ಆ್ಯಂಬಿಡೆಂಟ್ ಪ್ರಕರಣದಲ್ಲಿ ಇಬ್ಬರು ಟಿ.ವಿ ಪತ್ರಕರ್ತರು ಭಾಗಿ? ; 30 ಕೋಟಿ ಲಂಚ ಪಡೆದ ಆರೋಪ..!

ಆಂಬಿಡೆಂಟ್ ಮಾರ್ಕೆಟಿಂಗ್ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಸಿಸಿಬಿ ಪೊಲೀಸರ ವಶದಲ್ಲಿದ್ದಾರೆ. ಇದೀಗ ಮತ್ತೊಂದು ಸ್ಫೋಟಕ ಸುದ್ದಿ ಕೇಳಿ ಬಂದಿದ್ದು, ಆ್ಯಂಬಿಡೆಂಟ್ ವಂಚನೆ ಪ್ರಕರಣದಲ್ಲಿ ಇಬ್ಬರು ಟಿ.ವಿ ಪತ್ರಕರ್ತರು ಭಾಗಿಯಾಗಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಸಿಸಿಬಿ ಅಧಿಕಾರಿಗಳು ನಿರಾಕರಿಸಿದ್ದಾರೆ.

ಈ ಪೈಕಿ ಓರ್ವ ಆರೋಪಿ ‘ ಆ್ಯಂಬಿಡೆಂಟ್ ಪ್ರಕರಣದಲ್ಲಿ ಪೊಲೀಸ್ ಪ್ರಕರಣಗಳನ್ನು ನಿಭಾಯಿಸುತ್ತೇನೆ, ನಿಮಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇನೆ’ ಎಂದು ಹೇಳಿ 30 ಕೋಟಿ ಹಣ ಪಡೆದಿರುವ ಬಗ್ಗೆ ಸಿಸಿಬಿಗೆ ಮಾಹಿತಿ ಸಿಕ್ಕಿದೆ. ಇನ್ನು ಮತ್ತೊಬ್ಬ ಪತ್ರಕರ್ತ ಒಟ್ಟು 35 ಕೋಟಿ ಹಣವನ್ನು ಫರೀದ್ ಅವರಿಂದ ಪಡೆದಿದ್ದು, ಈ ಬಗ್ಗೆ ಸಿಸಿಬಿ ಬಳಿ ತಪ್ಪೊಪ್ಪಿಕೊಂಡಿದ್ದಾನೆ.

ಆದರೆ ಈ ಹಣದಲ್ಲಿ ಫರೀದ್ ಹೇಳಿದವರಿಗೆ 30 ಕೋಟಿ ಮೌಲ್ಯದ ಆಸ್ತಿಯನ್ನು ನೋಂದಾಯಿಸಿ ಕೊಟ್ಟಿದ್ದಾನೆ ಎಂದು ಹೇಳಿದ್ದಾನೆ. ಇದನ್ನು ಹೊರತುಪಡಿಸಿ ಬ್ಲಾಕ್‌ಮೇಲ್ ಮಾಡಿ 15 ಕೋಟಿ ಹಣವನ್ನು ಫರೀದ್ ಬಳಿ ವಸೂಲಿ ಮಾಡಿದ್ದಾನೆ ಎಂದು ಸಿಸಿಬಿ ಉನ್ನತ ಮೂಲಗಳಿಂದ ತಿಳಿದು ಬಂದಿದೆ.

One thought on “ಆ್ಯಂಬಿಡೆಂಟ್ ಪ್ರಕರಣದಲ್ಲಿ ಇಬ್ಬರು ಟಿ.ವಿ ಪತ್ರಕರ್ತರು ಭಾಗಿ? ; 30 ಕೋಟಿ ಲಂಚ ಪಡೆದ ಆರೋಪ..!

Leave a Reply

Your email address will not be published.