟಿ.ಎಂ ಕೃಷ್ಣಗೆ ರಾಷ್ಟ್ರ ವಿರೋಧಿ ಹಣೆಪಟ್ಟಿ : ಸಂಗೀತ ಕಾರ್ಯಕ್ರಮ ರದ್ದು

ಪ್ರಸಿದ್ಧ ಕರ್ನಾಟಕ ಶಾಸ್ತ್ರೀಯ ಸಂಗೀತಗಾರ ಟಿಎಂ ಕೃಷ್ಣ ಅವರಿಗೆ ಬಲಪಂಥೀಯ ಟ್ರೋಲ್‌ಗಳು ರಾಷ್ಟ್ರ ವಿರೋಧಿ ಹಾಗೂ ನಗರ ನಕ್ಸಲ್ ಎಂಬ ಹಣೆಪಟ್ಟಿಯನ್ನು ಕಟ್ಟಿದ ಬೆನ್ನಲ್ಲೇ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಅವರ ಸಂಗೀತ ಕಾರ್ಯಕ್ರಮವನ್ನೇ ರದ್ದುಗೊಳಿಸಿದೆ.
ಎಎಐ ಹಾಗೂ ಸಾಂಸ್ಕೃತಿಕ ಮಂಡಳಿಯಾದ ಸ್ಪಿಕ್-ಮೆಕೇ ಜಂಟಿಯಾಗಿ ಚಾಣಕ್ಯಪುರಿಯ ನೆಹರು ಪಾರ್ಕ್‌ನಲ್ಲಿ ಎರಡು ದಿನಗಳ ‘ಡ್ಯಾನ್ಸ್ ಮತ್ತು ಮ್ಯೂಸಿಕ್ ಇನ್ ದಿ ಪಾರ್ಕ್’ ಎಂಬ ಕಾರ್ಯಕ್ರಮವನ್ನು ಆಯೋಜಿಸಿವೆ. ಅದರಲ್ಲಿ ಟಿಎಂ ಕೃಷ್ಣ ಅವರ ಹಾಡುಗಾರಿಕೆಯೂ ಇರಲಿದೆ ಎಂದು ಎಎಐ ಟ್ವೀಟ್ ಮೂಲಕ ನ.10ರಂದು ಪ್ರಕಟಿಸಿತ್ತು. ಹಲವು ಪತ್ರಿಕೆಗಳಲ್ಲೂ ಈ ಕುರಿತ ಜಾಹೀರಾತುಗಳು ಪ್ರಕಟವಾಗಿದ್ದವು.

Image result for tm krishna concert cancelled

ಇಷ್ಟಾದ ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಬಲಪಂಥೀಯರ ಟ್ರೋಲ್‌ಗಳು ಶುರುವಾಗಿದ್ದವು. ಜೀಸಸ್ ಮತ್ತು ಅಲ್ಲಾ ಕುರಿತು ಹಾಡಿದ ಕೃಷ್ಣ ಅವರು ಭಾರತ ವಿರೋಧಿ, ಮತಾಂತರಗೊಂಡ ವ್ಯಕ್ತಿ. ನಗರ ನಕ್ಸಲ್ ಎಂಬುದಾಗಿ ಅವರ ವಿರುದ್ಧ ಟ್ವೀಟ್‌ಗಳು ಹರಿದಾಡಿದವು. #DisinviteTMKrishna ಹ್ಯಾಶ್‌ಟ್ಯಾಗ್‌ನಲ್ಲಿ ಟ್ವೀಟ್‌ಗಳನ್ನು ಎಎಐ ಹಾಗೂ ಕೇಂದ್ರ ವಿಮಾನಯಾನ ಸಚಿವರಿಗೆ ಟ್ಯಾಗ್ ಮಾಡಲ್ಪಟ್ಟವು.

ಇದಾದ ಬಳಿಕ ದಿಢೀರ್ ಆಗಿ ಮಂಗಳವಾರ ರಾತ್ರಿ ಸ್ಪಿಕ್ ಮೆಕೇಯನ್ನು ಸಂಪರ್ಕಿಸಿದ ವಿಮಾನ ನಿಲ್ದಾಣಗಳ ಪ್ರಾಧಿಕಾರ, ತುರ್ತು ಕಾರ್ಯಗಳಿರುವುದರಿಂದ ಈ ಕಾರ್ಯಕ್ರಮವನ್ನು ನಡೆಸಲು ಸಾಧ್ಯವಾಗುವುದಿಲ್ಲ. ಹೊಸ ದಿನಾಂಕಕ್ಕೆ ಕಾರ್ಯಕ್ರಮವನ್ನು ಮುಂದೂಡೋಣ ಎಂದು ಮನವಿ ಸಲ್ಲಿಸಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಮಾಡಿದೆ.

Leave a Reply

Your email address will not be published.