ಶಾ ಅನ್ನೋದು ಪಾರ್ಸಿ ಹೆಸರು, ಅದನ್ನೂ ಬದಲಾಯಿಸ್ತೀರಾ? : ಬಿಜೆಪಿಗೆ ಇತಿಹಾಸಜ್ಞರ ಟಾಂಗ್

ಮರುನಾಮಕರಣ ಕಾರ್ಯದಲ್ಲಿ ಬ್ಯುಸಿಯಾಗಿರುವ ಬಿಜೆಪಿಗೆ ಇತಿಹಾಸಜ್ಞರೊಬ್ಬರು ಸರಿಯಾಗಿಯೇ ಟಾಂಗ್ ನೀಡಿದ್ದಾರೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರೇ, ನಿಮ್ಮ ಹೆಸರಿನಲ್ಲಿರುವ ಶಾ ಕೂಡಾ ಇಸ್ಲಾಮಿಕ್ ಮೂಲದ್ದು ನೆನಪಿರಲಿ ಎಂದು ಇತಿಹಾಸಜ್ಞ ಇರ್ಫಾನ್ ಹಬೀಬ್ ಕುಟುಕಿದ್ದಾರೆ.

ಮಜುಂದಾರ್, ಶಾ, ಮುನ್ಶಿ ಎಂಬುದೆಲ್ಲವೂ ಇಸ್ಲಾಮಿಕ್ ಮೂಲದವು. ಶಾ ಎಂಬುದು ಪಾರ್ಸಿ ಶಬ್ದ. ಸಂಸ್ಕೃತ ಶಬ್ದವಲ್ಲ. ಬಿಜೆಪಿಯವರು ಹೆಸರುಗಳನ್ನು ಬದಲಾಯಿಸುವುದಿದ್ದರೆ ತಮ್ಮ ಹೆಸರುಗಳನ್ನು ಮೊದಲು ಬದಲಾಯಿಸಲಿ ನಂತರ ನಗರಗಳ ಹೆಸರುಗಳನ್ನು ಬದಲಾಯಿಸಲಿ ಎಂದು ಅವರು ಕಿಡಿ ಕಾರಿದ್ದಾರೆ.
ಮುಘಲ್‌ಸರಾಯ್ ರೈಲ್ವೆ ನಿಲ್ದಾಣದ ಹೆಸರು ಬದಲಾಯಿಸುವ ಪ್ರಸ್ತಾಪವನ್ನು ಅಮಿತ್ ಶಾ ಅವರು ಮಂಡಿಸಿದ್ದರು. ಅಲಹಾಬಾದ್, ಫೈಜಾಬಾದ್ ಹೆಸರುಗಳನ್ನು ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಬದಲಾಯಿಸಿದ್ದರು.

ಬಿಜೆಪಿಯ ಮರುನಾಮಕರಣ ಕಾರ್ಯದ ವಿರುದ್ಧ ಎಲ್ಲೆಡೆಯಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ವಿಪಕ್ಷಗಳು, ಚಿಂತಕರು, ಜನಸಾಮಾನ್ಯರು ಅಷ್ಟೇ ಏಕೆ, ಸ್ವತಃ ಬಿಜೆಪಿ ಸರ್ಕಾರದ ಸಚಿವರೂ ಈ ಮರುನಾಮಕರಣ ಕಾರ್ಯಕ್ಕೆ ವಿರೋಧ ವ್ಯಕ್ತಪಡಿಸತೊಡಗಿದ್ದಾರೆ. ಶಹನವಾಜ್ ಹುಸೇನ್, ಮುಕ್ತರ್ ಅಬ್ಬಾಸ್ ನಖ್ವಿ, ಮೊಹ್ಸಿನ್ ರಾಜಾ ಅವರ ಹೆಸರನ್ನು ಮೊದಲು ಬದಲಾಯಿಸಿ ಎಂದು ಉತ್ತರ ಪ್ರದೇಶದ ಸಚಿವ ಓಂ ಪ್ರಕಾಶ್ ರಾಜ್‌ಭರ್ ಗುಡುಗಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com