Women’s WT20 : ಸೋಲಿನಿಂದ ನಿರಾಸೆ – ಪತ್ರಿಕಾ ಗೋಷ್ಟಿಯಲ್ಲಿ ಕಣ್ಣೀರಿಟ್ಟ ಐರ್ಲೆಂಡ್ ನಾಯಕಿ..!

ಗಯಾನಾದ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಮಹಿಳೆಯರ ವಿಶ್ವಕಪ್ ಟೂರ್ನಿಯ ‘ಬಿ’ ಗುಂಪಿನ ಲೀಗ್ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಪಾಕಿಸ್ತಾನ 38 ರನ್ ಜಯ ಸಾಧಿಸಿತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಪಾಕಿಸ್ತಾನ 139 ರನ್ ಮೊತ್ತ ಕಲೆಹಾಕಿತ್ತು. ಗುರಿಯನ್ನು ಬೆನ್ನತ್ತಿದ್ದ ಐರ್ಲೆಂಡ್ 20 ಓವರ್ ಗಳಲ್ಲಿ 101 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತ್ತು.

ಪಂದ್ಯದ ಬಳಿಕ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಕಣ್ಣೀರಿಟ್ಟ ಐರ್ಲೆಂಡ್ ನಾಯಕಿ ಲಾರಾ ಡೆಲನಿ ‘ ಸೋಲಿನಿಂದ ನಮಗೆಲ್ಲ ತುಂಬಾ ನಿರಾಸೆಯಾಗಿದೆ ‘ ಎಂದು ಹೇಳಿದರು.

Leave a Reply

Your email address will not be published.

Social Media Auto Publish Powered By : XYZScripts.com