WATCH : ಧಗಧಗನೆ ಹೊತ್ತಿ ಉರಿಯುತ್ತಿದ್ದ ಟ್ರ್ಯಾಕ್ಟರ್ ಕೆರೆಗೆ ಇಳಿಸಿ ಅನಾಹುತ ತಪ್ಪಿಸಿದ ಡ್ರೈವರ್.!

ಬಾಗಲಕೋಟೆ : ಬೆಂಕಿ ಜ್ವಾಲೆಯಿಂದ ಧಗಧಗನೆ ಹೊತ್ತಿ ಉರಿದು ಗ್ರಾಮದ ನಡುರಸ್ತೆಯಲ್ಲೇ ಸಂಚರಿಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಜಮ್ಮನಕಟ್ಟಿ ಗ್ರಾಮದಲ್ಲಿ ನಡೆದಿದೆ. ಬೆಂಕಿಯಿಂದ ಉರಿಯುತ್ತಿದ್ದ ಟ್ರ್ಯಾಕ್ಟರ್ ನ್ನೇ ಕೆರೆಯವರೆಗೆ ಡ್ರೈವಿಂಗ್ ಮಾಡಿ , ಕೆರೆಗೆ ಇಳಿಸಿದ ಚಾಲಕ ಯಂಕಪ್ಪ ಭಾರೀ ಅನಾಹುತ ತಪ್ಪಿಸಿದ್ದಾನೆ.

ಮೇವು ಕೊಂಡೊಯ್ಯುತ್ತಿದ್ದ ವೇಳೆ ಶಾರ್ಟ್ ಸರ್ಕಿಟ್ ನಿಂದ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಜ್ವಾಲೆ ಕಂಡ ಗ್ರಾಮಸ್ಥರು ಟ್ರ್ಯಾಕ್ಟರ್ ಕೆರೆಗೆ ಕೊಂಡೊಯ್ಯುವಂತೆ ಕೂಗಿದ್ದಾರೆ. ಬೆಂಕಿ ಜ್ವಾಲೆ ಮಧ್ಯೆಯೇ ಗ್ರಾಮದ ನಡುರಸ್ತೆಯಲ್ಲೇ ಸಂಚರಿಸುತ್ತಾ ಕೆರೆಗೆ ಟ್ರ್ಯಾಕ್ಟರ್ ಕೊಂಡೊಯ್ದಿದ್ದಾನೆ..

ಕಳೆದ ಎರಡು ದಿನದ ಹಿಂದೆ ನಡೆದಿದ್ದ ಘಟನೆಯ ವಿಡಿಯೋ ವೈರಲ್ ಆಗಿದೆ. ಗ್ರಾಮದ ರಸ್ತೆ ಅಕ್ಕಪಕ್ಕದಲ್ಲೇ ಇದ್ದ ಮೇವಿನ ಬಣವೆ ಮದ್ಯೆ ಜಾಣ್ಮೆಯಿಂದ ಬೆಂಕಿ ಹತ್ತಿದ್ದ ಟ್ರ್ಯಾಕ್ಟರ್ ಓಡಿಸಲು ಗ್ರಾಮಸ್ಥರು ಸಹಾಯ ಮಾಡಿದ್ದಾರೆ. ಲಗುಬಗೆಯಿಂದ ಗ್ರಾಮಸ್ಥರು ಮಾಡಿದ ಪ್ಲ್ಯಾನ್ ಸಕ್ಸಸ್ ಆಗಿದೆ.

ಕೆರೆಯ ಮದ್ಯದವರೆಗೂ ಟ್ರ್ಯಾಕ್ಟರ್ ಇಳಿಸಿ ನೀರು ಹಾಕಿ ಬೆಂಕಿ ನಂದಿಸಿದ್ದಾರೆ. ಸುಡುತ್ತಿದ್ದ ಮೇವಿನ ಬಣವಿಗೆ ಗ್ರಾಮಸ್ಥರು ನೀರು ಹಾಕಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಘಟನೆಯಲ್ಲಿ 30 ಸಾವಿರ ಮೌಲ್ಯದ ಮೇವು ಸೇರಿದಂತೆ ಟ್ರ್ಯಾಕ್ಟರ್ ಇಂಜಿನ್ ಗೂ ಹಾನಿಯಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com