ವಿವಾದ ಸೃಷ್ಟಿಸಿದ ಕೊಹ್ಲಿಯ ‘ಲೀವ್ ಇಂಡಿಯಾ’ ಹೇಳಿಕೆ : ಸ್ಪಷ್ಟನೆ ನೀಡಿದ ವಿರಾಟ್ ಹೇಳಿದ್ದೇನು?

‘ನನಗೆ ಭಾರತಕ್ಕಿಂತ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಬ್ಯಾಟ್ಸಮನ್ ಗಳು ಇಷ್ಟ’ ಎಂದು ಹೊಗಳಿ ಮಾತನಾಡಿದ ಅಭಿಮಾನಿಯೊಬ್ಬನಿಗೆ ಕೊಹ್ಲಿ ‘ಭಾರತ ಬಿಟ್ಟು ಹೋಗು’ ಎಂದು ಹೇಳಿದ್ದು ವಿವಾದ ಸೃಷ್ಟಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಕ್ಯಾಪ್ಟನ್ ಕೊಹ್ಲಿ ಹೇಳಿಕೆಯ ಬಗ್ಗೆ ಸಾಕಷ್ಟು ಪರ-ವಿರೋಧ ಚರ್ಚೆ ನಡೆದಿದ್ದು, ಹಲವರಿಂದ ಟೀಕೆ ವ್ಯಕ್ತವಾಗಿದೆ. ಇದೀಗ ಈ ವಿವಾದದ ಬಗ್ಗೆ ವಿರಾಟ್ ಕೊಹ್ಲಿ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.

‘ ಆ ವ್ಯಕ್ತಿ ತನ್ನ ಕಮೆಂಟ್ ನಲ್ಲಿ ‘ದೀಸ್ ಇಂಡಿಯನ್ಸ್’ ಎಂದು ಹೇಳಿದ ರೀತಿಯ ಬಗ್ಗೆಯಷ್ಟೇ ನಾನು ಮಾತನಾಡಿದ್ದೆ. ನಾನು ಸಂಪೂರ್ಣವಾಗಿ ‘ವೈಯಕ್ತಿಕ ಆಯ್ಕೆಯ ಸ್ವಾತಂತ್ರ್ಯ’ ದ ಪರವಾಗಿಯೇ ಇದ್ದೇನೆ. ಎಲ್ಲರೂ ಹಬ್ಬದ ಸೀಸನ್ ಅನ್ನು ಎಂಜಾಯ್ ಮಾಡಿ, ಲವ್ ಆ್ಯಂಡ್ ಪೀಸ್ ಟು ಆಲ್ ‘ ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ.

‘ ಕೊಹ್ಲಿ ಒಬ್ಬ ಓವರ್ ರೇಟೆಡ್ ಬ್ಯಾಟ್ಸಮನ್, ಆತನ ಬ್ಯಾಟಿಂಗ್ ನಲ್ಲಿ ಅಂತಹ ವಿಶೇಷವೇನೂ ಇಲ್ಲ. ನಾನು ಈ ಭಾರತೀಯ ಆಟಗಾರರಿಗಿಂತ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಬ್ಯಾಟ್ಸಮನ್ ಗಳನ್ನು ನೋಡುವುದನ್ನು ಇಷ್ಟಪಡುತ್ತೇನೆ ‘ ಎಂದು ಅಭಿಮಾನಿಯೊಬ್ಬರು ಕಮೆಂಟ್ ಮಾಡಿದ್ದರು.

ಅಭಿಮಾನಿಯ ಮಾತುಗಳಿಗೆ ವಿಡಿಯೋ ಮೂಲಕ ಉತ್ತರಿಸಿದ್ದ ವಿರಾಟ್ ‘ ಓಕೆ, ಅಂದಮೇಲೆ ನೀವು ಭಾರತದಲ್ಲಿ ಇರಬೇಕೆಂದು ನನಗನಿಸುವುದಿಲ್ಲ. ನೀವು ಬೇರೆಲ್ಲಾದರೂ ಹೋಗಿ ನೆಲೆಸನಬಹುದಲ್ಲವೇ..? ನೀವು ಬೇರೆ ದೇಶಗಳನ್ನು ಪ್ರೀತಿಸುತ್ತ ನಮ್ಮ ದೇಶದಲ್ಲಿ ಏಕೆ ವಾಸಿಸುತ್ತಿದ್ದೀರಿ..? ನೀವು ನನ್ನನ್ನು ಇಷ್ಟ ಪಡದೇ ಇರುವುದಕ್ಕೆ ಅಭ್ಯಂತರವೇನೂ ಇಲ್ಲ, ಆದರೆ ನೀವು ನಮ್ಮ ದೇಶದಲ್ಲಿದ್ದು, ಬೇರೆಯದನ್ನು ಇಷ್ಟಪಡಬೇಕೆಂದು ನನಗನಿಸುವುದಿಲ್ಲ, ನಿಮ್ಮ ಆದ್ಯತೆಗಳನ್ನು ಸರಿಪಡಿಸಿಕೊಳ್ಳಿ ‘ ಎಂದು ಹೇಳಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com