ದಿಲ್ಲಿಯ ಸುಖ, ಸಿಕ್ಕುಗಳಲ್ಲಿ ಬೇರು ಕಳಚಿಕೊಂಡ ಅನಂತ್ ಕುಮಾರ್..

ಇತ್ತೀಚಿನ ವರ್ಷಗಳಲ್ಲಿ, ಕರ್ನಾಟಕದ ಮುಖ್ಮಮಂತ್ರಿ ಆಗಬೇಕೆಂಬ ಎಂಬ ಮಹಾತ್ವಾಕಾಂಕ್ಷೆ ಈಡೇರುವುದು ಅಸಾಧ್ಯ ಎಂಬ ಸತ್ಯ ಅರಿತಿದ್ದ ಅಡ್ವಾಣಿಯವರ ಶಿಷ್ಯ ಅನಂತಕುಮಾರ ವಿಧಿವಶರಾಗಿದ್ದಾರೆ. ಅದ್ವಾನಿಯವರಂತೆ ಅನಂತ್ ಕೂಡ ಮೋದಿ ಟೀಮ್‍ನಿಂದ ದೂರವೇ ಇಟ್ಟಲ್ಪಟ್ಟಿದ್ದರು. ಕಾಟಾಚಾರಕ್ಕೆ ಎಂಬಂತೆ ಅವರಗೆ ಕೋ-ಪ್ರೊಪ್ರೈಲ್ ಖಾತೆ ದಯಪಾಲಿಸಲಾಗಿತ್ತು.

ಹುಬ್ಬಳ್ಳಿಯಲ್ಲಿ ರಾಜಕೀಯ ದೀಕ್ಷೆ ಪಡೆದ ಅಂತಕುಮಾರ, ತೆಲುಗು ಮನೆಭಾಷೆಯಾಗಿರುವ ಮೂಲ್ಕನಾಡು ಬ್ರಾಹ್ಣಣ ಸಮುದಾಯಕ್ಕೆ ಸೇರಿದವರು. ಹುಬ್ಬಳ್ಳಿಯಲ್ಲಿ ಪ್ರಚಂಡ ಭಾಷಣಗಳಿಗೆ ಹೆಸರಾಗಿದ್ದ ಜನಸಂಘದ ಜಗನ್ನಾಥರಾವ್ ಜೋಶಿ ಪ್ರಭಾವಕ್ಕೆ ಒಳಗಾಗಿ ಅನಂತಕುಮಾರ, ಪ್ರಹ್ಲಾದ್ ಜೋಶಿ ಸಂಘ ಪರಿವಾರದ ಅಂಗಸಂಸ್ಥೆ ಎಬಿವಿಪಿ ಸೇರಿದ್ದರು. ರೈಲ್ವೆ ನೌಕರರಾಗಿದ್ದ ಇವರಿಬ್ಬರ ತಂದೆಯಂದಿರು ಹುಬ್ಬಳ್ಳಿಯ ರೈಲ್ವೇ ಕ್ವಾರ್ಟರ್ಸ್‍ನಲ್ಲಿ ತಮ್ಮ ಮಧ್ಯಮ ವರ್ಗದ ಕುಟುಂಬಗಳನ್ನು ಸಾಗಿಸುತ್ತಿದ್ದರು.

Image result for ananth kumar union minister

ಮೊದಲಿಂಲೂ ವೈದಿಕಶಾಹಿಯ ‘ಶ್ರೇಷ್ಠತೆ’ಯ ಆರಾಧಕರಾಗಿದ್ದ ಅನಂತಕುಮಾರ ಕುಟುಂಬ ಜನಸಂಘದ ಕಾಲದಿಂಲೂ ಸಂಘಪರಿವಾರದ ಬೆಂಬಲಿಗನಾಗಿತ್ತು. ಅನಂತ್ ತಾಯಿ ಗಿರಿಜಾ ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಸದಸ್ಯರೂ ಆಗಿದ್ದರು. 80ರ ದಶಕದ ಆರಂಭದ ವರ್ಷಗಳಲ್ಲಿ ಎಬಿವಿಪಿ ಕಾರ್ಯಕ್ರಮಗಳ ಸುದ್ದಿಗಳನ್ನು ಪತ್ರಿಕಾ ಕಚೇರಿಗಳಿಗೆ ತಲುಪಿಸುತ್ತಿದ್ದ ಅನಂತಕುಮಾರ್ ಪತ್ರಕರ್ತರೊಂದಿಗೆ ಆತ್ಮೀಯರಾಗಿದ್ದರು. ಆಗಿನ್ನೂ ಅವರಿಗೆ ಉಗ್ರ ಹಿಂದೂತ್ವದ ನಶೆ ತಗುಲರಿರಲಿಲ್ಲ. ವಿದ್ಯಾರ್ಥಿ ಸಂಘಟನೆಯಷ್ಟನ್ನೇ ತಲೆಗೆ ಹಚ್ಚಿಕೊಂಡಿದ್ದ ಅವರು ಎಬಿವಿಪಿಯೇತರ ಕಾರ್ಯಕ್ರಮಗಳಿಗೂ ಹಾಜರಾಗುವ ಉದಾರರಮನಸ್ಕರಾಗಿದ್ದರು. ಹೀಗಾಗಿಯೇ 1982ರಲ್ಲಿ ಬಂಡಾಯ ಸಾಹಿತ್ಯ ಸಂಘಟನೆಯ ಹುಬ್ಬಳ್ಳಿ ಘಟಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅನಂತಕುಮಾರ್ ಸಭಿಕರಾಗಿ ಭಾಗವಹಿಸಿದ್ದರು. ಆ ಸಭೆಯ ಆಕರ್ಷಣೆಯಾಗಿದ್ದ ಪಿ. ಲಂಕೇಶರ ಭಾಷಣವನ್ನು ತನ್ಮಯತೆಯಿಂದ ಆಲಿಸಿದ್ದರು. ರೈಲ್ವೆ ಕ್ವಾರ್ಟರ್ಸ್‍ನಲ್ಲಿ ಇದ್ದದ್ದಕ್ಕೇನೋ ಎಡಪಂಥಿಯ ಕಾರ್ಮಿಕ ನಾಯಕರ ಬಗ್ಗೆ ಗೌರವ ಹೊಂದಿದ್ದರು.

Image result for ananth kumar union minister

ಇದು ಅಲ್ಪಕಾಲದ ಕತೆಯಷ್ಟೇ. ಮುಂದೆ ಅವರು ಎಬಿವಿಪಿಯ ರಾಜ್ಯ ಕಾರ್ಯದರ್ಶಿಯಾಗಿ, 1985ರ ಹೊತ್ತಿಗೆ ರಾಷ್ಟ್ರ ಕಾರ್ಯದರ್ಶಿಯಾಗಿ ಹಿಂದುತ್ವ ರಾಷ್ಟ್ರೀಯತೆಯ ಪ್ರತಿಪಾದನೆಯ ಕಾಲಾಳುಗಳ ಗುಂಪಿಗೆ ಸೇರಿದರು. 80ರ ದಶಕದ ಅಂತ್ಯದಲ್ಲಿ ಆರೆಸ್ಸೆಸ್ ಅವರನ್ನು ಬಿಜೆಪಿಗೆ ಡೆಪ್ಯೂಟ್ ಮಾಡಿ, ಯಡಿಯೂರಪ್ಪ ನಂತರದ ನಾಯಕನನ್ನಾಗಿ ಬೆಳೆಸಲು ಆರಂಭಿಸಿತು.

Image result for ananth kumar union minister

ಮುಂದೆ ಅವರು ಬೆಂಗಳೂರು ದಕ್ಷಿಣದ ಸಂಸದದರಾದರು.ಅಲ್ಲಿನ ಬಹುಸಂಖ್ಯಾತ ಬ್ರಾಹ್ಮಣರು ಅನಂತರ ಖಾಯಂ ಮತಬ್ಯಾಂಕ್ ಆದರು. ಕಳೆದ ಎರಡು ದಶಕಗಳಲ್ಲಿ ಸ್ವಾರ್ಥಿಯಾಗುತ್ತಿರುವ ಬೆಂಗಳೂರಿನ ಮೇಲ್ಮಧ್ಯಮ ಮತ್ತು ಬಹುಪಾಲು ಮಧ್ಯಮ ವರ್ಗಗಳ ಕುಟುಂಬಗಳು ಹಿಂದೂತ್ವದ ಬಾಲಗಳಾಗಿದ್ದು ಅನಂತ್‍ಗೆ ತಾನಾಗೇ ದೊರೆತ ವರವಾಗಿತ್ತು. ಕಾಂಗ್ರೆಸ್-ಜೆಡಿಎಸ್‍ಗಳ ದುರ್ಬಲ ಅಭ್ಯರ್ಥಿಗಳು, ಅವರ ನಡುವಿನ ಮತ ಹಂಚಿಕೆಯೂ ಅನಂತರ ಸತತ ಗೆಲುವಿಗೆ ಸಹಕರಿಸಿತು. ವೆಂಕಯ್ಯನಾಯ್ಡು, , ಪಿಇಎಸ್ ದೊರೆಸ್ವಾಮಿ ಕಾರಣದಿಂದ ತೆಲುಗರ ಮತಗಳು ದಕ್ಕುತ್ತ ಬಂದವು. ಕೇಂದ್ರ ಸರ್ಕಾರಿ ನೌಕರರೂ ಅನಂತ್‍ರ ಪರವೇ ಇದ್ದರು. ವಿಪಕ್ಷಗಳೊಂದಿಗಿನ ಒಳ ಒಪ್ಪಂದಗಳಿಂದಾಗಿ ಅವರವಿರುದ್ಧ ದುರ್ಬಲ ಅಭ್ಯರ್ಥಿಗಳನ್ನೇ ಕಣಕ್ಕಿಳಿಸುತ್ತ ಬರಲಾಗಿತು.
ಕರ್ನಾಟಕದ ಸಿಎಂ ಆಗಬೇಕೆಂದು ಬಯಸಿದ್ದ ಅನಂತರಿಗೆ ಅಂತಹ ಪೂರಕ ವಾತಾವರಣವೂ ಲಭ್ಯವಾಗಲಿಲ್ಲ. ದೆಹಲಿಯ ಅಧಿಕಾರ ರಾಜಕಾರಣಕ್ಕೆ ಸಿಮೀತರಾದ ಅವರು, ಬೆಂಗಳೂರಿನ ಕಾಸ್ಮೊಪಾಲ್ಟಿಯನ್ ರಾಜಕಾರಣಿಯಾದರಷ್ಟೇ.

Image result for ananth kumar union minister

ನರೇಂದ್ರ ಮೋದಿ ಪ್ರಧಾನಮಂತ್ರಿಯಾದ ನಂತರ, ಅದ್ವಾನಿ ಬಳಗಲ್ಲಿದ್ದ ಅನಂತ್‍ಗೆ ಪ್ರಾಧಾನ್ಯತೆ ಸಿಗಲಿಲ್ಲ. ಆರ್‍ಎಸ್‍ಎಸ್ ಕಾರಣದಿಂದ ರಾಸಾಯನಿಕ ಗೊಬ್ಬರ ಖಾತೆಯ ಸಚಿವರಾದಷ್ಟೇ. ಲಿಂಗಾಯತ ಯಿಡಿಯೂರಪ್ಪ ಮಾಸ್ ಲೀಡರ್ ಕೂಡ ಆಗಿದ್ದರಿಂದ, ಕನ್ನಡಿಗರ ತಳಮಟ್ಟದ ಸಂಪರ್ಕವೇ ಇಲ್ಲದಿದ್ದ ಬ್ರಾಹ್ಮಣ ಅನಂತಕುಮಾರರಿಗೆ ಸಿಎಂ ಪಟ್ಟ ಮರಿಚೀಕೆಯೇ ಆಯಿತು. ಆರ್‍ಎಸ್‍ಎಸ್ ಪ್ರಭಾವವಷ್ಟನ್ನೇ ನೆಚ್ಚಿಕೊಂಡು ಸಿಎಂ ಹುದ್ದೆಯ ಕನಸು ಕಂಡಿದ್ದು ಅನಂತರ ಸ್ವಯಂಕೃತಾಪರಾಧವಾಗಿತ್ತು.

ಸೈದ್ಧಾಂತಿಕವಾಗಿ ಅನಂತಕುಮಾರ ಹೆಗಡೆಯಂತೆಯೇ ಇದ್ದ ಅವರು, ಹೆಗಡೆಯಂತೆ ಬಾಹ್ಯವಾಗಿ ಅದನ್ನು ಕ್ಷುಲ್ಲಕ ಭಾಷೆಯಲ್ಲಿ ಬಳಸಲಿಲ್ಲ. ಈ ಕಾರಣಕ್ಕಾಗಿ ಅನಂತಕುಮಾರ ಮೆÉಚ್ಚುಗೆಯಾಗಬಹುದೇನೋ? ರಾಜ್ಯಕ್ಕೆ ಅನಂತರ ಕೊಡುಗೆ ಏನೆಂದು ನೋಡಿದರೆ ಹೇಳಿಕೊಳ್ಳುವಂತದ್ದೇನೂ ಇಲ್ಲ ಕೇಂದ್ರದಲ್ಲಿ ಸಚಿವರಾದ ಅಲ್ಪಕಾಲದಲ್ಲೇ ಮಲ್ಲಿಕಾರ್ಜುನ ಖರ್ಗೆ ರಾಜ್ಯಕ್ಕೆ ನೀಡಿದ ಮಹತ್ತರ ಕಾಣಿಕೆಗಳು, ಜಾಫರ್ ಶರೀಫರ ರೈಲ್ವೇ ಯೋಜನೆಗಳನ್ನು ನೆನೆಸಿಕೊಂಡಾಗ ಅನಂತ್ ಸಾಧನೆ ಶೂನ್ಯ. ಭೌಗೋಳಿಕ ಮತ್ತು ಆಡಳಿತಾತ್ಮಕ ಕಾರಣದಿಂದ ಸಹಜವಾಗಿ ಹುಬ್ಬಳ್ಳಿಗೆ ಮಂಜೂರಾಗಿದ್ದ ನೈರುತ್ಯ ರೈಲ್ವೇ ವಲಯ ಕಚೇರಿ ಕೈಜಾರದಂತೆ ಅನಂತ್ ಶ್ರಮಿಸಿದರು. ಆಗಿನ ಪ್ರಧಾನಿ ವಾಜಪೇಯಿ ಇದಕ್ಕೆ ನೆರವಾದರು.

ಉಳಿದಂತೆ ತಮಗೆ ರಾಜಕೀಯನ ದೀಕ್ಷೆ ನೀಡಿದ ಹುಬ್ಬಳ್ಳಿ ಭಾಗವನ್ನು ಅವರು ನಿರ್ಲಕ್ಷಿಸಿತ್ತಲೇ ಬಂದರು. ಈದ್ಗಾ ಮೈದಾನದಲ್ಲಿ ಉಮಾಭಾರತಿ ಧ್ವಜ ಹಾರಿಸಲು ಬಂದಾಗಷ್ಟೇ ಅವರು ಗಳಿಗೆ ಹೊತ್ತು ಇಲ್ಲಿ ಕ್ರಿಯಾಶೀಲರಾಗಿದ್ದರು. ಈ ಭಾಗದ ಜೀವನ್ಮರಣದ ಹೋರಾಟ ಎನಿಸಿದ ಮಹದಾಯಿ ಹೋರಾಟವನ್ನೂ ಅವರು ನಿರ್ಲಕ್ಷಿಸಿದರು. ನರಗುಂದದ ಹೋರಾಟ ವೇದಿಕೆಯ ಮೇಲೆ ಔಪಚಾರಿಕವಾಗಿದರೂ ಕಾಣಿಸಿಕೊಳ್ಳುವಷ್ಟು ನೈತಿಕತೆಯನ್ನು ಅವರು ಕಳೆÀದುಕೊಂಡಿದ್ದರು.
ಮಹದಾಯಿ ನೀರಿಗಾಗಿ ಸರ್ವಪಕ್ಷ ನಿಯೋಗ ಪ್ರಧಾನಿ ಭೇಟಿಯಾದಾಗ ಅನಂತ್ ಮೌನವಾಗಿದ್ದರು. ಪ್ರಧಾನಿ ಕಚೇರಿಯ ಸರ್ವಾಡಳಿತದ ಕಾರಣಕ್ಕೆ ಬಹುಪಾಲು ಕೇಂದ್ರ ಸಚಿವರಂತೆ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದ್ದರು.

Image result for ananth kumar union minister

ಬಾಬಾ ಬುಡನ್‍ಗಿರಿ ವಿವಾದ ರಾಜ್ಯವ್ಯಾಪಿಯಾದರೆ ಸಿಎಂ ಆಗಬಹುದು ಎಂದು ಲೆಕ್ಕಿಸಿದ್ದ ಅವರು, ‘ಬಾಬಾಬುಡನ್‍ಗಿರಿಯನ್ನು ಕರ್ನಾಟಕದ ಅಯೋಧ್ಯೆಯನ್ನಾಗಿ ಮಾಡುತ್ತೇವೆ’ ಎಂಬ ಅಪಾಯಕಾರಿ ಆಟಕ್ಕೆ ಕೈ ಹಾಕಿದ್ದರು. ಕೋಮು ಸೌಹಾರ್ದ ವೇದಿಕೆಯ ಹೋರಾಟದಿಂದ ಮೂಡಿದ ಜನಜಾಗೃತಿಯ ಎದುರು ನಿಲ್ಲದೇ ಹೋದರು.

ಅನಂತ್ ನಿಧನ ಎಂಬ ಸುದ್ದಿಯನ್ನು ಕೇಳಿದ ಕ್ಷಣದಲ್ಲಿ ಈ ಭಾಗದ ಜನಸಾಮಾನ್ಯರಿರಲಿ, ಹೊಸ ತಲೆಮಾರಿನ ಬಿಜೆಪಿ ಭಕ್ತರ ಕಣ್ಣಮುಂದೆ ಬಂದಿದ್ದು ಅನಂತಕುಮಾರ್ ಹೆಗಡೆಯ ಚಿತ್ರವೇ ಹೊರತು ಅನಂತಕುಮಾರರದ್ದಲ್ಲ ಎಂಬ ವಿದ್ಯಮಾನ, ಬಿಜೆಪಿಯಲ್ಲೇ ಅನಂತಕುಮಾರ್ ಅಜ್ಞಾತರಾಗಿದ್ದರು ಎಂಬುದಕ್ಕೆ ಸಂಕೇತದಂತಿದೆ. ಅದು ಮೋದಿ ಬಿಜೆಪಿಯ ವಿಜಯವೂ ಹೌದು, ಭಾರತದ ದುರ್ದೈವವೂ ಹೌದು.

Leave a Reply

Your email address will not be published.