Bigg Boss 6 : ಬೆಸ್ಟ್ ಫ್ರೆಂಡ್ಸ್ ಅಕ್ಷತಾ-ರಾಕೇಶ್ ನಡುವೆ ಶುರುವಾಯ್ತು ಮನಸ್ತಾಪ – ಕಾರಣವೇನು?

ಗೊಂಬೆ ಆಟವಯ್ಯ ಟಾಸ್ಕ್ ಮುಗಿದ ಬಳಿಕ ಬಿಗ್ ಬಾಸ್ ಟಾಸ್ಕ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ವ್ಯಕ್ತಿಗಳನ್ನ ಹಾಗೂ ಕಳಪೆ ಪ್ರದರ್ಶನ ನೀಡಿದ  ಸ್ಪರ್ಧಿಗಳನ್ನು ಆಯ್ಕೆ ಮಾಡಲು ಅಕ್ಷತಾ ಹಾಗೂ ರಶ್ಮಿ ಅವರ ಎರಡು ತಂಡಗಳಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಶುರುವಾಗಿದ್ದು ಬೆಸ್ಟ್ ಫ್ರೆಂಟ್ಸ್ ನಡುವೆ ಅಕ್ಷತಾ ಹಾಗೂ ರಾಕೇಶ್ ನಡುವೆ ಮನಸ್ಥಾಪ.

ಟಾಸ್ಕ್ ಶುರುವಿನಲ್ಲಿ ರಾಕೇಶ್ ನನ್ನ ಹೆಚ್ಚು ಹಣಕ್ಕೆ ಹಾಗೂ ಮೊದಲ ಆಧ್ಯತೆ ನೀಡಿ ಅಕ್ಷತಾ ಆಯ್ಕೆ ಮಾಡುತ್ತಾಳೆ ಅನ್ನೋ ನಂಬಿಕೆ ಮನೆಯ ಸದಸ್ಯರಲ್ಲಿ ಇತ್ತು. ಆದರೆ ಅದು ಹಾಗಾಗಲಿಲ್ಲ. ಟಾಸ್ಕ್ ನ ಮುಂದುವರೆದ ಆಟದಲ್ಲಿಯೂ ಉತ್ತಮ ಆಟಗಾರ ಆಯ್ಕೆಯಲ್ಲಿ ಕೂಡ  ರಾಕೇಶ್ ಆಯ್ಕೆ ಆಗ್ತಾನೆ ಅನ್ನೋ ಹೊತ್ತಿಗೆ ಅಕ್ಷತಾ ಹೇಳಿದ್ದು ಜಯಶ್ರಿ ಅವರ ಹೆಸರನ್ನ. ಜಯಶ್ರೀಯವರ ಹೆಸರನ್ನು ಆಯ್ಕೆ ಮಾಡುವಾಗ ತಂಡದ ಇನ್ನುಳಿದ ಸದಸ್ಯರ ಒಪ್ಪಿಗೆ ಕೇಳದ ಅಕ್ಷತಾ ಕಳಪೆ ಆಟವನ್ನು ಪ್ರದರ್ಶಿಸಿದ ವ್ಯಕ್ತಿ ಆಯ್ಕೆ ಮಾಡುವಾಗ ತಂಡದ ಸದಸ್ಯರ ಅನಿಸಿಕೆ ಕೇಳಿದ್ದಕ್ಕೆ ರಾಕೇಶ್ ಖಡಕ್ಕಾಗಿ ಉತ್ತರ ಕೊಟ್ಟರು.

ಉತ್ತಮ ಆಟಗಾರ ಆಯ್ಕೆಯಲ್ಲಿ ಸ್ವಂತ ನಿರ್ಧಾರ ತೆಗೆದುಕೊಂಡ್ರಿ. ಈಗಲೂ ಸ್ವಂತ ನಿರ್ಧಾರ ತೆಗೆದುಕೊಳ್ಳಿ ಅಂದರು. ಆಗ ರಕ್ಷತಾ “ನಾನು ನಿನ್ನ ಆಯ್ಕೆ ಮಾಡಿದ್ದರೆ ಯಾರಿಗೂ ಇಷ್ಟ ಆಗುತ್ತಿರಲಿಲಲ್ಲ. ಹೀಗಾಗಿ ನಾನು ಜಯಶ್ರಿ ಅವರನ್ನ ಆಯ್ಕೆ ಮಾಡಿದೆ” ಅಂದಾಗ ಬೆಸ್ಟ್ ಫ್ರೆಂಡ್ಸ್ ಆದ ಅಕ್ಷತಾ ಹಾಗೂ ರಾಕೇಶ್ ಇಬ್ಬರ ನಡುವೆ ಮನಸ್ತಾಪ ಮೊಳಕೆ ಬಿಟ್ಟಿದೆ.

Leave a Reply

Your email address will not be published.

Social Media Auto Publish Powered By : XYZScripts.com