ಅನಂತ್ ಕುಮಾರ್ ಇರದಿದ್ದರೆ ಕೃಷ್ಣೆ, ಕಾವೇರಿ ವಿವಾದದಲ್ಲಿ ಈಗಿನ ನ್ಯಾಯವೂ‌ ಸಿಗುತ್ತಿರಲಿಲ್ಲ : ಬೊಮ್ಮಾಯಿ

ಬೆಂಗಳೂರು : ಅನಂತ್ ಕುಮಾರ್ ಇರದೇ ಇದ್ದರೆ ಕೃಷ್ಣ ಮತ್ತು ಕಾವೇರಿ ನದಿ ನೀರಿ‌ ಹಂಚಿಕೆ ವಿವಾದ ವಿಷಯದಲ್ಲಿ ರಾಜ್ಯಕ್ಕೆ ಈಗ‌ಸಿಕ್ಕಿರುವ ನ್ಯಾಯವೂ ಸಿಗುತ್ತಿರಲಿಲ್ಲ ರಸಜ್ಯದ ಜ್ವಲಂತ ಸಮಸ್ಯೆಗಳ ಪರಿಹಾರದಲ್ಲಿ ಅವರ ಪಾತ್ರ ಮಹತ್ವದ್ದಾಗಿತ್ತು ಎಂದು ಮಾಜಿ ಸಚಿವ ಬಸವರಾಜ ಬೊಮ್ಮಾಯಿ‌ ಸ್ಮರಿಸಿದ್ದಾರೆ.

ಅನಂತ್ ಕುಮಾರ್ ನಿವಾಸದಲ್ಲಿ ಮಾತನಾಡಿದ ಅವರು,ಅನಂತ್ ಕುಮಾರ್ ಧೀಂಮತ ನಾಯಕ, ಕೃಷ್ಣ, ಕಾವೇರಿ ವಿಷಯದಲ್ಲಿ‌ ಅವರು ಇರದಿದ್ದರೆ ನಮಗೆ ಈಗ ಸಿಕ್ಕ ನ್ಯಾಯವೂ ಸಿಗುತ್ತಿರಲಿಲ್ಲ ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಳಕ್ಕೂ ಅನಂತ್ ಕುಮಾರ್ ಕಾರಣ, ವಾಜಪೇಯಿ ಕಾಲದಲ್ಲಿ‌ ಕಾವೇರಿ ನೀರಿ ಹಂಚಿಕೆ ಸಂಬಂಧ ಸುಪ್ರೀಂ‌ ಕೋರ್ಟ್ ಆದೇಶದ ತೂಗುಗುತ್ತಿ ತಪ್ಪಿಸಿ ಪ್ರಧಾನಿ ನೇತೃತ್ವದ ಸಮಿತಿ‌ ರಚಿಸಿ‌ ರಾಜ್ಯವನ್ನು ಪಾರು ಮಾಡಿದ್ದರು.ಕೃಷ್ಣ ನದಿ ನೀರು ಹಂಚಿಕೆ ವಿವಾದದಲ್ಲಿ ಸೌಹಾರ್ದಯುತ ವಾತಾವರಣ ಸೃಷ್ಟಿಗೆ ಮಹತ್ವದ ಪಾತ್ರ ವಹಿಸಿದ್ದರು.ಅವರಿಲ್ಲದೇ ಇದ್ದಿದ್ದರೆ ಕೃಷ್ಣೆ ಕಣಿವೆ ಹೊತ್ತಿ ಉರಿಯಿತ್ತಿತ್ತು ಎಂದು ಸ್ಮರಿಸಿದರು.

ಅನಂತ್ ಕುಮಾರ್ ನಿಧನದಿಂದ ರಾಜ್ಯ,ದೇಶ ಹಾಗು ಪಕ್ಷಕ್ಕೆ ತುಂಬಲಾರದ ನಷ್ಟವಾಗಿದ್ದು,ನಾವು ಆತ್ಮೀಯ ಸ್ನೇಹಿತ‌ ಕಳೆದುಕೊಂಡಿದ್ದೇವೆ, ಅವರ ವಿಚಾರಧಾರೆ ನೆನಪು ಮಾಡಿಕೊಂಡು ಸಾಗಬೇಕು‌ ಅಷ್ಟೇ ಎಂದರು.

Leave a Reply

Your email address will not be published.

Social Media Auto Publish Powered By : XYZScripts.com