Children’s Day : ಬಾಲ್ಯದ ದಿನಗಳನ್ನು ಮೆಲುಕು ಹಾಕಿದ ನಟಿ ಸಿಂಧು..

ನಟಿ ಸಿಂಧು :- ಸಿಂಧು ಹೆಚ್ಚಾಗಿ ಬಾಲ ನಟನೆಯಲ್ಲಿ ಕಾಣಿಸಿಕೊಂಡಿರುವ ನಟಿ. ಆಪ್ತ ರಕ್ಷಕ, ನಾನೆಂದು ನಿಮ್ಮವನೆ ಅಂತಹ ಫೇಮಸ್ ಕನ್ನಡ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಬಾಲ್ಯದ ಹುಡುಗಾಟದಲ್ಲೇ ಹೆಚ್ಚು ಬಾಲ ನಾಯಕಿಯಾಗಿ ನಟಿಸಿದ ಹುಡುಗಿ ಸಿಂಧು. ತಮ್ಮ ನಾಲ್ಕನೇ ವಯಸ್ಸಿನಿಂದಲೇ ಆಟ-ಪಾಠದೊಂದಿಗೆ ಆಕ್ಟಿಂಗ್ ಕಡೆಗೆ ಹೆಚ್ಚು ಗಮನ ಹರಿಸಿದ್ದ ನಟಿ.

  

ಬಾಲ್ಯದಲ್ಲಿ ಮಕ್ಕಳ ದಿನಾಚರಣೆ :- ಶಾಲೆಯಲ್ಲಿ ಟೀಚರ್ಸ್ ಮಕ್ಕಳನ್ನ ತುಂಬಾ ಪ್ರೀತಿ ಮಾಡ್ತಾಯಿದ್ರು. ಮಕ್ಕಳ ದಿನಾಚರಣೆ ಅಂದ್ರೆ ನಮಗೆಲ್ಲಾ ಹಬ್ಬ. ಯಾಕಂದ್ರೆ ಅಂದು ನಮಗೆ ಕಲರ್ ಡ್ರೆಸ್ ಹಾಕಲು ಪರ್ಮಿಷನ್ ಇರ್ತಾಯಿತ್ತು. ಟೀಚರ್ಸ್ ಎಲ್ಲರಿಗೂ ವಿಷ್ ಮಾಡಿ ಸ್ವೀಟ್ಸ್, ಬುಕ್ಸ್, ಪೆನ್, ಬ್ಯಾಗ್ಸ್ ಕೊಡ್ತಾಯಿದ್ರು. ಅವತ್ತು ಬೆಳಗ್ಗೆಯಿಂದಲೇ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ಮಧ್ಯಾಹ್ನದ ನಂತರ ರಜೆ ಕೊಡ್ತಾಯಿದ್ರು. ಚಿಲ್ಡ್ರನ್ಸ್ ಡೇ ಅಂದ್ರೆ ಒಂದು ಹಬ್ಬ.

 

 

ಮಕ್ಕಳಿಗೆ ಸಂದೇಶ :- ಇಂದಿನ ಮಕ್ಕಳು ತಂದೆ-ತಾಯಿಯಷ್ಟೇ ಶಿಕ್ಷಕರಿಗೂ ಗೌರವ ಕೊಡಬೇಕು. ನಾವು ಎಷ್ಟೇ ಕಲಿತು ದೊಡ್ಡವರಾದರೂ ಕಲಿಸಿದ ಶಿಕ್ಷಕರು ನಮಗಿಂತ ಅನುಭವದಲ್ಲಿ ದೊಡ್ಡವರು ಅನ್ನೋದನ್ನ ಮಕ್ಕಳು ಅರಿತರೆ ಶಿಕ್ಷಕರಿಗೆ ಮಾತ್ರವಲ್ಲ ಎಲ್ಲರನ್ನೂ ಗೌರವದಿಂದ ಕಾಣುತ್ತಾರೆ. ಈ ಪಾಠವನ್ನ ತಂದೆ-ತಾಯಿ ಮಕ್ಕಳಿಗೆ ಕಲಿಸಬೇಕು.

One thought on “Children’s Day : ಬಾಲ್ಯದ ದಿನಗಳನ್ನು ಮೆಲುಕು ಹಾಕಿದ ನಟಿ ಸಿಂಧು..

  • November 15, 2018 at 11:13 AM
    Permalink

    Sindhu is a very down to earth girl. Very lively and kind natured. She doesn’t have to put effort in acting because her talent is very natural.

    Reply

Leave a Reply

Your email address will not be published.