ನೆಹರು 129ನೇ ಜನ್ಮದಿನ : ದೇಶದ ಪ್ರಥಮ ಪ್ರಧಾನಿ ಸ್ಮರಿಸಿದ ರಾಷ್ಟ್ರಪತಿ ಕೋವಿಂದ್, PM ಮೋದಿ

ಇಂದು ದೇಶಾದ್ಯಂತ ಪಂಡಿತ್ ಜವಾಹರ್ ಲಾಲ್ ನೆಹರು ಅವರ 129 ಜನ್ಮ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಚಾಚಾ ನೆಹರೂ ಅವರ ಜನ್ಮದಿನಾಚರಣೆಯ ಸಂದರ್ಭದಲ್ಲಿ, ಮಾನ್ಯ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿಯವರು, ದೇಶದ ಪ್ರಥಮ ಪ್ರಧಾನಿಯ ಕೊಡುಗೆಯನ್ನು ಸ್ಮರಿಸಿದ್ದಾರೆ.

ಟ್ವೀಟ್ ಮಾಡಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ‘ ನಮ್ಮ ದೇಶದ ಪ್ರಥಮ ಪ್ರಧಾನಮಂತ್ರಿ ಶ್ರೀ ಜವಾಹರ್ ಲಾಲ್ ನೆಹರೂ ಅವರನ್ನು, ಅವರ ಜನ್ಮದಿನಾಚರಣೆಯ ಸಂದರ್ಭದಲ್ಲಿ ಸ್ಮರಿಸಿಕೊಳ್ಳುತ್ತಿದ್ದೇನೆ ‘ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ‘ ನಮ್ಮ ದೇಶದ ಪ್ರಥಮ ಪ್ರಧಾನಮಂತ್ರಿ ಶ್ರೀ ಜವಾಹರ್ ಲಾಲ್ ನೆಹರೂ ಅವರನ್ನು, ಜನ್ಮದಿನಾಚರಣೆಯ ಸಂದರ್ಭದಲ್ಲಿ ಸ್ಮರಿಸಿಕೊಳ್ಳುತ್ತಿದ್ದೇನೆ. ಸ್ವಾತಂತ್ರ್ಯ ಹೋರಾಟದಲ್ಲಿ ಹಾಗೂ ಪ್ರಧಾನಿಯಾಗಿ ಅವರ ಆಳ್ವಿಕೆಯಲ್ಲಿನ ಕೊಡುಗೆಗಳನ್ನು ಸ್ಮರಿಸುತ್ತೇವೆ ‘ ಎಂದು ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com