ಕೇಸರಿಮಯವಾದ ಕಾಲಾ – ದ್ರಾವಿಡ ನಾಡಿನಲ್ಲಿ ಬಿಜೆಪಿ ಬೆಂಬಲಕ್ಕೆ ನಿಂತ ಸ್ಟೈಲ್ ಕಿಂಗ್..!

ಹೊಸ ರಾಜಕೀಯ ಪಕ್ಷ ಹುಟ್ಟುಹಾಕಿರುವ ಸುಪರ್ ಸ್ಟಾರ್ ರಜನೀಕಾಂತ್ ಅವರ ನಿಲುವು ಈ ತನಕ ಸ್ಪಷ್ಟವಾಗಿಲ್ಲ. ಅವರು ಬಿಜೆಪಿ ಕಡೆ ವಾಲುತ್ತಾರೋ ಅಥವಾ ವಿಪಕ್ಷಗಳತ್ತ ಮನ ಮಾಡಿದ್ದಾರೋ ಎಂಬುದು ಇನ್ನೂ ನಿಗೂಢವಾಗಿದೆ. ಈ ಮಧ್ಯೆ ಸೋಮವಾರ ರಜನೀಕಾಂತ್ ಹೇಳಿರುವ ಹೊಸ ರಾಜಕೀಯ ಡೈಲಾಗ್ ಕುರಿತು ಭಾರೀ ಚರ್ಚೆ ಶುರುವಾಗಿದೆ.

ಎಲ್ಲಾ ವಿಪಕ್ಷಗಳು ಬಿಜೆಪಿ ವಿರುದ್ಧ ಒಂದಾಗುತ್ತಿವೆ ಎಂದಾದರೆ ಬಿಜೆಪಿ ಅಷ್ಟೊಂದು ಕೆಟ್ಟದೇ ಎಂದು ಚೆನ್ನೈ ವಿಮಾನ ನಿಲ್ದಾಣದ ಹೊರಗಡೆ ಸುದ್ದಿಗಾರರು ರಜನೀಕಾಂತ್ ಅವರನ್ನು ಪ್ರಶ್ನಿಸಿದರು. ಅದಕ್ಕೆ ನಗುತ್ತಾ ಉತ್ತರಿಸಿದ ರಜನಿ, ‘ವಿರೋಧ ಪಕ್ಷಗಳು ಹಾಗೆ ಹೇಳುತ್ತಿದ್ದಾರೆ ಎಂದಾದರೆ ಅವರು ಹೇಳುತ್ತಿರುವುದು ಸತ್ಯ ಇರಲೇಬೇಕು’ ಎಂದರು.

ಅಪನಗದೀಕರಣ ಕುರಿತು ಕೇಳಿದಾಗ, ಅದರ ಅನುಷ್ಠಾನದಲ್ಲಿ ತಪ್ಪಾಗಿದೆ. ಅದು ವಿಸ್ತೃತವಾಗಿ ಚರ್ಚೆಯಾಗಬೇಕಾದ ವಿಷಯ ಎಂದು ರಜನೀಕಾಂತ್ ಹೇಳಿದ್ದಾರೆ. ರಜನೀಕಾಂತ್ ಈ ಹೇಳಿಕೆ ಮೂಲಕ ವಿಪಕ್ಷಗಳನ್ನು ವ್ಯಂಗ್ಯವಾಡಿದ್ದೇ ಅಥವಾ ವಿಪಕ್ಷಗಳ ಪರ ಒಲವು ತೋರಿದ್ದಾರೆಯೇ ಎಂಬುದರ ಕುರಿತು ರಾಜಕೀಯ ವಲಯದಲ್ಲಿ ಚರ್ಚೆ ಶುರುವಾಗಿದೆ.

ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ನಾರಾಯಣ ತಿರುಪತಿ, ಆ ಮಾತುಗಳು ವಿಪಕ್ಷಗಳ ನಡೆಯನ್ನು ಅಣಕಿಸಿವೆಯೇ ಹೊರತು ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದಲ್ಲ ಎಂದು ಹೇಳಿದ್ದಾರೆ. ವಾಯ್ಸ್ ಆಫ್ ತಮಿಳುನಾಡಿನ ಸಂಸ್ಥಾಪಕ ರಾಜಶೇಖರನ್ ಪ್ರಕಾರ, ರಜನೀಕಾಂತ್ ಅವರ ಹೇಳಿಕೆ ತಟಸ್ಥ ರಾಜಕೀಯ ನಿಲುವನ್ನು ತೋರಿಸುತ್ತದೆ.

Leave a Reply

Your email address will not be published.

Social Media Auto Publish Powered By : XYZScripts.com