ಸಂಕಲನಕಾರ ಸುರೇಶ್ ಅರಸ್‍ಗೆ 2018ನೇ ಸಾಲಿನ ದೂರದರ್ಶನ ಚಂದನ ಪ್ರಶಸ್ತಿ

ಖ್ಯಾತ ಸಂಕಲನಕಾರ ಸುರೇಶ್ ಅರಸ್ ಅವರಿಗೆ 2018ನೇ ಸಾಲಿನ ದೂರದರ್ಶನ ಚಂದನ ಪ್ರಶಸ್ತಿ ಲಭಿಸಿದೆ. ನವೆಂಬರ್ 17ರಂದು ನಡೆಯಲಿರುವ ದೂರದರ್ಶನ ಸಂಸ್ಥಾಪನಾ ದಿನಾಚರಣೆ ಹಾಗೂ ದೂರದರ್ಶನ ಚಂದನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸುರೇಶ್ ಅರಸ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ತುಳು ಚಿತ್ರ ‘ಸಂಗಮ ಸಾಕ್ಷಿ’ ಮೂಲಕ ಚಿತ್ರರಂಗ ಪ್ರವೇಶಿಸಿದ ಸುರೇಶ್ ಅರಸ್ ಅವರು, ಕನ್ನಡ, ತಮಿಳು, ತುಳು, ಕೊಂಕಣಿ, ಕೊಡವ, ಮರಾಠಿ, ಮಲಯಾಳಿ, ಬಂಗಾಳಿ, ತೆಲುಗು ಹಾಗೂ ಹಿಂದಿ ಸೇರಿದಂತೆ 500 ಚಿತ್ರಗಳಿಗೆ ಸಂಕಲನ ಮಾಡಿದ್ದಾರೆ. ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ಮೂರು ದಾರಿಗಳು’ ಚಿತ್ರದ ಸಂಕಲನ ಕಾರ್ಯಕ್ಕಾಗಿ ಸುರೇಶ್ ಅರಸ್ ಅವರಿಗೆ ರಾಜ್ಯ ಸರ್ಕಾರದ ‘ಅತ್ಯುತ್ತಮ ಸಂಕಲನಕಾರ ಪ್ರಶಸ್ತಿ’ ಲಭಿಸಿದೆ.

ಬೆಂಗಳೂರಿನ ಸೆಂಟ್ರಲ್ ಕಾಲೇಜು ಆವರಣದಲ್ಲಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನವೆಂಬರ್ 17ರಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಉದ್ಘಾಟಕರಾಗಿ ಆಗಮಿಸಲಿರುವ ಕೇಂದ್ರ ಸಚಿವ ಸದಾನಂದ ಗೌಡ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಗೌರವಾನ್ವಿತ ಅತಿಥಿಗಳಾಗಿ ಪ್ರಸಾರ ಭಾರತಿ ಮಂಡಳಿ ಸದಸ್ಯರಾದ ರಾಜೀವ್ ಸಿಂಗ್ ಆಗಮಿಸಲಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com