ಅಂಬಿಡೆಂಟ್ ಪತ್ರಕರ್ತರ ಲಂಚ ಪ್ರಕರಣ ಮೊದಲನೆಯದೇನಲ್ಲ.. ಇಲ್ಲಿದೆ details..

ಗಣಿಡೈರಿಯಲ್ಲಿ ಆರ್‍ಬಿ, ವಿಬಿ ಎಂಬ ‘ಚೆಡ್ಡಿ’ದೋಸ್ತಗಳು!
‘ಬಳ್ಳಾರಿ ರಿಪಪ್ಲಿಕ್ ಅಕ್ರಮವಾಗಿ ದೋಚಿದ ನೈಸರ್ಗಿಕ ಸಂಪತ್ತಿನ ಲೂಟಿಯಿಂದ ಸಾರ್ವಜನಿಕ ಬೊಕ್ಕಸಕ್ಕೆ ದೊಡ್ಡ ನಷ್ಟವಾಯಿತು. ಆದರೆ ‘ಪಬ್ಲಿಕ್’ ಬೊಕ್ಕಸಕ್ಕೇನೂ ಕೊರತೆಯಾಗಲಿಲ್ಲ’ ಎಂಬ ಮಾತು ಬಳ್ಳಾರಿ ಭಾಗದಲ್ಲಿ ಪ್ರಚಲಿತಲ್ಲಿದೆ. ಸಂತೋಷ ಹೆಗಡೆಯವರ ತನಿಖೆಯಲ್ಲಿ ಜನಾರೆಡ್ಡಿಯ ಕಿರಾತಕ ಭಂಟರಿಂದ ವಶಪಡಿಸಿಕೊಂಡ ಡೈರಿಯಲ್ಲಿನ ಕೋಡ್‍ವರ್ಡ್‍ಗಳನ್ನು ಹಿಂದಿನ ಮಾಹಿತಿಗಳು ಹಲವಾರು ಪತ್ರಕರ್ತರ ಕಡೆ ಮಾಡಿದ್ದವು.

ಗಣಿ ಖದೀಮರಿಂದ ರೊಕ್ಕ ಹೊಡೆದವರಪಟ್ಟಿಯಲ್ಲಿ ‘ಆರ್‍ಬಿ’ ಮತ್ತು ‘ವಿಬಿ’ ಎಂಬ ಹೆಸರುಗಳು ಎದ್ದು ಕಾಣುತ್ತಿದ್ದವು. ಆರ್‍ಬಿ ಎಂದರೆ ರವಿ ಬೆಲಗೆರೆ, ವಿಬಿ ಎಂದರೆ ವಿಷಭಟ್ಟರು ಎಂದು ವಿವಿಧ ಪತ್ರಿಕೆಗಳ ರೆಗುಲರ್ ಓದುಗರು ಖಡಾಖಂಡಿತವಾಗಿ ಹೇಳುತಿದ್ದರು. ‘ಜಾಣ’ ಬೆಲಗೆರೆ ‘ಆರ್‍ಬಿ ಎಂದರೆ ರಂಗ ಬಾರದ್ವಾಜ್’ ಎಂದು ತನ್ನೋದುಗಪ್ರಭುಗಳನ್ನು ರೈಲು ಹತಿಸಲು ಯತ್ನಿಸಿದ್ದ.

ಈ ‘ಬಾರದ್ದಾಜ’ ಏನು ಕಡಿಮೆಯಲ್ಲ ಎಂದು ಸಾಕಷ್ಟು ಸಾರಿ ಪ್ರೂವ್ ಆಗಿದೆ. ಸಿವ್‍ಪಸಾದೋ ಅಥವಾ ಸಿವ್‍ಪಕಾಸೋ ಎಂಬ ಆ್ಯಂಕರ್ ಕೂಡ ಇಂತದ್ದರಲ್ಲಿ ಭಾರಿ ಪರಿಣಿತಿ ಪಡೆದಿದ್ದ. ಅಣುಮಕ್ಕನವರ್ರು-ಗಿಣಮಕ್ಕನವ್ರೂ ಮುಂತಾದ ಸ್ಮಾರ್ಟ್‍ಫೇಲೊಗಳ ದೇಣಿಗೆ ಸ್ವೀಕಾರದ ಬಗ್ಗೆ ಪ್ರಸ್ತಾಪಿಸದಿದ್ದರೆ ಪಕ್ಷಪಾತ ಮಾಡಿದಂತಾಗಿತ್ತದೆ.

ಮೇಟಿ ಲೈಂಗಿಕ ಕೇಸಿನಲ್ಲೂ ಮೀಟಿ ಮೀಟಿ ರೊಕ್ಕ ಹೆಕ್ಕಿದ ಪರ್ತಕರ್ತರ ಹೆಸರುಗಳು ‘ಪಬ್ಲಿಕ್’ ಗಮನಕ್ಕೆ ಬಂದು ಛೀ,ಥೂ ಎಂದು ಉಗಿದಿದ್ದರು.
(ಗಣಿಡೈರಿಯಲ್ಲಿದ್ದ ಕೋಡ್‍ವರ್ಡ್‍ಗಳು ಮತ್ತು ಆ ವ್ಯಕ್ತಿಗಳಬಗ್ಗೆ ಮೊದಲು ಬರೆದಿದ್ದ ‘ಪ್ರಜಾವಾಣಿ’ ವಿ.ಎನ್‍ಸುಬ್ರಮಣ್ಯ ಎನ್ನುವ ಪ್ರಜಾವಾಣಿ ವರದಿಗಾರರಿಗೆ ಇನ್ನೊಮ್ಮೆ ಥ್ಯಾಂಕ್ಸ್ ಹೇಳೋಣ)

3 thoughts on “ಅಂಬಿಡೆಂಟ್ ಪತ್ರಕರ್ತರ ಲಂಚ ಪ್ರಕರಣ ಮೊದಲನೆಯದೇನಲ್ಲ.. ಇಲ್ಲಿದೆ details..

Leave a Reply

Your email address will not be published.

Social Media Auto Publish Powered By : XYZScripts.com