ದೀಪಿಕಾ-ರಣವೀರ್ ಮದುವೆಯ ಫೋಟೊಗಳಿಗಾಗಿ ಅಭಿಮಾನಿಗಳ ಕಾತರ..

ನವವಿವಾಹಿತರಾದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರ ವಿವಾಹದ ಫೋಟೋಗಳನ್ನು ನೋಡಲು ಅವರ ಫ್ಯಾನ್ಸ್ಗಳು ಕಾತುರರಾಗಿದ್ದಾರೆ. ಯಾಕಂದರೆ ದೀಪಿಕಾ ಮತ್ತು ರಣವೀರ್ ಇಂದು ಸಂಜೆ 6 ಕ್ಕೆ ತಮ್ಮ ವಿವಾಹದ ಅಧಿಕೃತ ಪೋಟೋಗಳನ್ನು ಹಂಚಿಕೊಳ್ಳುವ ನಿರೀಕ್ಷೆಯಿದೆ.

ಈ ಜೋಡಿ ಆರು ವರ್ಷಗಳ ತಯಾರಿಯೊಂದಿಗೆ ಬುಧವಾರ ಮಧ್ಯಾಹ್ನ ದಕ್ಷಿಣ ಭಾರತೀಯ ಆಚರಣೆಗಳ ಪ್ರಕಾರ ವಿವಾಹವಾದರು. ವಿಶಾಲ್ ಪಂಜಾಬಿ ನವ ದಂಪತಿಗಳ ಮದುವೆ ಸಮಾರಂಭದ ಛಾಯಗ್ರಾಹಕರಾಗಿದ್ದು, ಅವರೊಂದಿಗೆ ಚರ್ಚಿಸಿ ನಂತರ ಚಿತ್ರಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ. ಈ ದಂಪತಿಗಳ ಮದುವೆ ಸಮಾರಂಭದ ಯಾವುದೇ ಫೋಟೋಗಳು ಲಭ್ಯವಾಗಿಲ್ಲ.

ಅವರ ಅನುಮೋದನೆ ಇಲ್ಲದಿದ್ದರೆ ಸಾಮಾಜಿಕ ಮಾಧ್ಯಮದಲ್ಲಿ ಯಾವುದೇ ಚಿತ್ರಗಳನ್ನು ಹಂಚಿಕೊಳ್ಳಬಾರದೆಂದು ದಂಪತಿಗಳು ಅತಿಥಿಗಳು ಕೇಳಿಕೊಂಡಿರುವ ಕಾರಣ ಸಂಜೆವರೆಗೆ ಅಭಿಮಾನಿಗಳು ತಮ್ಮ ನೆಚ್ಚಿನ ನಟ-ನಟಿಯ ವಿವಾಹವನ್ನು ಕಣ್ತುಂಬಿಕೊಳ್ಳಲು ಕಾಯಲೇಬೇಕಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com