ಸಜ್ಜನ ರಾಜಕಾರಣಿ ಅನಂತ್ ಕುಮಾರ್ ಸಾವು ರಾಜ್ಯ, ರಾಷ್ಟ್ರಕ್ಕೆ ದೊಡ್ಡ ನಷ್ಟ : ಸಿದ್ದರಾಮಯ್ಯ ಸಂತಾಪ

ಅನಂತ್ ಕುಮಾರ್ ನಿಧನದ ಕುರಿತು ಸಂತಾಪ ಸೂಚಿಸಿ ಹೇಳಿಕೆ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ‘ ಕೇಂದ್ರ ಸಚಿವಾರಾಗಿದ್ದ ಅಂನಂತಕುಮಾರ್ ಅವರು ಅಕಾಲಿಕ ಮರಣಕ್ಕೆ ತುತ್ತಾಗಿದ್ದಾರೆ. ಅವರು ಸಜ್ಜನ ಸುಸಂಸ್ಕೃತ ರಾಜಕಾರಣಿಯಾಗಿದ್ದರು. ರಾಷ್ಟ್ರ ರಾಜಕಾರಣಕ್ಕೆ ಇದು ದೊಡ್ಡ ನಷ್ಟ ‘ ಎಂದಿದ್ದಾರೆ.

‘ ಚಿಕ್ಕಂದಿನಲ್ಲೆ ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡು ರಾಷ್ಟ್ರಮಟ್ಟಕ್ಕೆ ಹೋಗಿದ್ದರು. ಎಬಿವಿಪಿಯಿಂದ ಆರಂಭವಾದ ಸಾರ್ವಜನಿಕ ಜೀವನ ಅವರನ್ನು ರಾಷ್ಟ್ರಮಟ್ಟಕ್ಕೆ ತೆಗೆದುಕೊಂಡು ಹೋಗಿತ್ತು. ಉತ್ತಮ ಆಡಳಿತಗಾರರಾಗಿದ್ದ ಅನಂತ್ ಕುಮಾರ್, ಕರ್ನಾಟಕದ ಬೆಳವಣಿಗೆ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು ‘

‘ ಕೇಂದ್ರದಲ್ಲಿ‌ ಮಂತ್ರಿಗಳಾದಾಗೆಲ್ಲ ರಾಜ್ಯದ ಸಮಸ್ಯೆಗೆ ಸಮರ್ಥವಾಗಿ ಸ್ಪಂದಿಸುತ್ತಿದ್ದರು. ರಾಜ್ಯ ಮತ್ತು ಕೇಂದ್ರ ಸರ್ಕಾರದ ಕೊಂಡಿಯಂತಿದ್ದರು. ಬಹಳ ಚಿಕ್ಕ ವಯಸ್ಸಿಗೆ ಅವರು ನಮ್ಮನ್ನಗಲಿದ್ದಾರೆ. ನಮ್ಮ. ಅವರ ಸ್ನೇಹ ಚೆನ್ನಾಗಿತ್ತು. ಪಕ್ಷ ರಾಜಕಾರಣ ಬೇರೆ ಮನುಷ್ಯ ಸಂಬಂದಗಳೆ ಬೇರೆ, ರಾಜ್ಯ ರಾಷ್ಟ್ರ ಕ್ಕೆ ತುಂಬಾ ನಷ್ಟವಾಗಿದೆ ‘ ಎಂದಿದ್ದಾರೆ.

‘ ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿಯನ್ನ ನೀಡಲಿ ಎಂದು ಬೇಡಿಕೊಳ್ತೇನೆ ‘ ಎಂದಿದ್ದಾರೆ.

Leave a Reply

Your email address will not be published.