ಅನಂತ್ ಕುಮಾರ್ ವ್ಯಕ್ತಿತ್ವದ ಬಗ್ಗೆ ಇಬ್ಬರು ಪತ್ರಕರ್ತರ ಅಭಿಪ್ರಾಯಗಳು..

ಅನಂತಕುಮಾರ್: ಎರಡು ಪ್ರತಿಕ್ರಿಯೆಗಳು
ಬಹುಪಾಲು ಮಾಧ್ಯಮಗಳು ಅನಂತಕುಮಾರ್ ವರ ಬಗ್ಗೆ ವಸ್ತುನಿಷ್ಠ ವಿಮರ್ಶೆ ಮಾಡದೇ ಹೋದವು. ‘ಏನ್ ಸುದ್ದಿ’ ಅಂತಹ ಪ್ರಯತ್ನವನ್ನು ಮಾಡಿತು. ಅದಕ್ಕೆ ಸ್ಪಂದಿಸಿ ಉತ್ತರ ಕರ್ನಾಟಕದ ಇಬ್ಬರು ಜನಪರ ಪತ್ರಕರ್ತರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ…

‘ ಅನಂತಕುಮಾರರ ಮಾತಷ್ಟ ಚೆಂದ. ಕೆಲಸ ಮಾಡಿದ್ದು ಅಷ್ಕಕ್ಕಷ್ಟ. ಹುಬ್ಬಳ್ಳಿಗೆ ನೈರುತ್ಯ ರೈಲ್ವೇ ವಲಯ ತಂದಿದ್ದು ಅನಂತಕುಮಾರ್ ಅಂತ ಇವತ್ತು ಕೆಲವು ಪೇಪರ್ ಬರೆದಾವು. ಇದು ಸತ್ಯವಲ್ಲ. ಅದು ಮೊದಲು ಬೆಂಗಳೂರಿಗೆ ಮಂಜೂರಾದಾಗ ಅನಂತ್ ಸುಮ್ಮನೇ ಇದ್ದರು. ಬೆಂಗಳೂರೇ ಅವರ ಕ್ಷೇತ್ರವಾದ್ದರಿಂದ ಅವರಿಗೆ ಅದುಬೇಕಾಗಿತ್ತು ಕೂಡ. ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ನೇತೃತ್ವದಾಗ ಹಲವಾರು ಜನಪರ ಸಂಘಟನೆಗಳು, ಹುಬ್ಬಳ್ಳಿಯಲ್ಲೇ ನೈರುತ್ಯ ವಲಯ ಸ್ಥಾಪಿಸಬೇಕೆಂದು ಸತತ ಮೂರು ತಿಂಗಳು ಹೋರಾಟ ನಡೆಸಿದರು. ಇದರಿಂದ ಕೇಂದ್ರದ ಮೇಲೆಒತ್ತಡ ಸೃಷಿಯಾಯ್ತು. ಆಗನಿವಾರ್ಯವಾಗಿ ವಲಯ ಹುಬ್ಬಳ್ಳಿಗೆ ಮಂಜೂರಾಯತಷ್ಟೇ. ಅದು ಈ ಬಾಗದ ಜನರಹೋರಾಟಕ್ಕೆಸಿಕ್ಕ ನ್ಯಾಯ.

ಇನ್ನು ಬೆಂಗಳೂರು ಮೆಟ್ರೋ ರೈಲಿನ ಕ್ರೆಡಿಟ್ಟನ್ನು ಅನಂತ್‍ರಿಗೆ ನೀಡುವುದು ಆತ್ಮವಂಚನೆಯಷ್ಟ… ಜನದಟ್ಟಣೆಯ ಕಾರಣದಿಂದ ಮತ್ತು ದೈತ್ಯ ಐಟಿ ಕಂಪನಿಗಳ ಒತ್ತಡದಿಂದಾಗಿ ಎಸ್.ಎಂ ಕೃಷ್ಣ ಕಾಲದಲ್ಲೇ ಈ ಯೋಜನೆ ರೂಪುಗೊಂಡಿತ್ತು. ಸಿದ್ದರಾಮಯ್ಯ ಸರ್ಕಾರದ ಇಚ್ಚಾಶಕ್ತಿಯಿಂದ ಮೆಟ್ರೋ ಸಿದ್ಧವಾಯಿತು. ಸಹಜವಾಗಿ ಈ ಯೋಜನೆಗೆ ಕೇಂದ್ರ ತನ್ನ ಪಾಲನ್ನು ನೀಡಿತು. ಅದು ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಮಾಡಲೇಕಾದ ಕರ್ತವ್ಯ.

ಅನಂತ್ ಹೆಗಡೆಯಷ್ಟು ಅನಂತಕುಮಾರ ಕೋಮುದ್ವೇಷಿಯಲ್ಲ ಎಂಬುದು ಪೂರ್ಣಸತ್ಯವಲ್ಲ. ಹುಬ್ಬಳ್ಳಿಯ ಈದ್ಗಾದ ಸಿವಿಲ್ ವಿವಾದವನ್ನು ‘ದೇಶಭಕ್ತಿ’ಯ ವಿವಾದ ಮಾಡಿದ್ದರಲ್ಲಿ ಅನಂತಕುಮಾರ್ ಪಾತ್ರ ದೊಡ್ಡದಿದೆ. ಉಮಾಭಾರತಿ ನೇತೃತ್ವದಲ್ಲಿ ರಾಷ್ಟ್ರಧ್ವಜ ಹಾರಿಸಲು ನಡೆದ ಪ್ರಯತ್ನದಲ್ಲಿ ಅನಂತ್ ಕೂಡ ಇದ್ದರು. ಅಂದು ನಡೆದ ಗೋಲಿಬಾರ್‍ನಲ್ಲಿ ನಾಲ್ವರು ಅಮಾಯಕರು. ಈ ರಕ್ತಪಾತದ ಬುನಾದಿಯ ಮೇಲೇ ಅನಂತ್ ತಮ್ಮರಾಜಕೀಯದ ಅಡಿಪಾಯ ಹಾಕಿಕೊಂಡರು, ಈ ಭಾರದಲ್ಲಿ ಇವತ್ತಿಗೂ ಬಿಜೆಪಿ ಆ ಗದ್ದಲದಿಂದ ಫಸಲನ್ನು ತೆಗೆಯುತ್ತಲೇ ಇದೆ ‘ – ಸನತ್‍ಕುಮಾರ ಬೆಳಗಲಿ, ಕಲಬುರ್ಗಿ

‘ ಅನಂತಕುಮಾರ್ ಸಂಘಟನಾ ಚತುರುರೇನೋ ಹೌದು. ಆದರೆ ಅಂತಿಮವಾಗಿ ಈ ಕೌಶಲ್ಯ ಬಳಕೆಯಾಗಿದ್ದು ಕೋಮು ಧ್ರುವೀಕರಣಕ್ಕೆ, ಆ ಮೂಲಕ ರಾಜಕೀಯ ಸ್ವಾರ್ಥಕ್ಕೆ ಅಲ್ಲವೇ? ಎಮರ್ಜೆನ್ಸಿಯಲ್ಲಿ ಜೈಲು ಪಾಲಾಗಿದ್ದರೇನೋ ನಿಜ. ಆದರೆ ಅದೇ ಹುಬ್ಬಳ್ಳಿಯಲ್ಲಿ ಈದ್ಗಾ ಹೆಸರಲ್ಲಿ ಅನಗತ್ಯವಾಗಿ ಎಮರ್ಜೆನ್ಸಿಯ ಸ್ಥಿತಿ ಸೃಷ್ಟಿಸಿ, ಅಮಾಯಕರ ಬಲಿ ಪಡೆದ ದುರಂತಕ್ಕೆ ಅನಂತ್ ಕೂಡ ಪಾಲುದಾರರಲ್ಲವೇ? ಅನಂತ್ ಹೆಗಡೆಗೆ ಹೋಲಿಸಿ ಈ ಅನಂತರನ್ನು ಹೊಗಳುವುದು ಅಪಾಯಕಾರಿಯೇ. ಒಂದು ಕಡೆ ವಾಜಪೇಯಿಯ ಉದಾರ ಮುಖವನ್ನು ಮುಖವಾಡವನ್ನು ಜನರ ಮುಂದಿಟ್ಟು, ಇನ್ನೊಂದು ಕಡೆ ಉಮಾಭಾರತಿಯಂತಹ ಬಾಯಿಬಡುಕರಿಂದ ಕೋಮು ಉನ್ಮಾದ ಹರಡುವುದು ಸಂಘ ಪರಿವಾರದ ‘ಮಾಡೆಸ್ ಆಪರೆಂಡಿ’ಯೇ ಆಗಿದೆ.
ತನ್ನ ಬೆಳೆಸಿದ ಹು-ಧಾ ಅವಳಿನಗರಕ್ಕೆ ಕುಡಿಯುವ ನೀರು ಒದಗಿಸಬಹುದಾದ ಮಹದಾಯಿಯ ಹೋರಾಟವನ್ನೇ ನಿರ್ಲಕ್ಷಿಸಿದ ಅನಂತ್ ಮಾಡಿದ್ದು ಜನದ್ರೋಹವೇ ಅಲ್ಲವೇ? ‘ – ವೆಂಕನಗೌಡ ಪಾಟೀಲ, ಧಾರವಾಡ.

Leave a Reply

Your email address will not be published.

Social Media Auto Publish Powered By : XYZScripts.com