ಲೈಂಗಿಕ ದುರ್ನಡತೆ ಆರೋಪ : ಫ್ಲಿಪ್‌ಕಾರ್ಟ್‌ನಿಂದ ಹೊರನಡೆದ ಬಿನ್ನಿ ಬನ್ಸಾಲ್

ಬೆಂಗಳೂರು ಮೂಲದ ಇ-ಕಾಮರ್ಸ್ ದೈತ್ಯಸಂಸ್ಥೆ ಫ್ಲಿಪ್‌ಕಾರ್ಟ್‌ನ ಸಂಸ್ಥಾಪಕ, ಸಿಇಒ ಬಿನ್ನಿ ಬನ್ಸಾಲ್ ಅವರು ಲೈಂಗಿಕ ದುರ್ನಡತೆ ಆರೋಪದ ಹಿನ್ನೆಲೆಯಲ್ಲಿ ಮಂಗಳವಾರ ಪದತ್ಯಾಗ ಮಾಡಿದ್ದಾರೆ.

ಈ ಆರೋಪದಿಂದ ನಾನು ಬೇಸತ್ತಿದ್ದು, ಹುದ್ದೆ ತೊರೆಯುತ್ತಿದ್ದೇನೆ ಎಂದು ಬನ್ಸಾಲ್ ಅವರು ಸಹೋದ್ಯೋಗಿಗಳಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ. 2016ರಲ್ಲಿ ಫ್ಲಿಪ್‌ಕಾರ್ಟ್‌ನ ಮಾಜಿ ಉದ್ಯೋಗಿ ಬನ್ಸಾಲ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಫ್ಲಿಪ್‌ಕಾರ್ಟ್‌ ಅನ್ನು ಇತ್ತೀಚೆಗೆ ವಾಲ್‌ಮಾರ್ಟ್ ಖರೀದಿಸಿದ ಬಳಿಕ ಆಕೆ ಆ ಕಂಪನಿಯ ಬಳಿ ಬನ್ಸಾಲ್ ವಿರುದ್ಧ ದೂರು ನೀಡಿದ್ದರು. ಜುಲೈನಲ್ಲಿ ಈ ವಿಷಯದ ತನಿಖೆಗೆ ಅಂತಾರಾಷ್ಟ್ರೀಯ ಕಾನೂನು ಸಂಸ್ಥೆಯೊಂದನ್ನು ನೇಮಿಸಲಾಯಿತು.

ಬನ್ಸಾಲ್ ಅವರು ಈ ಆರೋಪವನ್ನು ತಳ್ಳಿ ಹಾಕಿದ್ದರೂ ಕೂಡಾ, ಆ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಬನ್ಸಾಲ್‌ರ ಅಸಮಂಜಸ ನಡವಳಿಕೆಯನ್ನು ತನಿಖಾ ಸಂಸ್ಥೆ ಬೊಟ್ಟು ಮಾಡಿತ್ತು. ಅದೊಂದು ಒಪ್ಪಿತ ಸಂಬಂಧವಾಗಿತ್ತು ಎಂಬುದನ್ನೂ ಕಂಡುಕೊಂಡಿತ್ತು. ಆದರೆ ಈ ಆರೋಪದ ಕುರಿತು ಬನ್ಸಾಲ್ ಅವರು ವಾಲ್‌ಮಾರ್ಟ್ ಜತೆಗಿನ ಒಪ್ಪಂದದ ವೇಳೆ ಮಾಹಿತಿ ನೀಡಿಲ್ಲ. ಪಾರದರ್ಶಕತೆಯ ಕೊರತೆಯ ಬಗ್ಗೆ ಬೇಸರ ವ್ಯಕ್ತಪಡಿಸಿತು. ಈ ಹಿನ್ನೆಲೆಯಲ್ಲಿ ಬನ್ಸಾಲ್ ಪದತ್ಯಾಗಕ್ಕೆ ನಿರ್ಧರಿಸಿದ್ದಾರೆ. ಅವರು ಅಧ್ಯಕ್ಷ, ಸಿಇಒ ಹುದ್ದೆಗಷ್ಟೇ ರಾಜೀನಾಮೆ ನೀಡಿದ್ದು, ಕಂಪನಿಯ ಆಡಳಿತ ಮಂಡಳಿಯಲ್ಲಿ ಮುಂದುವರಿಯಲಿದ್ದಾರೆ. ಕಲ್ಯಾಣ ಕೃಷ್ಣಮೂರ್ತಿ ಫ್ಲಿಪ್‌ಕಾರ್ಟ್‌ನ ಹೊಸ ಸಿಇಒ ಆಗಿ ನಿಯುಕ್ತಿಗೊಂಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com