ಆಪರೇಷನ್ ವೇಳೆ ಈಕೆಯ ಹೊಟ್ಟೆಯಲ್ಲಿ ಸಿಕ್ಕಿದ್ದು ಬರೋಬ್ಬರಿ 1.5 ಕೆ.ಜಿ ಲೋಹ..!

ಒಂದು ಇಂಚು ಉದ್ದದ ಕಬ್ಬಿಣದ ಉಗುರುಗಳು, ಬೀಜಗಳು, ಬೆಲ್ಟ್ಗಳು, ಸೇಫ್ಟಿ ಪಿನ್ಗಳು, ಯು-ಪಿನ್, ಹೇರ್ ಪಿನ್, ಸರಪಣಿಗಳು, ಬ್ರೇಸ್ಲೆಟ್ಸ್, ಮಾಂಗಲ್ಯ ಸರ, ಚೈನ್ಸ್, ತಾಮ್ರದ ಉಂಗುರ, ಬಳೆಗಳು… ಇವು ಯಾವುದೋ ಯಂತ್ರಾಂಶದ ಅಂಗಡಿ ಅಥವಾ ಆಭರಣದ ಅಂಗಡಿಯಲ್ಲಿಟ್ಟ ಸರಕುಗಳ ಪಟ್ಟಿ ಅಲ್ಲ. ಬದಲಿಗೆ ಮಹಾರಾಷ್ಟ್ರದ ಮಹಿಳೆಯ ಹೊಟ್ಟೆಯಲ್ಲಿ ಕಂಡುಬಂದ ಸಾಮಾನುಗಳು.

ಮಹಿಳೆಯೊಬ್ಬಳು ತೀವ್ರತರವಾದ ಹೊಟ್ಟೆ ನೋವಿನಿಂದಾಗಿ ಕಳೆದ ತಿಂಗಳು 31ರಂದು ಸರ್ಕಾರಿ ಆಸ್ಪತ್ರೆಯಿಂದ ಸಿವಿಲ್ ಆಸ್ಪತ್ರೆಗೆ ದಾಖಲಾದರು. ಮಹಾರಾಷ್ಟ್ರದ ಶಿರಡಿಯ ಸ್ಥಳೀಯರು, ಶಾಹರ್ಕೋಟ್ಡಾ ಪ್ರದೇಶದ ಬೀದಿಗಳಲ್ಲಿ ಅಲೆದಾಡುತ್ತಿದ್ದ ಈ ಮಾನಸಿಕ-ಅನಾರೋಗ್ಯದ ಮಹಿಳೆಯನ್ನು ನ್ಯಾಯಾಲಯ ಆದೇಶದಂತೆ ಮಾನಸಿಕ ಆರೋಗ್ಯ ಆಸ್ಪತ್ರೆಗೆ ಹಸ್ತಾಂತರಿಸಿದ್ದರು.

ಈ ವೇಳೆ ಎಕ್ಸ-ರೇ ಮಾಡಿ ನೋಡಿದಾಗ ವೈದ್ಯ ಲೋಕವನ್ನು ಬೆಚ್ಚಿ ಬೀಳಿಸುವ ಸುದ್ದಿಯೊಂದು ಹೊರಬಿದ್ದಿತ್ತು. ಮೈ ಝುಂ ಎನಿಸುವ ಸುದ್ದಿ ಏನೆಂದರೆ ಮಹಿಳೆಯ ಹೊಟ್ಟೆಯಲ್ಲಿ ಬೆಲ್ಟ್ಗಳು, ಸೇಫ್ಟಿ ಪಿನ್ಗಳು, ಯು-ಪಿನ್, ಹೇರ್ ಪಿನ್, ಸರಪಣಿಗಳು, ಬ್ರೇಸ್ಲೆಟ್ಸ್, ಮಾಂಗಲ್ಯ, ಚೈನ್ಸ್, ತಾಮ್ರದ ಉಂಗುರ, ಬಳೆಗಳು ತುಂಬಿದ ಒಂದು ದೊಡ್ಡ ಗಡ್ಡೆಯೇ ನಿರ್ಮಾಣವಾದ ವಿಷಯ.

ಇನ್ನೂ ಆಳವಾಗಿ ಪರೀಕ್ಷಿಸಿ ನೋಡಿದಾಗ ಸೇಫ್ಟಿ ಪಿನ್ಗಳು ಅವಳ ಶ್ವಾಸಕೋಶದಿಂದ ಹೊರಬಂದಿದ್ದವು. ಕೆಲ ಪಿನ್ಗಳು ಆಕೆಯ ಹೊಟ್ಟೆಗೆ ಚುಚ್ಚಿಕೊಂಡಿದ್ದವು. ಇದನ್ನರಿತ ಸಿವಿಲ್ ಆಸ್ಪತ್ರೆಯ ಹಿರಿಯ ಶಸ್ತ್ರಚಿಕಿತ್ಸಕರು ತಕ್ಷಣವೇ ಆಕೆಗೆ ಒಂದೂವರೆ ಎರಡು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ಮಾಡಿ, 1.5 ಕೆಜಿ ತೂಕದ ಯಂತ್ರಾಂಶದ ಸಾಮಾನು ಮತ್ತು ಆಭರಣಗಳನ್ನು ಹೊರತೆಗೆದಿದ್ದಾರೆ. ಮಾನಸಿಕ ಅಸ್ವಸ್ಥೆಯಾದ ಮಹಿಳೆ ಸುಮಾರು ತಿಂಗಳುಗಳಿಂದ ಇಂತೆಲ್ಲಾ ಸಾಮಾನುಗಳನ್ನ ಸೇವಿಸಿದ್ದಾಳೆ ಎನ್ನಲಾಗಿದೆ. ಶಸ್ತ್ರಚಿಕಿತ್ಸೆಯ ಬಳಿಕ ಮಾನಸಿಕ ಅಸ್ವಸ್ಥೆಯ ಸಹೋದರನನ್ನ ಪತ್ತೆ ಹಚ್ಚಲಾಗಿದೆ.

Leave a Reply

Your email address will not be published.