ಮಕ್ಕಳ ದಿನಾಚರಣೆ ವಿಶೇಷ : ಗೂಗಲ್ ಡೂಡಲ್ ಆಯ್ತು ಮುಂಬೈ ವಿದ್ಯಾರ್ಥಿ ಬಿಡಿಸಿದ ಚಿತ್ರ

ನವೆಂಬರ್ 14.1889 ರಂದು ಜನಿಸಿದ ಪಂಡಿತ್ ಜವಾಹರಲಾಲ್ ನೆಹರೂ ಅವರ ಗೌರವಾರ್ಥವಾಗಿ ಭಾರತದಲ್ಲಿ ನವೆಂಬರ್ 14 ರಂದು ಮಕ್ಕಳ ದಿನವನ್ನು ಆಚರಿಸಲಾಗುತ್ತದೆ. ಜವಾಹರಲಾಲ್ ನೆಹರೂ, ಪ್ರೀತಿಯಿಂದ ಚಾಚಾ ನೆಹರೂ ಎಂದು ಕರೆಯಲ್ಪಡುತ್ತಿದ್ದರು. ಈ ದಿನದಲ್ಲಿ ಚಾಕೊಲೇಟುಗಳು ಮತ್ತು ಉಡುಗೊರೆಗಳನ್ನು ಹೆಚ್ಚಾಗಿ ಮಕ್ಕಳಿಗೆ ವಿತರಿಸಲಾಗುತ್ತದೆ.

“ಇಂದಿನ ಮಕ್ಕಳು ನಾಳೆಯ ಭಾರತ ನಿರ್ಮಾತೃಗಳು, ನಾವು ಅವರಗಳನ್ನು ತರುವ ಮಾರ್ಗವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ” ಎಂದು ಪಂಡಿತ್ ಜವಾಹರಲಾಲ್ ನೆಹರು ಹೇಳಿರುವ ಮಾತು ಇಂದಿಗೂ ಚಿರಸ್ಮರಣೀಯ. ಇಂದು ಗೂಗಲ್ ಕೂಡ ಮಕ್ಕಳ ದಿನಾಚರಣೆಯನ್ನ ಆಚರಿಸುತ್ತಿದೆ.
ಮಕ್ಕಳ ದಿನಾಚರಣೆಯ ಪ್ರಯುಕ್ತ ಸರ್ಚ್ ಇಂಜಿನ್ ಗೂಗಲ್ 2018 ಡೂಡಲ್ 4 ಗೂಗಲ್ ಸ್ಪರ್ಧೆಯನ್ನು “ನನಗೆ ಏನು ಸ್ಪೂರ್ತಿಯಾಗಿದೆ” ಎನ್ನುವ ಥೀಮ್‍ನೊಂದಿಗೆ ಮುಂಬೈನ ಶಾಲೆ ಮಕ್ಕಳಿಗೆ ಆಯೋಜಿಸಿತ್ತು.

ಈ ಸ್ಪರ್ಧೆಯಲ್ಲಿ ಪಿಂಗ್ಲಾ ರಾಹಿಲ್ ವಿಜೇತರಾಗಿದ್ದಾರೆ. ಈ ವರ್ಷದ ಥೀಮ್ ಪ್ರಕಾರ ರಾಹುಲ್ ಬಿಡಿಸಿದ ಬಾಹ್ಯಾಕಾಶದಲ್ಲಿನ ನಕ್ಷತ್ರಗಳನ್ನು ದೂರದರ್ಶಕದಿಂದ ನೋಡುವ ಮಗುವಿನ ಆಕರ್ಷಕ ಚಿತ್ರ. ಇದನ್ನು 3,00,000 ಜನರ ಮತಗಳಿಂದ ಆಯ್ಕೆ ಮಾಡಲಾಗಿದ್ದು ಗೂಗಲ್ ವೀಕ್ಷಕರ ಗಮನ ಸೆಳೆಯುತ್ತಿದೆ.

Leave a Reply

Your email address will not be published.