Chidren’s Day : ಬಾಲ್ಯದ ಸವಿನೆನಪು ಹಂಚಿಕೊಂಡ ನಟಿ ರೂಪಿಕಾ ಹೇಳಿದ್ದೇನು..?

ನಟಿ ರೂಪಿಕಾ :- ರುದ್ರಾಕ್ಷಿಪುರ, ಮಂಜರಿ ಅಂತಹ ಪ್ರಸಿದ್ಧ ಕನ್ನಡ ಸಿನಿಮಾಗಳಲ್ಲಿ ನಟಿಸಿದ ನಟಿ ರೂಪಿಕ ತಮ್ಮ ಬಾಲ್ಯದ ಸವಿನೆನಪು ಹಂಚಿಕೊಂಡಿದ್ದು ಏನ್‍ಸುದ್ದಿಯೊಂದಿಗೆ. ಬಾಲ್ಯದಲ್ಲಿ ವೇದಿಕೆ, ನಾಟಕ, ನೃತ್ಯಕ್ಕೆ ಹೆಚ್ಚು ಹೊತ್ತು ಕೊಡುತ್ತಿದ್ದ ಈ ಹುಡುಗಿಗೆ ರವಿಂದ್ರ ಕಲಾ ಕ್ಷೇತ್ರ, ಕುವೆಂಪು ಕಲಾ ಕ್ಷೇತ್ರ ಚಿರಪರಿಚಿತ.

Image result for rupika kannada film actress

ಬಾಲ್ಯದಲ್ಲಿ ಮಕ್ಕಳ ದಿನಾಚರಣೆ :- ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ರೂಪಿಕ ಬಾಲ್ಯದ ವಿದ್ಯಾಭ್ಯಾಸ ಕೂಡ ಬೆಂಗಳೂರಿನಲ್ಲೇ ಪೂರ್ಣಗೊಳಿಸಿದ್ದೇನೆ. ಬಾಲ್ಯದ ದಿನದಲ್ಲಿ ಮಕ್ಕಳ ದಿನಾಚರಣೆ ಸ್ಪೆಷಲ್ಲಾಗಿ ಆಚರಿಸುವುದು ರೂಢಿ. ಕ್ಲಾಸ್ ರೂಮ್‍ಗೆ ಟೀಚರ್ಸ್‍ನನ್ನ ವೆಲ್‍ಕಮ್ ಮಾಡಿ ಅವರಿಗೆ ನೃತ್ಯ ಹಾಗೂ ಆಟ ಆಡಿಸುವ ಮೂಲಕ ಮನರಂಜನೆ ನೀಡ್ತಾಯಿದ್ವಿ.

Image result for rupika kannada film actress

ಮಕ್ಕಳಿಗೆ ಸಂದೇಶ :- ಇಂದಿನ ಮಕ್ಕಳಿಗೆ ತಾಳ್ಮೆ ಕಡಿಮೆ ಆಗ್ತಾಯಿದೆ. ಏನಾದ್ರು ಸಿಗಲಿಲ್ಲ ಅಂದರೆ ನಿರಾಶೆಯಾಗ್ತಾರೆ. ಬಾಲ್ಯದಲ್ಲಿಯೇ ಮಕ್ಕಳಿಗೆ ತಾಳ್ಮೆ ಕಲಿಸಬೇಕು. ಜೊತೆಗೆ ಚಂದಮಾಮನನ್ನ ತೋರಿಸಿ ಊಟ ಮಾಡಿಸುವ ಕಾಲ ಈಗಿಲ್ಲ ಬದಲಿಗೆ ಮಕ್ಕಳು ತಂತ್ರಾಜ್ಞಾನಕ್ಕೆ ಅಡಿಕ್ಟ್ ಆಗಿದ್ದಾರೆ. ತಂತ್ರಾಜ್ಞಾನದಿಂದಾಗಿ ಮಕ್ಕಳು ಸಂಬಂಧಗಳಿಂದ ದೂರ ಉಳಿಯುತ್ತಿದ್ದಾರೆ. ಅವಶ್ಯಕತೆ ಇದ್ದಷ್ಟು ತಂತ್ರಜ್ಞಾನ ಬಳಕೆ ಮಾಡುವುದು ಉತ್ತಮ.

Leave a Reply

Your email address will not be published.