ಬಿಡುಗಡೆಗೂ ಮುನ್ನವೇ ವೆಬ್‍ಸೈಟ್‍ಗಳಲ್ಲಿ ‘ಟ್ಯಾಕ್ಸಿವಾಲಾ’ ಚಿತ್ರದ HD ಪ್ರಿಂಟ್ ಲೀಕ್..!

ಗದಗ : ಕೆಲ ದಿನಗಳ ಹಿಂದೆ ಅಷ್ಟೇ ತೆಲಗುನಲ್ಲಿ ಗೀತ ಗೊವಿಂದಂ ಸುಪರ್ ಹಿಟ್ ಚಲನಚಿತ್ರ ಕೊಟ್ಟ ವಿಜಯ ದೇವರಕೊಂಡ ಅವರ ಬಹು ನಿರೀಕ್ಷಿತ ಚಲನಚಿತ್ರ ಟ್ಯಾಕ್ಸಿ ವಾಲಾ ಇದೇ ಶುಕ್ರವಾರ ಬಿಡುಗಡೆ ಆಗಬೇಕಾಗಿದೆ. ಅದರೆ ಅದಕ್ಕೂ ಮೊದಲೇ ಪೂರ್ತಿ HD ಫ್ರಿಂಟ್ ವುಳ್ಳ ಚಲನಚಿತ್ರ ತಮಿಳು ರಾಕರ್ಸ್ ಸೇರಿದಂತೆ ಕೆಲ ವೆಬಸೈಟ್ ಗಳಲ್ಲಿ ಹರಿದಾಡುತ್ತಿರುವದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಸ್ವತಃ ವಿಜಯ ದೇವರಕೊಂಡ ಹಾಗೂ ನಟಿ ಪ್ರಿಯಾಂಕಾ ಜವಳಕರ ಟ್ಯಾಕ್ಸಿವಾಲಾ ಚಿತ್ರ ಹಾಸ್ಯ ಪ್ರಧಾನವಾದ ಥ್ರಿಲ್ಲರ್ ಚಿತ್ರವಾಗಿದೆ ಹೀಗಾಗಿ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೇಗಳಿವೆ ಅಂತ ಜಂಟಿಯಾಗಿ ನಿರ್ಮಾಪಕರು ಸೇರಿದಂತೆ ನಟ-ನಟಿಯರು ಸುದ್ದಿಗೊಷ್ಠಿಯಲ್ಲಿ ಹೇಳಿದ್ದರು. ಇನ್ನು ಚಿತ್ರತಂಡ ಟ್ಯಾಕ್ಸಿವಾಲಾ ಲೀಕ್ ಆಗಿದ್ದರ ಬಗ್ಗೆ’ ಇದೊಂದು ಕುಕೃತ್ಯ ಇದು ಅರ್ಧ ಕಥೆ ಒಳಗೊಂಡಿದೆ. ಇದನ್ನು ಸಿನಿಮಾ ಪ್ರಿಯರು ವಿಕ್ಷೀಸಿದಂತೆ ಮನವಿ ಮಾಡಿಕೊಂಡಿದೆ. ವಿಜಯ ದೇವರಕೊಂಡ ಸಹ ಸ್ವಲ್ಪ ದಿನ ಇಡಿ ಚಿತ್ರ ನೋಡಲು ಕಾಯುವಂತೆ ತಮ್ಮ ಅಭಿಮಾನಿಗಳನ್ನು ಮನವಿ ಮಾಡಿದ್ದರು.

ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಚಿತ್ರವೊಂದು ಹೀಗೆ ಏಕಾಏಕಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವದು ನಿರ್ಮಾಪಕ ಸೇರಿದಂತೆ ಚಿತ್ರ ತಂಡವನ್ನು ಚಿಂತೆ ಗೆ ಇಡು ಮಾಡಿರುವದಂತು ಸತ್ಯ…

Leave a Reply

Your email address will not be published.

Social Media Auto Publish Powered By : XYZScripts.com