ದಾಂಪತ್ಯಕ್ಕೆ ಕಾಲಿಟ್ಟ ದೀಪಿಕಾ – ರಣ್‍ವೀರ್ : ನವಜೋಡಿಗೆ ಹರಿದು ಬಂದ ಶುಭಾಶಯಗಳ ಮಹಾಪೂರ

ವರ್ಷದ ಬಹುನಿರೀಕ್ಷಿತ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರ ವಿವಾಹ ಸಮಾರಂಭವು ಇಟಲಿಯಲ್ಲಿ ಬುಧವಾರ ನೆರವೇರಿದೆ. ಮದುವೆ ಸಮಾರಂಭವು ಕೊಂಕಣಿ ಸಂಪ್ರದಾಯದಂತೆ ನಡೆದಿದ್ದು, ದಾಂಪತ್ಯಕ್ಕೆ ಕಾಲಿಟ್ಟ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ನವಜೋಡಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರ ಹರಿದು ಬಂದಿದೆ.

ದೀಪಿಕಾ-ರಣವೀರ್ ನವವಿವಾಹಿತ ಜೋಡಿಗೆ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಟ್ವೀಟ್ ಮಾಡಿ ಶುಭಾಶಯ ಕೋರಿದ್ದಾರೆ. “ನಝರ್ ಉತಾರ್ ಲೋ, ದೀಪಿಕಾ ಪಡುಕೋಣೆ- ರಣವೀರ್ ಸಿಂಗ್ ಬಧಾಯಿ ಹೋ, ಜೀವನದುದ್ದಕ್ಕೂ ಒಬ್ಬರನ್ನೊಬ್ಬರು ಪ್ರೀತಿಸಿ ಖುಷಿಯಾಗಿರಿ” ಎಂದು ಟ್ವೀಟ್ ಮಾಡಿದ್ದಾರೆ.

ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಬಾಜೀರಾವ್ ಮಸ್ತಾನಿ, ರಾಮ್ ಲೀಲಾ, ಫೈಂಡಿಂಗ್ ಫ್ಯಾನಿ ಹಾಗೂ ಪದ್ಮಾವತ್ ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ.

4 thoughts on “ದಾಂಪತ್ಯಕ್ಕೆ ಕಾಲಿಟ್ಟ ದೀಪಿಕಾ – ರಣ್‍ವೀರ್ : ನವಜೋಡಿಗೆ ಹರಿದು ಬಂದ ಶುಭಾಶಯಗಳ ಮಹಾಪೂರ

Leave a Reply

Your email address will not be published.

Social Media Auto Publish Powered By : XYZScripts.com