Bigg Boss 6 : ಬಿಗ್ ಬಾಸ್ ಮನೆಯಲ್ಲೀಗ ಪ್ರಶ್ನೆಗಳ ಸುರಿಮಳೆ – ಸ್ಪರ್ಧಿಗಳ ಮನದಲ್ಲಿ ಗೊಂದಲ!

ಬಿಗ್ ಬಾಸ್ ಮನೆಯಲ್ಲಿ ಜಗಳ ಆಡಿದರೆ ಗೆಲ್ಲೋ ಗಿಮಿಕ್ ಮಾಡಿದಂಗಾ..? ಸುಮ್ನೆ ಜಗಳ ಆಡಿದ್ರೆ ಜಾಸ್ತಿ ಹೊತ್ತು ತೋರಿಸ್ತಾರಾ..? ನಮಗೆ ಕೆಲವು ಭಾಗದ ಜನ ವೋಟ್ ಮಾಡಿ ಗೆಲ್ಸಾರೆ ಅನ್ನೋ ನಂಬಿಕೆ ಎಷ್ಟು ನಿಜ..? ಯಾರು ಕೆಟ್ಟವರು..? ಯಾರು ಒಳ್ಳೆಯವರು..? ಇಂತೆಲ್ಲಾ ಪ್ರೆಶ್ನೆಗಳು ನಿನ್ನೆ ಬಿಗ್ ಬಾಸ್ ಮನೆಯಲ್ಲಿ ಹೆಚ್ಚಾಗಿ ಕೇಳಿ ಬಂದಿವೆ.

ಹೌದು.. ಬಿಗ್  ಬಾಸ್ ಸೀಸನ್ 6 ನಲ್ಲಿ ನಿನ್ನೆ ನಡೆದ ಗೊಂಬೆ ಆಟವಯ್ಯ ಎನ್ನುವ ಮುಂದುವರೆದ ಆಟದಲ್ಲಿ ಸಾಕಷ್ಟು ಪ್ರಶ್ನೆಗಳು, ಗೊಂದಲಗಳು ಉಂಟಾಗಿದ್ದು ಸತ್ಯ. ಆಟ ಶುರುವಾಗಿದ್ದು ಬಿಗ್ ಬಾಸ್ ಮನೆಯಲ್ಲಿ, ಆಡುತ್ತಿರುವವರು ಸ್ಪರ್ಧಿಗಳು ಆದರೆ ಇದರಲ್ಲಿ ಉತ್ತರ ಕರ್ನಾಟಕದ ಮಂದಿಯನ್ನ ಜಗಳದಲ್ಲಿ ಬಳಕೆ ಮಾಡಿಕೊಂಡಿದ್ದು ಸೋನು ಪಾಟೀಲ್ ಹಾಗೂ ಆ್ಯಂಡಿ.

‘ಉತ್ತರ ಕರ್ನಾಟಕದ ಮಂದಿ ಎಲ್ಲಾ ನೋಡ್ತಾಯಿದ್ದಾರಾ’ ಅಂತ ಸೋನು ಪಾಟೀಲ್, ‘ಉತ್ತರ ಕರ್ನಾಟಕದ ಜನರನ್ನ ನೀನು ಮೋಸ ಮಾಡ್ತಾಯಿದಿಯಾ ಮೋಸ ಹೋಗಲು ನಾನು ಬಿಡುವುದಿಲ್ಲ’ ಅಂತ ಆಂಡಿ. ಇವರಿಬ್ಬರ ಜಗಳವನ್ನು ನೋಡಿ ಮನೆಯ ಕೆಲ ಸದಸ್ಯರು ‘ಮನೆಯಲ್ಲಿ ಜಗಳವಾಡಿದರೆ ಮಾತ್ರ ಜಾಸ್ತಿ ಹೊತ್ತು ಟಿವಿಯಲ್ಲಿ ತೋರಿಸ್ತಾರೆ ಅಂದುಕೊಂಡಿರಬೇಕು’ ಅಂತ ಮಾತನಾಡಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಯಾವುದು ಸರಿ..? ಯಾವುದೇ ತಪ್ಪು..? ಅಂತ ತಿಳಿಯಬೇಕಾದರೆ ಶನಿವಾರದವರೆಗೆ ಕಾಯಬೇಕು.

One thought on “Bigg Boss 6 : ಬಿಗ್ ಬಾಸ್ ಮನೆಯಲ್ಲೀಗ ಪ್ರಶ್ನೆಗಳ ಸುರಿಮಳೆ – ಸ್ಪರ್ಧಿಗಳ ಮನದಲ್ಲಿ ಗೊಂದಲ!

Leave a Reply

Your email address will not be published.

Social Media Auto Publish Powered By : XYZScripts.com